MLA Prasant Kumar Jagdev  Facebook
ಸುದ್ದಿಗಳು

ಬಿಜೆಡಿ ಶಾಸಕನಿಗೆ ಸುಪ್ರೀಂ ಕೋರ್ಟ್ ಜಾಮೀನು: ಒಂದು ವರ್ಷ ಕ್ಷೇತ್ರಕ್ಕೆ ಭೇಟಿ ನೀಡದಂತೆ, ಸಮಾವೇಶ ನಡೆಸದಂತೆ ತಾಕೀತು

ಶಾಸಕ ತನ್ನ ವಿಧಾನಸಭಾ ಕ್ಷೇತ್ರ ಚಿಲಿಕಾಗೆ ಭೇಟಿ ನೀಡಲು ಬಯಸಿದರೆ ಅವರು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಹೇಳಿತು.

Bar & Bench

ರಸ್ತೆ ರಂಪ ಪ್ರಕರಣವೊಂದರಲ್ಲಿ ಬಂಧಿತರಾಗಿದ್ದ ಬಿಜು ಜನತಾ ದಳ (ಬಿಜೆಡಿ) ಶಾಸಕ ಪ್ರಶಾಂತ್ ಕುಮಾರ್ ಜಗದೇವ್ ಅವರಿಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಜಾಮೀನು ನೀಡಿದ್ದು ಒಂದು ವರ್ಷ ಕಾಲ ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಬಾರದು, ಯಾವುದೇ ಸಾರ್ವಜನಿಕ ಸಭೆ ಸಮಾವೇಶ ನಡೆಸಬಾರದು ಎಂಬ ಷರತ್ತು ವಿಧಿಸಿದೆ. [ಪ್ರಶಾಂತ್ ಕುಮಾರ್ ಜಗದೇವ್ ವಿರುದ್ಧ ಒಡಿಶಾ ಸರ್ಕಾರ ನಡುವಣ ಪ್ರಕರಣ].

ಶಾಸಕ ಪ್ರಶಾಂತ್‌ ಕುಮಾರ್‌ ಜಗದೇವ್‌ ತನ್ನ ವಿಧಾನಸಭಾ ಕ್ಷೇತ್ರ ಚಿಲಿಕಾಗೆ ಭೇಟಿ ನೀಡಲು ಬಯಸಿದರೆ ಅವರು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರಿದ್ದ ವಿಭಾಗೀಯ ಪೀಠ ಹೇಳಿತು.ಅಕ್ರಮ ಹಣ ವರ್ಗಾವಣೆ: ಸಚಿನ್‌ ನಾರಾಯಣ್‌, ಆಂಜನೇಯ ಸೇರಿ ನಾಲ್ವರ ಜಾಮೀನು ತೀರ್ಪು ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

ಗುಂಪೊಂದರ ಮೇಲೆ ಕಾರು ಹರಿಸಿದ ಆರೋಪ ಬಿಜೆಡಿ ಶಾಸಕ ಪ್ರಶಾಂತ್‌ ಅವರ ಮೇಲಿದ್ದು ಪರಿಣಾಮ ಹಲವರು ಗಾಯಗೊಂಡಿದ್ದರು. ಆದರೆ ಗಾಯಗೊಂಡ ಇಪ್ಪತ್ತು ಮಂದಿಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಇತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಮ್ಮ ಕ್ರಾಸ್‌ ಎಫ್‌ಐಆರ್‌ನಲ್ಲಿ ಅವರು ವಾದಿಸಿದ್ದರು.

ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿ ಜಗದೇವ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ನೀಡುವುದು ಸೂಕ್ತವೆಂದು ಪೀಠ ಪರಿಗಣಿಸಿತು. ಆದರೆ ಶಾಸಕರ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಠಿಣ ಷರತ್ತುಗಳನ್ನು ವಿಧಿಸಲಾಯಿತು ಮಾತ್ರವಲ್ಲ, ಸಾಕ್ಷಿಗಳ ಮೇಲೆ ನೇರ ಅಥವಾ ಪರೋಕ್ಷ ಪ್ರಭಾವ ಬೀರದಂತೆ ಎಚ್ಚರಿಸಿತು. ಇದಲ್ಲದೆ ಜಾಮೀನಿಗೆ ಸಂಬಂಧಿಸಿದಂತೆ ಬೇರೆ ಷರತ್ತುಗಳನ್ನು ವಿಧಿಸಲು ವಿಚಾರಣಾ ನ್ಯಾಯಾಲಯ ಸ್ವತಂತ್ರ ಎಂದು ಅದು ಸ್ಪಷ್ಟಪಡಿಸಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Prasant_Kumar_Jagdev_v_State_of_Odisha.pdf
Preview