Spice Jet

 
ಸುದ್ದಿಗಳು

ಕಂಪೆನಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸ್ಪೈಸ್‌ಜೆಟ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಸ್ಪೈಸ್‌ಜೆಟ್‌ ಪರವಾಗಿ ಯಾವುದೇ ಪ್ರಾಮಾಣಿಕ ವಾದ ಕಾಣಲಿಲ್ಲ ಎಂದ ನ್ಯಾಯಾಲಯ ಮೇಲ್ಮನವಿಯನ್ನು ವಜಾಗೊಳಿಸಿತು.

Bar & Bench

ಸ್ಪೈಸ್‌ಜೆಟ್‌ ಮುಚ್ಚುವಿಕೆ ಅರ್ಜಿ ಅಂಗೀಕರಿಸಿ ಅಧಿಕೃತ ತೀರುವಳಿದಾರರನ್ನು (ಲಿಕ್ವಿಡೇಟರ್‌) ನೇಮಿಸಿದ್ದ ಕಂಪೆನಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಖಾಸಗಿ ವಿಮಾನ ಯಾನ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಪರೇಶ್ ಉಪಾಧ್ಯಾಯ ಮತ್ತು ಸತಿಕುಮಾರ್ ಸುಕುಮಾರ ಕುರುಪ್ ಅವರಿದ್ದ ಪೀಠದ ಎದುರು ವಾದ ಮಂಡಿಸಿದ ಸ್ವಿಜರ್‌ಲೆಂಡ್‌ ಕಾನೂನಿನಡಿಯಲ್ಲಿ ನೋಂದಾಯಿಸಲಾದ ಷೇರು ಸಂಸ್ಥೆ, ಪ್ರಸಕ್ತ ಪ್ರಕರಣದಲ್ಲಿ ಪ್ರತಿವಾದಿಯಾದ ಕ್ರೆಡಿಟ್ ಸ್ಯೂಸ್‌ಗೆ ಸ್ಪೈಸ್‌ಜೆಟ್‌ 24 ಮಿಲಿಯನ್‌ ಡಾಲರ್‌ಗಿಂತಲೂ ಹೆಚ್ಚು ಸಾಲ ನೀಡಬೇಕಿದೆ. ನೋಟಿಸ್‌ ನೀಡಿದರೂ ಸ್ಪೈಸ್‌ಜೆಟ್‌ ಯಾವುದೇ ಪ್ರತಿಕ್ರಿಯೆ ನೀಡದ್ದರಿಂದ ತಾನು ಸಂಸ್ಥೆಯನ್ನು ಮುಚ್ಚಲು ಕೋರಿ ಅರ್ಜಿ ಸಲ್ಲಿಸಿದ್ದಾಗಿ ಕ್ರೆಡಿಟ್‌ ಸ್ಯೂಸ್‌ ತಿಳಿಸಿತ್ತು.

ಆದರೆ ಸ್ಪೈಸ್‌ಜೆಟ್‌, ತಾನು ಎಸ್ಆರ್ ಟೆಕ್ನಿಕ್ಸ್‌ಗೆ ಪಾವತಿಸಬೇಕಾದ ಮೊತ್ತದ ಬಗ್ಗೆ ಗಂಭೀರ ತರಕರಾರು ಇದೆ. ಅದು ನಾಗರಿಕ ವಿಮಾನಯಾನ ಮಹಾನಿರ್ದೇಶಕರ (ಡಿಜಿಸಿಎ) ಪರವಾನಗಿ ಪಡೆದಿಲ್ಲ. ಆದ್ದರಿಂದ ಅದು ಕಾನೂನುಬದ್ಧವಾಗಿ ವಿಮಾನವನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅದಕ್ಕೆ ಯಾವುದೇ ಹಣ ಪಾವತಿಸಬೇಕಾಗಿಲ್ಲ ಎಂದಿತು. ಪ್ರತಿವಾದಿ ಸಲ್ಲಿಸಿದ ದಾಖಲೆಗಳು ಮೊಹರಾಗಿಲ್ಲ ಹಾಗಾಗಿ ಭಾರತೀಯ ನ್ಯಾಯಾಲಯಗಳು ಅವನ್ನು ಪರಿಗಣಿಸಬಾರದು. ಈ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ ಮುಚ್ಚುವಿಕೆ ಅರ್ಜಿ ಅಂಗೀಕರಿಸಿ ಅಧಿಕೃತ ಬರಖಾಸ್ತುದಾರರನ್ನು ನೇಮಿಸಿದ್ದ ಕಂಪೆನಿ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಬೇಕು ಎಂದು ಅದು ಹೇಳಿತು.

ಆದರೆ ಈ ವಾದದಲ್ಲಿ ಹುರಳಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ದಾಖಲೆ ಮೊಹರಾಗಿವೆಯೇ ಅಲ್ಲವೇ ಎಂಬುದು ಸಮಸ್ಯೆಯಲ್ಲ. ಸಾಲವು ನ್ಯಾಯಸಮ್ಮತವಾಗಿ ವಿವಾದಿತವಾಗಿದೆಯೇ ಮತ್ತು ಸ್ಪೈಸ್‌ಜೆಟ್‌ನ ಸಮರ್ಥನೆ ಅಂಗೀಕರಿಸುವಂತಿದೆಯೇ ಎಂಬುದು ಮುಖ್ಯವಾಗಿದೆ. ಕಂಪೆನಿ ನ್ಯಾಯಾಲಯ ಮತ್ತು ಪೀಠ ಎರಡೂ ಈ ವಿಚಾರದಲ್ಲಿ ಋಣಾತ್ಮಕ ತೀರ್ಮಾನ ಕೈಗೊಂಡಿದ್ದವು ಎಂದಿತು. ಅಲ್ಲದೆ, ಸಾಲ ಪಾವತಿಗೆ ಸಂಬಂಧಿಸಿದಂತೆ ನ್ಯಾಯಸಮ್ಮತ ತಕರಾರಿದೆ ಎಂಬ ಮೇಲ್ಮನವಿದಾರರ ವಾದವನ್ನು ವಿಭಾಗೀಯ ಪೀಠ ಸಾರಾಸಗಟಾಗಿ ತಿರಸ್ಕರಿಸಿತು.

ಆದೇಶವನ್ನು ಇಲ್ಲಿ ಓದಿ:

SpiceJet_v_Credit_Suisse.pdf
Preview