Kerala High Court, Woman Judge 
ಸುದ್ದಿಗಳು

ಮಹಿಳಾ ನ್ಯಾಯಾಂಗ ಅಧಿಕಾರಿಗಳ ವಸ್ತ್ರ ಸಂಹಿತೆ ಮಾರ್ಪಡಿಸಿದ ಕೇರಳ ಹೈಕೋರ್ಟ್

ಬದಲಾಗುತ್ತಿರುವ ಹವಾಮಾನ ಮತ್ತು ನ್ಯಾಯಾಲಯಗಳಲ್ಲಿನ ಮೂಲಸೌಕರ್ಯ ಕೊರತೆ ಗಮನಿಸಿ ವಸ್ತ್ರ ಸಂಹಿತೆಯಲ್ಲಿ ಮಾರ್ಪಾಡು ಮಾಡಲಾಗಿದೆ.

Bar & Bench

ಮಹಿಳಾ ನ್ಯಾಯಾಂಗ ಅಧಿಕಾರಿಗಳ ವಸ್ತ್ರ ಸಂಹಿತೆಯನ್ನು ಕೇರಳ ಹೈಕೋರ್ಟ್ ಪರಿಷ್ಕರಿಸಿದೆ.

ಈವರೆಗೆ ಕೇರಳದಲ್ಲಿ ಕಡ್ಡಾಯವಾಗಿದ್ದ ಸೀರೆ ಮತ್ತು ಕುಪ್ಪಸದ ಜೊತೆಗೆ, ನ್ಯಾಯಾಂಗ ಅಧಿಕಾರಿಗಳು ಸಲ್ವಾರ್ ಕಮೀಜ್ ಅಥವಾ ಕುಪ್ಪಸ/ಶರ್ಟ್ ಜೊತೆಗೆ ಪೂರ್ಣ ಉದ್ದದ ಪ್ಯಾಂಟ್/ಸ್ಕರ್ಟ್‌ಗಳನ್ನು ಧರಿಸಬಹುದಾಗಿದೆ.

ಆದರೆ ಬಟ್ಟೆ ಈಗಲೂ ಕಪ್ಪು ಬಿಳಿ ಬಣ್ಣದ್ದಾಗಿರಬೇಕು ಜೊತೆಗೆ "ಸಾಧಾರಣ ಮತ್ತು ಸರಳ ಮತ್ತು ನ್ಯಾಯಾಂಗ ಅಧಿಕಾರಿಯ ಘನತೆಗೆ ಸರಿಹೊಂದವಂತಿರಬೇಕು” ಎಂದು ತಿಳಿಸಲಾಗಿದೆ.

ಈ ಸಂಬಂಧ ಅಕ್ಟೋಬರ್ 7 ರಂದು ಹೈಕೋರ್ಟ್ ಸುತ್ತೋಲೆ ಹೊರಡಿಸಲಾಗಿದ್ದು ಬದಲಾಗುತ್ತಿರುವ ಹವಾಮಾನ ಮತ್ತು ನ್ಯಾಯಾಲಯಗಳಲ್ಲಿನ ಮೂಲಸೌಕರ್ಯ ಕೊರತೆಯಿಂದಾಗಿ ಮಹಿಳಾ ನ್ಯಾಯಾಂಗ ಅಧಿಕಾರಿಗಳಿಗೆ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುವ ಸಲುವಾಗಿ ವಸ್ತ್ರ ಸಂಹಿತೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

[ಸುತ್ತೋಲೆಯನ್ನು ಇಲ್ಲಿ ಓದಿ]

Kerala_High_Court_Circular.pdf
Preview