Saket Court 
ಸುದ್ದಿಗಳು

ದೆಹಲಿಯ ಸಾಕೇತ್‌ ನ್ಯಾಯಾಲಯದಲ್ಲಿ ವ್ಯಕ್ತಿಯಿಂದ ಗುಂಡಿನ ದಾಳಿ

Bar & Bench

ನವದೆಹಲಿಯ ಸಾಕೇತ್‌ ಕೋರ್ಟ್‌ ಬಳಿ ಇಂದು ಗುಂಡಿನ ದಾಳಿ ನಡೆದಿರುವ ವರದಿಯಾಗಿದೆ. ಮಹಿಳೆಯೊಬ್ಬರ ವಿರುದ್ಧ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ವಕೀಲರ ಧಿರಿಸು ಹಾಕಿಕೊಂಡು ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದಾಗ ಅದು ಗುರಿ ತಪ್ಪಿ ವಕೀಲರೊಬ್ಬರ ಕುತ್ತಿಗೆಗೆ ಗುಂಡು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಎರಡು ವರ್ಷಗಳ ಅಂತರದಲ್ಲಿ ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ವರದಿಯಾಗಿರುವ ಎರಡನೇ ಗುಂಡಿನ ದಾಳಿಯ ಘಟನೆ ಇದಾಗಿದೆ. 2021ರ ಸೆಪ್ಟೆಂಬರ್ 24ರಲ್ಲಿ ರೋಹಿಣಿ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾತಕಿ ಜಿತೇಂದ್ರ ಗೋಗಿ ಸೇರಿ ಮೂವರನ್ನು ನ್ಯಾಯಾಲಯದ ಕೊಠಡಿಯಲ್ಲಿಯೇ ಕೊಲ್ಲಲಾಗಿತ್ತು.

ವಕೀಲರ ಧಿರಿಸಿನಲ್ಲಿ ಬಂದಿದ್ದ ಇಬ್ಬರು ಕೋರ್ಟ್ ರೂಮ್‌ ನಂಬರ್‌ 207ರಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಗೋಗಿಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಪ್ರತಿದಾಳಿ ನಡೆಸಿದ್ದ ಪೊಲೀಸರು ದಾಳಿಕೋರರನ್ನು ಹತ್ಯೆ ಮಾಡಿದ್ದರು. ಆರೋಪಿ ಮತ್ತು ವಕೀಲರ ನಡುವಿನ ವೈಷಮ್ಯದ ಹಿನ್ನೆಲೆಯಲ್ಲಿ 2021ರ ಡಿಸೆಂಬರ್‌ನಲ್ಲಿ ಕಡಿಮೆ ಸಾಂದ್ರತೆಯ ಬಾಂಬ್‌ ಸ್ಫೋಟಕ್ಕೂ ರೋಹಿಣಿ ನ್ಯಾಯಾಲಯ ಸಾಕ್ಷಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.