Justices Ramasubramanian, BR Gavai, Abdul Nazeer,  AS Bopanna, BV Nagarathna
Justices Ramasubramanian, BR Gavai, Abdul Nazeer, AS Bopanna, BV Nagarathna  
ಸುದ್ದಿಗಳು

ಸುಪ್ರೀಂ ಕೋರ್ಟ್‌ನಿಂದ ನಾಲ್ಕನೆಯ ಸಾಂವಿಧಾನಿಕ ಪೀಠದ ರಚನೆ: 5 ಪ್ರಕರಣಗಳನ್ನು ಆಲಿಸಲಿರುವ ನ್ಯಾಯಾಲಯ

Bar & Bench

ನೋಟು ಅಮಾನ್ಯೀಕರಣ, ಸರ್ಕಾರಿ ಅಧಿಕಾರಿಗಳ ವಾಕ್‌ ಸ್ವಾತಂತ್ರ್ಯ ಸೇರಿದಂತೆ ಸಾಂವಿಧಾನಿಕ ಪ್ರಶ್ನೆಗಳ ಇತ್ಯರ್ಥ ಬಯಸಿರುವ ಐದು ಪ್ರಕರಣಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ನಾಲ್ಕನೇ ಸಾಂವಿಧಾನಿಕ ಪೀಠ ರಚಿಸಿದೆ.

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಹಾಗೂ ಬಿ ವಿ ನಾಗರತ್ನ ಅವರನ್ನು ಒಳಗೊಂಡ ಪೀಠ ಈ ಕೆಳಗಿನ ಪ್ರಕರಣಗಳನ್ನು ಆಲಿಸಲಿದೆ:

- ನೋಟು ಅಮಾನ್ಯೀಕರಣದ ವಿರುದ್ಧ ಸಲ್ಲಿಸಿರುವ ಮನವಿ [ವಿವೇಕ್ ನಾರಾಯಣ ಶರ್ಮಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

- ಸಾರ್ವಜನಿಕ/ಸರ್ಕಾರಿ ಅಧಿಕಾರಿಗಳ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣ [ಕೌಶಲ್ ಕಿಶೋರ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

- ಶಾಸಕಾಂಗ ಸಭೆಯ ಸದಸ್ಯರು (ಸಂವಿಧಾನದ 194(2)ನೇ ವಿಧಿ ಅಡಿಯಲ್ಲಿ) ಶಾಸನಸಭೆಯಲ್ಲಿ ನೀಡಿದ ಯಾವುದೇ ಮತಕ್ಕೆ ಸಂಬಂಧಿಸಿದಂತೆ ಅವರಿಗೆ ಒದಗಿಸಲಾದ ರಕ್ಷಣೆ ಲಂಚ ತೆಗೆದುಕೊಂಡಾಗ ಕಾನೂನು ಕ್ರಮ ಕೈಗೊಳ್ಳುವುದರ ವಿರುದ್ಧವೂ ರಕ್ಷಣೆ ನೀಡುತ್ತದೆಯೇ ಎಂದು ಪ್ರಶ್ನಿಸಿರುವ ಅರ್ಜಿ [ಸೀತಾ ಸೊರೆನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

- ಸಿಆರ್‌ಪಿಸಿ ಸೆಕ್ಷನ್‌ 319ಕ್ಕೆ ಸಂಬಂಧಿಸಿದ ಪ್ರಕರಣ [ಸುಖಪಾಲ್ ಸಿಂಗ್ ಖೈರಾ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣ].

- ಲಂಚದ ಬಗ್ಗೆ ದೂರುದಾರರ ನೇರ ಅಥವಾ ಪ್ರಾಥಮಿಕ ಪುರಾವೆಗಳು ಇಲ್ಲದಿದ್ದಾಗ ಭ್ರಷ್ಟಾಚಾರ ತಡೆ ಕಾಯಿದೆ, 1988ರ ಸೆಕ್ಷನ್ 13(2) ಸಹವಾಚನ ಸೆಕ್ಷನ್ 7 ಮತ್ತು ಸೆಕ್ಷನ್ 13(1)(ಡಿ) ತಪ್ಪಿತಸ್ಥರ ಕುರಿತು ತರ್ಕಾತ್ಮಕ ತೀರ್ಮಾನ ಕೈಗೊಳ್ಳಲು ಅನುಮತಿ ಇಲ್ಲವೇ ಎಂದು ಪ್ರಶ್ನಿಸಿರುವ ಅರ್ಜಿ [ನೀರಜ್‌ ದತ್ತಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಸಾಂವಿಧಾನಿಕ ಪೀಠದ ಕಲಾಪಗಳ ನೇರ ಪ್ರಸಾರವನ್ನು ಸುಪ್ರೀಂ ಕೋರ್ಟ್ ಇಂದಿನಿಂದ (ಮಂಗಳವಾರ) ಆರಂಭಿಸಿದೆ.