ಸುದ್ದಿಗಳು

ಇಂಗ್ಲಿಷ್ ಸ್ಟೆನೋಗ್ರಾಫರ್ ಇಲ್ಲದ ಕಾರಣ ಆದೇಶ ನೀಡಲಾಗುತ್ತಿಲ್ಲ ಎಂದ ದೆಹಲಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ

ಹಿಂದಿ ಸ್ಟೆನೊ ಇದ್ದರೂ ಅವರು ಇಂಗ್ಲಿಷ್ನಲ್ಲಿ ಟೈಪ್ ಮಾಡಲು ಸಾಧ್ಯವಿಲ್ಲ ಇದರಿಂದ ತಾನು ಮಾನಸಿಕ ಒತ್ತಡಕ್ಕೆ ಒಳಗಾಗುವುದಾಗಿ ಆಯೋಗಕ್ಕೆ ಪತ್ರಬರೆದಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

Bar & Bench

ಇಂಗ್ಲಿಷ್‌ ಸ್ಟೆನೋಗ್ರಾಫರ್‌ ಒಬ್ಬರು ಮತ್ತೆ ಕರ್ತವ್ಯಕ್ಕೆ ಹಾಜರಾಗುವವರೆಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ದೆಹಲಿಯ ಗ್ರಾಹಕರ ವೇದಿಕೆಯೊಂದು ಇತ್ತೀಚೆಗೆ ದಾಖಲಿಸಿದೆ.

ತನ್ನ ಬಳಿ ದೆಹಲಿ ಪಾಲಿಕೆಯ (ಎಂಸಿಡಿ) ಚುನಾವಣಾಧಿಕಾರಿ ಕಚೇರಿಯಿಂದ ವಿನಂತಿ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಇಂಗ್ಲಿಷ್‌ ಸ್ಟೆನೊ ಮಾತ್ರ ಇರುವುದಾಗಿ ವಾದಗಳಿಗೆ ನಿಗದಿಪಡಿಸಿದ ಪ್ರಕರಣವೊಂದರಲ್ಲಿ ಸುಖವೀರ್ ಸಿಂಗ್ ಮಲ್ಹೋತ್ರಾ ಅವರ ಅಧ್ಯಕ್ಷತೆಯ ಪೂರ್ವ ದೆಹಲಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗದ ಪೀಠ ಉಲ್ಲೇಖಸಿದೆ.

ವೈಯಕ್ತಿಕ ಸಹಾಯಕರಾಗಿರುವ ಹಿಂದಿ ಸ್ಟೆನೊ ಇದ್ದರೂ ಅವರು ʼಇಂಗ್ಲಿಷ್‌ನಲ್ಲಿ ಟೈಪ್‌ ಮಾಡಲು ಸಾಧ್ಯವಿಲ್ಲ ಇದರಿಂದ ತಾನು ಮಾನಸಿಕ ಒತ್ತಡಕ್ಕೆ ಒಳಗಾಗುವುದಾಗಿʼ ಆಯೋಗಕ್ಕೆ ಪತ್ರಬರೆದಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಉಳಿದ ಹಿಂದಿ ಸ್ಟೆನೋಗಳು ಹೊಸಬರಾಗಿದ್ದು ಇಂಗ್ಲಿಷ್‌ನಲ್ಲಿ  ಉಕ್ತಲೇಖ (ಡಿಕ್ಟೇಷನ್‌) ನೀಡಿದಾಗ  ಅವರಿಗೆ ಟೈಪ್‌ ಮಾಡಲು  ಸಾಧ್ಯವಾಗುತ್ತಿಲ್ಲ ಎಂದ ಅದು ಹೇಳಿದೆ.

ಆದ್ದರಿಂದ, ಇಂಗ್ಲಿಷ್ ಸ್ಟೆನೋ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಉಕ್ತಲೇಖ ಬರೆದುಕೊಳ್ಳುವವರಿಗೆ ತಾನು ಆದೇಶ ಮಾಡಲು ಸಾಧ್ಯವಿಲ್ಲ ಎಂದು ಆಯೋಗ ತನ್ನ ಆದೇಶದಲ್ಲಿ ದಾಖಲಿಸಿದೆ.  

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Kuldeep_Singh_vs_MS_One_Cargo_Movers___Packers___Ors_.pdf
Preview