ಸುದ್ದಿಗಳು

ತಪ್ಪಾಗಿ ಟೈಟಾನ್ ವಾಣಿಜ್ಯ ಚಿಹ್ನೆ ಬಳಕೆ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಲೆನ್ಸ್‌ಕಾರ್ಟ್‌

ವಾಣಿಜ್ಯ ಚಿಹ್ನೆ ಉಲ್ಲಂಘನೆ ಮತ್ತು ಗ್ರಾಹಕರ ದಾರಿ ತಪ್ಪಿಸಿದ್ದಕ್ಕಾಗಿ ಲೆನ್ಸ್‌ಕಾರ್ಟ್‌ ವಿರುದ್ಧ ಟೈಟಾನ್ ಮೊಕದ್ದಮೆ ಹೂಡಿತ್ತು.

Bar & Bench

ಟೈಟಾನ್ ಮತ್ತು ಫಾಸ್ಟ್‌ಟ್ರ್ಯಾಕ್‌ ವಾಣಿಜ್ಯ ಚಿಹ್ನೆಯ ಜೊತೆಗೆ ಮೆಟಾಟ್ಯಾಗ್‌ಗಳನ್ನು ಅಜಾಗರೂಕವಾಗಿ ಬಳಸಿದ್ದಾಗಿ ಬಹುರಾಷ್ಟ್ರೀಯ ಕನ್ನಡಕ ಕಂಪನಿ ಲೆನ್ಸ್ಕಾರ್ಟ್ ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ [ಟೈಟಾನ್ ಕಂಪನಿ ಲಿಮಿಟೆಡ್ ಮತ್ತು ಲೆನ್ಸ್ಕಾರ್ಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ].

ಲೆನ್ಸ್‌ಕಾರ್ಟ್ ಪರ ಹಾಜರಾದ ವಕೀಲ ನಿಶ್ಚಲ್ ಆನಂದ್, ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರ ಮುಂದೆ ಈ ಹೇಳಿಕೆ ನೀಡಿದರು.

ಲೆನ್ಸ್‌ಕಾರ್ಟ್‌ಗೆ ವಾಣಿಜ್ಯ ಚಿಹ್ನೆಗಳನ್ನು ಉಲ್ಲಂಘಿಸುವ ಉದ್ದೇಶವಿರಲಿಲ್ಲ ಮತ್ತು ಕಂಪನಿ ತನ್ನ ಜಾಲತಾಣದಿಂದ ಟೈಟಾನ್‌ನ ಎಲ್ಲಾ ಉಲ್ಲೇಖಗಳನ್ನು ತೆಗೆದುಹಾಕಲು ಕ್ರಮ ತೆಗೆದುಕೊಂಡಿದೆ ಎಂದು ಆನಂದ್ ಹೇಳಿದರು.

ಲೆನ್ಸ್‌ಕಾರ್ಟ್ ತನ್ನ ಜಾಲತಾಣದಲ್ಲಿ 'ಟೈಟಾನ್', 'ಟೈಟಾನ್ ಐ+' ಮತ್ತು 'ಫಾಸ್ಟ್‌ಟ್ರ್ಯಾಕ್‌' ನಂತಹ ನೋಂದಾಯಿತ ಚಿಹ್ನೆಗಳನ್ನು ಬಳಸುತ್ತಿದೆ ಜೊತೆಗೆ ಜಾಲತಾಣ ಮೂಲ ಕೋಡ್‌ಗೆ ಮೆಟಾಟ್ಯಾಗ್‌ಗಳಾಗಿ ಬಳಸುತ್ತಿದೆ ಎಂದು ಆರೋಪಿಸಿ ಟೈಟಾನ್ ನ್ಯಾಯಾಲಯದ ಮೆಟ್ಟಿಲೇರಿತ್ತು.

ಲೆನ್ಸ್‌ಕಾರ್ಟ್‌ ವಾಣಿಜ್ಯ ಚಿಹ್ನೆ ಉಲ್ಲಂಘನೆ ಮತ್ತು ಅಪಪ್ರಚಾರ ತಡೆಯಲು ಅದು ಶಾಶ್ವತ ನಿರ್ಬಂಧಕಾಜ್ಞೆ ನೀಡುವಂತೆ ಕೋರಿತ್ತು.

ಲೆನ್ಸ್‌ಕಾರ್ಟ್‌ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರು ಒಪ್ಪಿಗೆ ತೀರ್ಪು ನೀಡುವ ಮೂಲಕ ಮೊಕದ್ದಮೆ ವಿಲೇವಾರಿ ಮಾಡಿದರು.ಲೆನ್ಸ್‌ಕಾರ್ಟ್‌ ತನ್ನ ಹೇಳಿಕೆಗೆ ಬದ್ಧವಾಗಿರಬೇಕು ಎಂದು ನ್ಯಾಯಾಲಯ ತಿಳಿಸಿತು.

[ಆದೇಶದ ಪ್ರತಿ]

Titan_Company_Limited_Vs_Lenskart_Solutions_Private_Limited___Anr.pdf
Preview