Ratan Lal  Twitter
ಸುದ್ದಿಗಳು

ದ್ವೇಷ ಭಾವನೆ ಕೆರಳಿಸದು: ಶಿವಲಿಂಗ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಾಧ್ಯಾಪಕನಿಗೆ ದೆಹಲಿ ಹೈಕೋರ್ಟ್ ಜಾಮೀನು

ಜ್ಞಾನವಾಪಿ ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ 'ಶಿವಲಿಂಗ' ಕುರಿತು ಫೇಸ್ಬುಕ್ನಲ್ಲಿ ಹೇಳಿಕೆ ಪ್ರಕಟಿಸಿದ್ದಕ್ಕಾಗಿ ದೆಹಲಿ ಪೊಲೀಸರು ಲಾಲ್ ಅವರನ್ನು ಬಂಧಿಸಿ ಬಂಧಿಸಿದ್ದರು.

Bar & Bench

ಜ್ಞಾನವಾಪಿ ಮಸೀದಿ ಕುರಿತು ನ್ಯಾಯಾಲಯದಲ್ಲಿರುವ ಪ್ರಕರಣದ ಹಿನ್ನೆಲೆಯಲ್ಲಿ ವಿವಾದಾತ್ಮಕ ಶಿವಲಿಂಗ ಕುರಿತು ಫೇಸ್‌ಬುಕ್‌ ಹೇಳಿಕೆ ಪ್ರಕಟಿಸಿದ್ದಕ್ಕಾಗಿ ಬಂಧಿತರಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್‌ ರತನ್‌ ಲಾಲ್‌ಗೆ ದೆಹಲಿಯ ನ್ಯಾಯಾಲಯವೊಂದು ಶನಿವಾರ ಜಾಮೀನು ನೀಡಿದೆ.

“ಭಾರತ 130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿದ್ದು ಯಾವುದೇ ವಿಚಾರವಾಗಿ 130 ಕೋಟಿಯಷ್ಟು ವಿಭಿನ್ನ ದೃಷ್ಟಿ ಮತ್ತು ಗ್ರಹಿಕೆ ರೂಪುಗೊಳ್ಳಬಹುದು ಎಂದು ಚೀಫ್‌ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ಧಾರ್ಥ ಮಲಿಕ್ ಜಾಮೀನು ನೀಡುವ ಸಂದರ್ಭದಲ್ಲಿ ತಿಳಿಸಿದರು.

ಹಿಂದೂ ಧರ್ಮದ ಹೆಮ್ಮೆಯ ಅನುಯಾಯಿಯಾಗಿ ತಮಗೆ ಈ ಫೇಸ್‌ಬುಕ್‌ ಪೋಸ್ಟ್‌ ಸದಭಿರುಚಿ ಇಲ್ಲದ್ದು ಮತ್ತು ಅನಗತ್ಯವಾದುದು ಎಂದು ತೋರುತ್ತಿದೆ ಎಂಬುದಾಗಿ ನ್ಯಾಯಮೂರ್ತಿಗಳು ಹೇಳಿದರು. ಆದರೆ ಲಾಲ್‌ ಅವರ ಹೇಳಿಕೆ ದ್ವೇಷ ಭಾವನೆ ಕೆರಳಿಸುವುದಿಲ್ಲ ಎಂದು ಕೂಡ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

“ಬೇರೊಬ್ಬ ವ್ಯಕ್ತಿಗೆ ಈ ಪೋಸ್ಟ್‌ ನಾಚಿಕೆಗೇಡಿನ ಸಂಗತಿ ಎನಿಸಬಹುದು. ಆದರೆ ಇನ್ನೊಂದು ಸಮುದಾಯದ ಬಗ್ಗೆ ದ್ವೇಷ ಭಾವನೆ ಕೆರಳಿಸದಿರಬಹುದು. ಅಂತೆಯೇ ವಿಭಿನ್ನ ವ್ಯಕ್ತಿಗಳು ಸಿಟ್ಟಿಗೇಳದೆ ಪೋಸ್ಟನ್ನು ಭಿನ್ನವಾಗಿ ಪರಿಗಣಿಸಬಹುದು. ಜೊತೆಗೆ ಪರಿಣಾಮಗಳನ್ನು ಪರಿಗಣಿಸದೆ ಅನಗತ್ಯ ಹೇಳಿಕೆ ನೀಡಿದ ಆರೋಪಿ ಬಗ್ಗೆ ಪಶ್ಚಾತ್ತಾಪ ಪಡಬಹುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.

“ಒಬ್ಬ ವ್ಯಕ್ತಿ ಅನುಭವಿಸುವ ನೋವಿನ ಭಾವನೆ ಇಡೀ ಗುಂಪು ಅಥವಾ ಸಮುದಾಯವನ್ನು ಪ್ರತಿನಿಧಿಸದು” ಎಂದು ಕೂಡ ಆದೇಶ ಒತ್ತಿ ಹೇಳಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

State_v__Ratan_Lal.pdf
Preview