ರೆಸ್ಟೊರಂಟ್ ಸೇವಾ ಶುಲ್ಕ ಸ್ವಯಂಪ್ರೇರಿತವಾಗಿ ಕೊಡುವಂಥದ್ದು, ಗ್ರಾಹಕರ ಮೇಲೆ ಹೇರುವಂತಿಲ್ಲ: ಕೊಲ್ಕತ್ತಾ ಗ್ರಾಹಕ ಆಯೋಗ

ಸೇವಾ ಶುಲ್ಕವನ್ನು ಪಾವತಿಸುವಂತೆ ದೂರುದಾರರಿಗೆ ರೆಸ್ಟೋರೆಂಟ್ ಒತ್ತಾಯಿಸಿದ್ದು ಅಕ್ರಮ, ಅಸಮರ್ಪಕ ಹಾಗೂ ಕಾನೂನಿಗೆ ವಿರುದ್ಧ ಎಂದು ಆಯೋಗ ತೀರ್ಪು ನೀಡಿದೆ.
Restaurant

Restaurant

ರೆಸ್ಟೊರಂಟ್‌ಗಳು ಗ್ರಾಹಕರ ಮೇಲೆ ಬಲವಂತವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂದು ಕೊಲ್ಕತ್ತಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಇತ್ತೀಚೆಗೆ ತೀರ್ಪು ನೀಡಿದ್ದು ಪರಿಹಾರ ಮೊತ್ತದೊಂದಿಗೆ ಗ್ರಾಹಕರಿಂದ ವಸೂಲಿ ಮಾಡಿದ್ದ ಸೇವಾ ಶುಲ್ಕ ಹಿಂತಿರುಗಿಸುವಂತೆ ರೆಸ್ಟೊರಂಟ್ ಮಾಲೀಕರಿಗೆ ನಿರ್ದೇಶಿಸಿದೆ.

ಕೇಂದ್ರ ಸರ್ಕಾರ ಹೊರಡಿಸಿದ ನ್ಯಾಯಯುತ ವ್ಯಾಪಾರ ಅಭ್ಯಾಸ ಮಾರ್ಗಸೂಚಿಗಳ ಪ್ರಕಾರ ರೆಸ್ಟೊರಂಟ್ ಸೇವಾ ಶುಲ್ಕ ಎಂಬುದು ಸ್ವಂಪೂರ್ಣ ಸ್ವಯಂಪ್ರೇರಿತವಾಗಿ ಕೊಡುವಂಥದ್ದೇ ಹೊರತು ಕಡ್ಡಾಯವಲ್ಲ ಎಂದು ಅಧ್ಯಕ್ಷ ಸ್ವಪನ್ ಕುಮಾರ್ ಮಹಾಂತಿ ಮತ್ತು ಸದಸ್ಯ ಅಶೋಕ್ ಕುಮಾರ್ ಗಂಗೂಲಿ ಅವರಿದ್ದ ಪೀಠ ತೀರ್ಪು ನೀಡಿದೆ. ಸೇವಾ ಶುಲ್ಕವನ್ನು ಪಾವತಿಸುವಂತೆ ದೂರುದಾರರಿಗೆ ರೆಸ್ಟೋರೆಂಟ್‌ ಒತ್ತಾಯಿಸಿದ್ದು ಅಕ್ರಮ ಅಸಮರ್ಪಕ ಹಾಗೂ ಕಾನೂನಿಗೆ ವಿರುದ್ಧ ಎಂದು ಅದು ಹೇಳಿದೆ.

Also Read
ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕ ಆಯೋಗಗಳ ಹಣಕಾಸು ವ್ಯಾಪ್ತಿ ಪರಿಷ್ಕರಿಸಿದ ಕೇಂದ್ರ ಸರ್ಕಾರ

2018 ರ ಕೊನೆಯಲ್ಲಿ ದೂರುದಾರ ಮತ್ತು ಸ್ನೇಹಿತರು ಹೋಟೆಲೊಂದರಲ್ಲಿ ರಾತ್ರಿ ಊಟ ಮಾಡಿದ್ದರು. ಆದರೆ ಸೇವಾಶುಲ್ಕ ವಿಧಿಸುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದಾಗ ಹೋಟೆಲ್‌ ವ್ಯವಸ್ಥಾಪಕರು ತಮ್ಮ ರೆಸ್ಟೊರಂಟ್‌ನಲ್ಲಿ ಸೇವಾ ಶುಲ್ಕ ಕಡ್ಡಾಯ ಎಂದಿದ್ದರು. ಘರ್ಷಣೆ ತಪ್ಪಿಸಲು ಹಣ ಪಾವತಿಸಿ ಹೊರಬಂದಿದ್ದ ದೂರುದಾರರು ನಂತರ ಹೋಟೆಲ್‌ಗೆ ಕಾನೂನು ರೀತ್ಯಾ ನೋಟಿಸ್‌ ಜಾರಿ ಮಾಡಿದ್ದರು. ಹೋಟೆಲ್‌ ಮಾಲಿಕರು ಕ್ಷಮೆ ಯಾಚಿಸಿ ₹25,000 ಪರಿಹಾರ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದರು. ನೋಟಿಸ್‌ ನೀಡಿದ್ದರೂ ಹೊಟೆಲ್‌ ಮಾಲೀಕರು ಪ್ರತಿಕ್ರಿಯೆ ನೀಡಿದ್ದಾಗ ರೆಸ್ಟೊರಂಟ್‌ ವಿರುದ್ಧ ತ್ವರಿತ ಗ್ರಾಹಕ ಪ್ರಕರಣ ದಾಖಲಿಸಲಾಗಿತ್ತು.

ಗ್ರಾಹಕ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯದ ನಿರ್ದೇಶನಗಳಿಗೆ ರೆಸ್ಟೊರಂಟ್‌ ನಡೆ ವಿರುದ್ಧವಾಗಿದೆ ಎಂದ ಪೀಠ 30 ದಿನಗಳಲ್ಲಿ ದೂರುದಾರರಿಗೆ ಸೇವಾ ಶುಲ್ಕವನ್ನು ಪೂರ್ಣ ಪ್ರಮಾಣದಲ್ಲಿ ಮರಳಿಸಬೇಕು. ಪರಿಹಾರ ಮತ್ತು ದಾವೆ ಶುಲ್ಕದ ರೂಪದಲ್ಲಿ ₹ 13,000 ಪಾವತಿಸಬೇಕು ಎಂದು ಆದೇಶಿಸಿತು.

Related Stories

No stories found.
Kannada Bar & Bench
kannada.barandbench.com