<div class="paragraphs"><p>Justice Anil K Narendran and Justice PG Ajithkumar</p></div>

Justice Anil K Narendran and Justice PG Ajithkumar

 
ಸುದ್ದಿಗಳು

ಬ್ರಾಹ್ಮಣರ ಪಾದಪೂಜೆ: ಸುದ್ದಿ ಆಧರಿಸಿ ಕೇರಳ ಹೈಕೋರ್ಟ್ ಸ್ವಯಂಪ್ರೇರಿತ ವಿಚಾರಣೆ, ಘಟನೆ ಅಲ್ಲಗಳೆದ ದೇವಸ್ವಂ

Bar & Bench

ತ್ರಿಪುಣಿತುರಾದ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ ಭಕ್ತರು ತಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಹನ್ನೆರಡು ಬ್ರಾಹ್ಮಣರ ಪಾದ ತೊಳೆದಿರುವ ಸಂಬಂಧ ಮಲಯಾಳಂ ದೈನಿಕ ʼಕೇರಳ ಕೌಮುದಿʼಯಲ್ಲಿ ಪ್ರಕಟವಾದ ಸುದ್ದಿ ಆಧರಿಸಿ ಕೇರಳ ಹೈಕೋರ್ಟ್ ಮಂಗಳವಾರ ಸ್ವಯಂಪ್ರೇರಿತ ವಿಚಾರಣೆ ಆರಂಭಿಸಿದೆ.

ಕೊಚ್ಚಿ ದೇವಸ್ವಂ ಮಂಡಳಿಯ ಆಡಳಿತದಲ್ಲಿರುವ ದೇಗುಲದಲ್ಲಿ ʼಪಂತ್ರಂದು ನಮಸ್ಕಾರʼದ ಅಂಗವಾಗಿ ಪಾಪ ಪ್ರಾಯಶ್ಚಿತ್ತಕ್ಕಾಗಿ 12 ಬ್ರಾಹ್ಮಣರ ಪಾದಗಳನ್ನು ಭಕ್ತರು ತೊಳೆದಿದ್ದಾರೆ ಎಂದು ಫೆಬ್ರವರಿ 4 ರಂದು ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ ಜಿ ಅಜಿತ್‌ಕುಮಾರ್ ಅವರಿದ್ದ ಪೀಠ ತಿಳಿಸಿತು.

ಆದರೆ ಕೊಚ್ಚಿ ದೇವಸ್ವಂ ಮಂಡಳಿಯ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುದ್ದಿಯಲ್ಲಿ ವರದಿಯಾಗಿರುವಂತೆ ದೇವಸ್ಥಾನದಲ್ಲಿ 12 ಪೂಜಾರಿಗಳ ಪಾದ ತೊಳೆಯುವುದು ಭಕ್ತರಲ್ಲ ಬದಲಿಗೆ ತಂತ್ರಿ ಎಂದು ಪೀಠವು ದಾಖಲಿಸಿಕೊಂಡಿತು. ಈ ಸಂಬಂಧ ಅಫಿಡವಿಟ್‌ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡುವಂತೆ ಕೋರಿದ ದೇವಸ್ವಂಗೆ ಅನುಮತಿಸಿದ ಪೀಠವು ಫೆ. 25ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತು.

ಆದೇಶವನ್ನು ಇಲ್ಲಿ ಓದಿ:

Suo_Motu_v__State_of_Kerala.pdf
Preview