ನ್ಯಾ. ಎಸ್ ಮುರಳೀಧರ್ 
ಸುದ್ದಿಗಳು

ಬಹುತೇಕ ನ್ಯಾಯಾಧೀಶರು ತಮ್ಮನ್ನು ಪರಿಪೂರ್ಣರು ಎಂದುಕೊಂಡಿರುತ್ತಾರೆ, ಆದರೆ ಹಾಗೆ ಇರುವುದಿಲ್ಲ: ನ್ಯಾ ಮುರಳೀಧರ್

ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆ ನಡೆಸಿದ ವರ್ಚುವಲ್ ಸಮಾವೇಶದಲ್ಲಿ ‘ನ್ಯಾಯಾಧೀಶರ ನಿರ್ದಯ ಟೀಕೆಗಳಿಗೆ ವಕೀಲರು ಹೇಗೆ ಪ್ರತಿಕ್ರಿಯಿಸಬೇಕು’ ಎಂಬ ಪ್ರಶ್ನೆ ಮೂಡಿ ನ್ಯಾಯಾಧೀಶರ ಮನುಷ್ಯ ಮಿತಿ ಕುರಿತ ಸ್ವಾರಸ್ಯಕರ ಚರ್ಚೆಗೆ ನಾಂದಿಹಾಡಿತು.

Bar & Bench

ನ್ಯಾಯಾಲಯದಲ್ಲಿ ನ್ಯಾಯಾಧೀಶರು ನಿರ್ದಯವಾಗಿ ಟೀಕೆ ಮಾಡಿದರೆ ವಕೀಲರು ಹೇಗೆ ಪ್ರತಿಕ್ರಿಯಿಸಬೇಕು?

ದೆಹಲಿ ಹೈಕೋರ್ಟ್ ಮಹಿಳಾ ವಕೀಲರ ವೇದಿಕೆ ಶುಕ್ರವಾರ ಆಯೋಜಿಸಿದ್ದ ವರ್ಚುವಲ್ ಸಮಾವೇಶದ ಮಧ್ಯೆ ಕೇಳಿಬಂದ ಈ ಪ್ರಶ್ನೆ, ನ್ಯಾಯಾಧೀಶರ ಮನುಷ್ಯ ಸಹಜ ಮಿತಿಗಳ ಕುರಿತಂತೆ ಚರ್ಚಿಸಲು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್ ಮುರಳೀಧರ್ ಮತ್ತು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರಿಗೆ ಪ್ರೇರಣೆಯೊದಗಿಸಿತು.

ನ್ಯಾ. ಮುರಳೀಧರ್ ವಕೀಲರಾಗಿದ್ದಾಗ ಒಮ್ಮೆ ಭಾರೀ ವಾಗ್ವಾದದ ಮಧ್ಯೆ ದಿಕ್ಕುತಪ್ಪಿ "ದಯವಿಟ್ಟು ನನ್ನನ್ನು ಸಹಿಸಿಕೊಳ್ಳಿ" ಎಂಬ ನ್ಯಾಯಾಧೀಶರಿಗೆ ಹೇಳಿಬಿಟ್ಟರು. ಅದು ನ್ಯಾಯಾಧೀಶರನ್ನು ಕೆರಳುವಂತೆ ಮಾಡಿ ಪ್ರಕರಣವನ್ನು ಅವರು ‘ಕಿವಿಗೊಟ್ಟು’ ಕೇಳುವಂತಾಯಿತು.

ಪ್ರಕರಣ ತಿರಸ್ಕೃತವಾದ ನಂತರ, ಗೊಂದಲದಲ್ಲಿದ್ದ ವಕೀಲ ಮುರಳೀಧರ್ ಅವರು ನ್ಯಾಯಾಲಯದ ಹೊರಗೆ ‘ತಾವು ಎಡವಿದ್ದೆಲ್ಲಿ’ ಎಂದು ಹಿರಿಯ ವಕೀಲರನ್ನು ಕೇಳಿದರು.

'ನನ್ನನ್ನು ಸಹಿಸಿಕೊಳ್ಳಿ' ಎಂದು ಇವರು ಹೇಳಿದ್ದು ನ್ಯಾಯಾಲಯ ತಾಳ್ಮೆ ಕಳೆದುಕೊಂಡಿದೆ ಎಂಬರ್ಥ ಹೊರಡಿಸಿ ನ್ಯಾಯಾಧೀಶರಿಗೆ ಸಿಟ್ಟುತರಿಸಿತು ಎಂದು ಹಿರಿಯ ವಕೀಲರು ಮನವರಿಕೆ ಮಾಡಿಕೊಟ್ಟರಂತೆ.

‘ಪೀಠದಲ್ಲಿ ಕುಳಿತವರು ಕೂಡ ಮನುಷ್ಯರು ಎಂಬುದನ್ನು ಪರಿಗಣಿಸಿ ವಕೀಲರು ಭಾವನಾತ್ಮಕವಾಗಿ ಕಳೆದುಹೋಬೇಕು’ ಎಂದು ಅವರು ಕಿವಿಮಾತು ಹೇಳಿದರು. ಅಲ್ಲದೆ ಕೋಪದಲ್ಲಿ ಎಂದಿಗೂ ಆದೇಶಗಳನ್ನು ರವಾನಿಸದಿರುವುದು ಮುಖ್ಯ ಎಂದೂ ಅವರು ಅಭಿಪ್ರಾಯಪಟ್ಟರು.

"ನ್ಯಾಯಾಧೀಶರಾಗಿ ನಿಮ್ಮ ಭಾವನೆಗಳು ಮತ್ತು ಪ್ರತಿಕ್ರಿಯೆಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ ಎಂದಾದರೆ ಪ್ರಕರಣವನ್ನು ನಂತರ ತೆಗೆದುಕೊಳ್ಳುತ್ತೇವೆ ಎಂದು ಹೇಳುವುದು ಉತ್ತಮ. ನ್ಯಾಯಾಧೀಶರು ತಮ್ಮನ್ನು ಶಾಂತಗೊಳಿಸಿಕೊಳ್ಳಲು ತಮ್ಮ ಕೋಣೆಗಳಿಗೆ ಮರಳಿ ವಿಶ್ರಾಂತಿ ತೆಗೆದುಕೊಂಡ ಉದಾಹರಣೆಗಳಿವೆ. ದುರದೃಷ್ಟವಶಾತ್, ವಕೀಲರಿಗೆ ಈ ಐಭೋಗ ಇಲ್ಲ. " ಎಂದರು.

…ಹೆಚ್ಚಿನ ನ್ಯಾಯಾಧೀಶರು ತಾವು ಪರಿಪೂರ್ಣರು, ಶಾಂತರು, ನಿರುದ್ವೇಗಿಗಳು (ಸದಾ) ಎಂದು ನಂಬಲು ಇಷ್ಟಪಡುತ್ತಾರೆ – ಆದರೆ ಅವರು ಹಾಗೆ ಇರುವುದಿಲ್ಲ ... ನನ್ನಂತಹ ನ್ಯಾಯಾಧೀಶ ಕೂಡ, ದಿನವೊಂದರಲ್ಲಿ ಹೆಚ್ಚು ಅಂಕ ಪಡೆದಷ್ಟೇ ಕಡಿಮೆ ಅಂಕಗಳನ್ನು ಪಡೆದಿರುತ್ತಾರೆ ಎಂಬುದನ್ನು ನಿಮ್ಮಲ್ಲಿ ಹಲವರು ಗಮನಿಸಿರಬಹುದು.
ನ್ಯಾ. ಎಸ್ ಮುರಳೀಧರ್

"ಒಳಗಿನಿಂದ ನೀವು ಭಾವನಾತ್ಮಕವಾಗಿರಿ, ನ್ಯಾಯಾಧೀಶರು ನಿಮ್ಮನ್ನು ವಿಚಲಿತರನ್ನಾಗಿಸಲು ಬಿಡಬೇಡಿ. ಇದು ಅನುಭವದಿಂದ ಮಾತ್ರ ಸಿದ್ಧಿಸುತ್ತದೆ." ಎಂದು ಅವರು ಕಿವಿಮಾತು ಹೇಳಿದರು.

ಇದಕ್ಕೆ ದನಿಗೂಡಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, ‘ವಕೀಲರು ದಪ್ಪ ಚರ್ಮದವರಾಗಿರಬೇಕು. ನ್ಯಾಯಾಲಯದಲ್ಲಿ ತಮ್ಮ ಸೂಕ್ಷ್ಮತೆ, ಭಾವನಾತ್ಮಕ ಅಂಶಗಳನ್ನು ಕಳೆದುಕೊಂಡಿರಬೇಕು’ ಎಂದು ತಿಳಿಸಿದರು.

ಸುಲಭ ಮಾರ್ಗ ಎಂದರೆ ಮರೆಯುವುದು. 'ಕ್ಷಮಿಸಿ ಮೈ ಲಾರ್ಡ್, ಆದರೆ ನನ್ನ ನಿಲುವು ಇದು' ಎಂದು ಹೇಳಿ. ಅವರನ್ನು (ನ್ಯಾಯಾಧೀಶರನ್ನು) ಮತ್ತೆ ಪ್ರಕರಣದತ್ತ ಕರೆತನ್ನಿ. ನಿಮ್ಮ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂಬುದನ್ನು ಮರೆತುಬಿಡಿ. ನೋಯಿಸಿರುವುದನ್ನು ಮರೆತುಬಿಡಿ. ನನ್ನ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಹೇಳುವ ಭಾಗ್ಯ ನಮಗೆ ದೊರೆಯಲು ಬಹಳ ಕಾಲ ಹಿಡಿಯುತ್ತದೆ. ನಮಗಷ್ಟು ಬಲ, ಸ್ಥಾನಮಾನ ಇಲ್ಲದಿದ್ದಾಗ ಅಂತಹ ಭಾಗ್ಯ ನಮ್ಮದಾಗಿರುವುದಿಲ್ಲ.
ಹಿರಿಯ ವಕೀಲೆ ಮೀನಾಕ್ಷಿ ಅರೋರಾ

ಸಮಾವೇಶದಲ್ಲಿ ವಕೀಲರಾದ ಮೃಣಾಲಿನಿ ಸೇನ್ ಮತ್ತು ಸೌಮ್ಯಾ ಟಂಡನ್ ನಿರೂಪಣೆ ಮಾಡಿದರು.