Liquor  Image for representative purpose
ಸುದ್ದಿಗಳು

ʼಸಿಲ್ಲಿ ಸೋಲ್ಸ್ ಕೆಫೆʼ ಪರವಾನಗಿ ಅಮಾನತಿಗೆ ಗೋವಾ ಅಬಕಾರಿ ಆಯುಕ್ತರ ನಕಾರ

ಸಣ್ಣಪುಟ್ಟ ವಿಷಯಗಳ ಕಾರಣಕ್ಕೆ ಮದ್ಯ ಪರವಾನಗಿಯನ್ನು ಅಮಾನತುಗೊಳಿಸಿದರೆ ಅಥವಾ ರದ್ದುಗೊಳಿಸಿದರೆ, ಅದು ವ್ಯವಹಾರಕ್ಕೆ ಅಡ್ಡಿಯಾಗುವುದಲ್ಲದೆ ಸರ್ಕಾರದ ಆದಾಯದ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ ಆಯುಕ್ತರು.

Bar & Bench

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಂಬಂಧಿಗಳು ಪಾಲು ಹೊಂದಿದ್ದಾರೆ ಎನ್ನಲಾದ ಗೋವಾದ ಸಿಲ್ಲಿ ಸೋಲ್ಸ್ ಕೆಫೆ ಮತ್ತು ಬಾರ್‌ ಮಾಲೀಕರಿಗೆ ನೀಡಲಾದ ಮದ್ಯದ ಪರವಾನಗಿ ರದ್ದುಗೊಳಿಸಲು ಪಣಜಿಯ ಅಬಕಾರಿ ಆಯುಕ್ತರು ಇಂದು ನಿರಾಕರಿಸಿದ್ದಾರೆ [ವಕೀಲರಾದ ಐರಿಸ್ ರೋಡ್ರಿಗಸ್ ಮತ್ತು ಆಂಟನಿ. ಡಿ ಗಾಮಾ ಇನ್ನಿತರರ ನಡುವಣ ಪ್ರಕರಣ].

ಎಯ್ಟಾಲ್ ಫುಡ್ ಅಂಡ್ ಬಿವರೇಜಸ್ ಲಿಮಿಟೆಡ್ ಹೊಣೆಗಾರಿಕೆ ಪಾಲುದಾರಿಕೆಯು ಕೆಫೆಯನ್ನು ನಡೆಸುತ್ತಿದೆ ಎನ್ನಲಾಗಿದ್ದು ಇದು ಮಾಲೀಕರಾದ ಡಿ'ಗಾಮಾ ಕುಟುಂಬದೊಂದಿಗೆ ಗುತ್ತಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇರಾನಿ ಅವರ ಸಂಬಂಧಿಕರು ಎಲ್‌ಎಲ್‌ಪಿಯಲ್ಲಿ ಹೂಡಿಕೆ ಮಾಡಿದ್ದಾರೆ.

ಮದ್ಯಕ್ಕೆ ವಿಧಿಸುವ ಅಬಕಾರಿ ತೆರಿಗೆ ರಾಜ್ಯದ ಪ್ರಮುಖ ಆದಾಯಗಳಲ್ಲಿ ಒಂದಾಗಿದ್ದು ಸಣ್ಣಪುಟ್ಟ ವಿಷಯಗಳ ಕಾರಣಕ್ಕೆ ಮದ್ಯ ಪರವಾನಗಿಯನ್ನು ಅಮಾನತುಗೊಳಿಸಿದರೆ ಅಥವಾ ರದ್ದುಗೊಳಿಸಿದರೆ, ಅದು ವ್ಯವಹಾರಕ್ಕೆ ಅಡ್ಡಿಯಾಗುವುದಲ್ಲದೆ ಸರ್ಕಾರದ ಆದಾಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಕಮಿಷನರ್ ನಾರಾಯಣ್ ಎಂ ಗದ್‌ ಅವರು ತಿಳಿಸಿದ್ದಾರೆ.

ಸಿಲ್ಲಿ ಸೋಲ್ಸ್‌ನ ಪರವಾನಗಿಯನ್ನು ಅಕ್ರಮ ಮಾರ್ಗದಿಂದ, ತಿರುಚಿದ ದಾಖಲೆಗಳಿಂದ ಪಡೆಯಲಾಗಿದೆ. ಪರವಾನಗಿದಾರರು ಮೃತರಾಗಿರುವುದರಿಂದ ಅಧಿಕಾರ ಪತ್ರ (ಪವರ್‌ ಆಫ್‌ ಅಟಾರ್ನಿ) ಮೌಲ್ಯ ಕಳೆದುಕೊಂಡಿದ್ದರೂ ಅದನ್ನು ಬಳಸಿ ಪರವಾನಗಿ ಮರುನವೀಕರಣ ಮಾಡಿಕೊಳ್ಳಲಾಗಿದೆ ಎಂದು ದೂರುದಾರರು ಆಪಾದಿಸಿದ್ದರು.

ವಿವರವಾದ ವಿಚಾರಣೆಯ ನಂತರ, ಕಮಿಷನರ್ ಅವರು ಅರ್ಜಿದಾರರು ತಮ್ಮ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರ ಆಧಾರದ ಮೇಲೆ ಅಬಕಾರಿ ಪರವಾನಗಿ ನೀಡಲಾಗಿದೆ. ಅಲ್ಲದೆ ಅಬಕಾರಿ ಅಧಿಕಾರಿಗಳ ಮುಂದೆ ಪವರ್ ಆಫ್ ಅಟಾರ್ನಿ ಹಾಜರುಪಡಿಸಿಲ್ಲ ಎಂಬ ಲೋಪ ಅಬಕಾರಿ ಪರವಾನಗಿ  ರದ್ದುಗೊಳಿಸಲು ಕಾರಣವಾಗದು ಎಂದು  ತೀರ್ಮಾನಿಸಿದರು.