Senior Advocate Harish Salve 
ಸುದ್ದಿಗಳು

ಕಾನೂನು ಶಿಕ್ಷಣ ಪಡೆಯಲು ಆರ್ಥಿಕ ಸಹಾಯ ಆದಾಯ ತೆರಿಗೆ ಅಡಿ 'ವೃತ್ತಿಗೆ ಮಾಡಿದ ಖರ್ಚು':ಸಾಳ್ವೆ ವಾದಕ್ಕೆ ಐಟಿಎಟಿ ಸಮ್ಮತಿ

ಅಕೌಂಟೆಂಟ್‌ ಸದಸ್ಯ ಆರ್‌ ಕೆ ಪಾಂಡಾ ಮತ್ತು ನ್ಯಾಯಿಕ ಸದಸ್ಯ ನರಸಿಂಹ ಚಾರಿ ಅವರ ನೇತೃತ್ವದ ಪೀಠವು ಇದೇ ತೆರನಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದವನ್ನು ಪುರಸ್ಕರಿಸಿ 2019ರ ಆಗಸ್ಟ್‌ನಲ್ಲಿ ಐಟಿಎಟಿ ಹೊರಡಿಸಿದ್ದ ಆದೇಶವನ್ನು ಆಧರಿಸಿದೆ.

Bar & Bench

ವಿದೇಶದಲ್ಲಿ ಕಾನೂನು ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ನೀಡಿದ ಆರ್ಥಿಕ ಸಹಾಯವನ್ನು "ವಿಶೇಷವಾಗಿ ಉದ್ಯೋಗ ಅಥವಾ ವೃತ್ತಿಗೆ ಮಾಡಿದ ಆರ್ಥಿಕ ಸಹಾಯ" ಎಂದು 1961ರ ಆದಾಯ ತೆರಿಗೆ ಕಾಯಿದೆಯ 37(1) ನಿಯಮದಡಿ ಪರಿಗಣಿಸಲು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣವು (ಐಟಿಎಐ) ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರಿಗೆ ಈಚೆಗೆ ಅವಕಾಶ ಮಾಡಿಕೊಟ್ಟಿದೆ (ಹರೀಶ್‌ ಸಾಳ್ವೆ ವರ್ಸಸ್‌ ನವದೆಹಲಿ ಎಸಿಐಟಿ).

ಆದ್ದರಿಂದ, ಮೇಲೆ ಹೇಳಲಾದ ಆದಾಯವನ್ನು ಬಂಡವಾಳ ವೆಚ್ಚದಡಿ ಪರಿಗಣಿಸದೆ "ವೃತ್ತಿ ಅಥವಾ ಉದ್ಯಮದಿಂದ ಗಳಿಸಿದ ಲಾಭ”ದಡಿ ಪರಿಗಣಿಸಿ ಶುಲ್ಕ ವಿಧಿಸಬೇಕಾಗುತ್ತದೆ ಎನ್ನುವುದನ್ನು ನ್ಯಾಯಾಧಿಕರಣವು ಎತ್ತಿಹಿಡಿದಿದೆ.

ಅಕೌಂಟೆಂಟ್‌ ಸದಸ್ಯ ಆರ್‌ ಕೆ ಪಾಂಡಾ ಮತ್ತು ನ್ಯಾಯಿಕ ಸದಸ್ಯ ನರಸಿಂಹ ಚಾರಿ ಅವರ ನೇತೃತ್ವದ ಪೀಠವು ಇದೇ ತೆರನಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದವನ್ನು ಪುರಸ್ಕರಿಸಿ 2019ರ ಆಗಸ್ಟ್‌ನಲ್ಲಿ ಐಟಿಎಟಿ ಹೊರಡಿಸಿದ್ದ ಆದೇಶವನ್ನು ಈ ಪ್ರಕರಣದಲ್ಲಿ ಆಧರಿಸಿದೆ.

'ಕಾನೂನು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ' ಎಂಬ ತಲೆಬರಹದಡಿ ಸಾಳ್ವೆ ಅವರು 2013-14ನೇ ಸಾಲಿನಲ್ಲಿ 34 ಲಕ್ಷ ರೂಪಾಯಿ ಮತ್ತು 2014-15ನೇ ಸಾಲಿನಲ್ಲಿ 84.4 ಲಕ್ಷ ರೂಪಾಯಿಯನ್ನು ದಾಖಲಿಸಿದ್ದರು. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ಈ ಮೂಲಕ ಆರ್ಥಿಕ ಸಹಾಯ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಆದರೆ ತೆರಿಗೆದಾರರ ಈ ಹಕ್ಕು ಸಾಧನೆಯನ್ನು (ಕ್ಲೇಮ್) ತಿರಸ್ಕರಿಸಿದ್ದ ತೆರಿಗೆ ಅಧಿಕಾರಿಯು (ಎಒ) ಹಿಂದಿನ ತೆರಿಗೆ ವರ್ಷದಲ್ಲಿಯೂ ಇದೇ ತೆರನಾದ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು. ತೆರಿಗೆದಾರರ ವೃತ್ತಿ ಅಥವಾ ವ್ಯವಹಾರಕ್ಕೆ ಯಾವುದೇ ರೀತಿಯಲ್ಲಿಯೂ ಸಂಬಂಧಿಸದ ಕಾನೂನು ವಿದ್ಯಾರ್ಥಿಗಳಿಗೆ ನೀಡಿರುವ ಆರ್ಥಿಕ ಸಹಾಯವನ್ನು ತೆರಿಗೆದಾರನ ಉದ್ಯಮ/ ವೃತ್ತಿಯ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಮತ್ತು ಪ್ರತ್ಯೇಕವಾಗಿ ಮಾಡಿದ ವೆಚ್ಚವೆಂದು ಹೇಳಲಾಗುವುದಿಲ್ಲ ಎಂದು ತಿರಸ್ಕರಿಸಿದ್ದರು.

ತೆರಿಗೆ ಅಧಿಕಾರಿಯ ನಿರ್ಧಾರವನ್ನು ಪ್ರಶ್ನಿಸಿ ಸಾಳ್ವೆ ಅವರು ಆದಾಯ ತೆರಿಗೆ (ಮೇಲ್ಮನವಿ) ಆಯುಕ್ತರಿಗೆ ಮನವಿ ಮಾಡಿದ್ದನ್ನು ಅವರು ವಜಾಗೊಳಿಸಿದ್ದರು. ಇದರಿಂದ ಸಾಳ್ವೆ ಅವರು ಐಟಿಎಟಿ ಮೆಟ್ಟಿಲೇರಿದ್ದರು.

ಸಾಳ್ವೆ ತಾವು ವಿದ್ಯಾರ್ಥಿಗಳಿಗೆ ಮಾಡಿರುವ ಆರ್ಥಿಕ ಸಹಾಯವು ವೃತ್ತಿಗೆ ಸಂಬಂಧಿಸಿದ್ದು ಎಂದು ನಿರೂಪಿಸಲು ಎರಡು ವಾದಗಳನ್ನು ಮುಂದಿರಿಸಿದ್ದರು. ಮೊದಲಿಗೆ, ತಾವು ಮಧ್ಯಸ್ಥಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚು ಗಮನಹರಿಸಿದ್ದು ಲಂಡನ್‌ ಹಾಗೂ ಸಿಂಗಾಪುರದಲ್ಲಿ ಪ್ರಕರಣಗಳನ್ನು ನಿರ್ವಹಿಸುತ್ತಿದ್ದು ಸಾಕಷ್ಟು ಸಮಯ ವ್ಯಯಿಸಿದ್ದೇನೆ. ಲಂಡನ್‌ನ ಅಕೆಡೆಮಿಕ್ ಹಾಗೂ ಕಾನೂನು ವಲಯದಲ್ಲಿ ಹೆಸರುಗಳಿಸಲು ಹಾಗೂ ಸಂಪರ್ಕ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಅನುಕೂಲ ಮಾಡಿಕೊಡುತ್ತದೆ ಎಂದಿದ್ದರು.

ಎರಡನೆಯದಾಗಿ, ತನ್ನ ಚೇಂಬರ್‌ನಲ್ಲಿ ಕೆಲಸ ಮಾಡುವ ಕಿರಿಯರು ವಿದೇಶಗಳಿಗೆ ತೆರಳಿ ತಾಂತ್ರಿಕ ವೃತ್ತಿ ನೈಪುಣ್ಯತೆ ಜೊತೆಗೆ ಕ್ಲಿಷ್ಟವಾದ ಅಂತಾರಾಷ್ಟ್ರೀಯ ತೆರಿಗೆ ಮತ್ತು ವ್ಯಾವಹಾರಿಕ ಕಾನೂನುಗಳ ಬಗ್ಗೆ ಹೆಚ್ಚಿನ ಜ್ಞಾನ ಗಳಿಸಿಕೊಂಡು ತಮಗೆ ಸಂಕೀರ್ಣ ಪ್ರಕರಣಗಳಲ್ಲಿ ಸಹಾಯ ಮಾಡಬೇಕು ಎನ್ನುವ ಉದ್ದೇಶವೂ ಇದರ ಹಿಂದೆ ಇದೆ ಎಂದು ವಾದಿಸಿದ್ದರು.

ಸಾಳ್ವೆ ಅವರ ಈ ವಾದಗಳನ್ನು ಐಟಿಎಟಿ ಪುರಸ್ಕರಿಸಿತು.