ಸ್ಪೈಸ್ ಜೆಟ್ ವಿಮಾನ ಸಂಸ್ಥೆಯನ್ನು ಮುಚ್ಚುವಂತೆ ನೀಡಿದ್ದ ತನ್ನ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ಮೂರುವಾರಗಳ ತಡೆಯಾಜ್ಞೆ ನೀಡಿದೆ.
ಸ್ಪೈಸ್‌ಜೆಟ್ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ರಾಮಕೃಷ್ಣನ್ ಅವರ ಕೋರಿಕೆಯ ಮೇರೆಗೆ ಈ ತಡೆಯಾಜ್ಞೆ ನೀಡಲಾಯಿತು. ಸೋಮವಾರದಿಂದ ಎರಡು ವಾರಗಳ ಅವಧಿಯಲ್ಲಿ 5 ಮಿಲಿಯನ್ ಡಾಲರ್ ಠೇವಣಿ ಇಡುವಂತೆ ಸ್ಪೈಸ್‌ಜೆಟ್‌ಗೆ ಷರತ್ತು ವಿಧಿಸಿ ನ್ಯಾಯಮೂರ್ತಿ ಆರ್ ಸುಬ್ರಮಣಿಯನ್ ಅವರು ತಡೆಯಾಜ್ಞೆ ನೀಡಿದರು.
ಸ್ಪೈಸ್‌ಜೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆಸ್ತಿ ವಶಕ್ಕೆ ಪಡೆಯುವ ಸಲುವಾಗಿ ಅಧಿಕೃತ ಬರಖಾಸ್ತುದಾರರನ್ನು ನೇಮಿಸಬೇಕು ಎಂದು ಕೋರಿ ಸ್ವಿಜರ್‌ಲೆಂಡ್ ಕಾನೂನಿನಡಿಯಲ್ಲಿ ನೋಂದಾಯಿಸಲಾದ ಷೇರು ಸಂಸ್ಥೆ ಕ್ರೆಡಿಟ್ ಸ್ಯೂಸ್ ಮನವಿ ಮಾಡಿತ್ತು. ಇದನ್ನು ನ್ಯಾಯಾಲಯ ಪುರಸ್ಕರಿಸಿತ್ತು.