Chief Justice Dipankar Datta and Justice GS Kulkarni

 
ಸುದ್ದಿಗಳು

ಜೀವನೋಪಾಯದ ಹಕ್ಕು ಸುರಕ್ಷಿತ ಕಟ್ಟಡಗಳಲ್ಲಿ ವಾಸಿಸುವ ಹಕ್ಕನ್ನು ಒಳಗೊಂಡಿದೆ: ಬಾಂಬೆ ಹೈಕೋರ್ಟ್

ಕಟ್ಟಡ ಕುಸಿತದಿಂದ ಜನರು ಪ್ರಾಣ ಕಳೆದುಕೊಳ್ಳುವ ಘಟನೆಗಳನ್ನು ಸಂಪೂರ್ಣ ಹೋಗಲಾಡಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ ತಿಳಿಸಿತು.

Bar & Bench

ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಕಟ್ಟಡ ಕುಸಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್‌ “ಸಂವಿಧಾನದ 21ನೇ ವಿಧಿಯಡಿ ನೀಡಲಾದ ಜೀವನೋಪಾಯದ ಹಕ್ಕು ಸುರಕ್ಷಿತ ಕಟ್ಟಡಗಳು ಮತ್ತು ಮನೆಗಳಲ್ಲಿ ವಾಸಿಸುವ ಹಕ್ಕನ್ನು ಒಳಗೊಂಡಿದೆ” ಎಂದು ಶನಿವಾರ ತಿಳಿಸಿತು.

ಕಟ್ಟಡ ಕುಸಿತದಿಂದ ಜನರು ಪ್ರಾಣ ಕಳೆದುಕೊಳ್ಳುವ ನಿದರ್ಶನಗಳನ್ನು ಸಂಪೂರ್ಣ ಹೋಗಲಾಡಿಸಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ ತಿಳಿಸಿತು.

ಕಟ್ಟಡದ ಮಾಲೀಕರು, ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಯ ಯಾವುದೇ ಇರಲಿ, ಕಟ್ಟಡ ಆವರಣದ ಸುರಕ್ಷತೆಯನ್ನು ಖಾತ್ರಿಪಡಿಸುವ ಸಾಂವಿಧಾನಿಕ ಹೊಣೆಗಾರಿಕೆ ಅವರ ಮೇಲಿರುತ್ತದೆ. ಇದರಿಂದಾಗಿ ನಿವಾಸಿಗಳ ಜೀವ ಕಟ್ಟಡ ಕುಸಿತದ ಅಪಾಯಕ್ಕೆ ತುತ್ತಾಗುವುದಿಲ್ಲ ಎಂದು ಅದು ವಿವರಿಸಿತು.

ಮಹಾರಾಷ್ಟ್ರದಲ್ಲಿ ಶಿಥಿಲಗೊಂಡಿರುವ ಕಟ್ಟಡಗಳು ಮತ್ತು ಅಕ್ರಮ ನಿರ್ಮಾಣ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಬೃಹನ್ಮುಂಬೈ ಮಹಾನಗರ ಪಾಲಿಕೆ-ಬಿಎಂಸಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಈ ಸಂಬಂಧ ನಿರ್ದೇಶನಗಳನ್ನು ನೀಡಿದ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

High_Court_on_its_own_motion_v__Bhiwandi_Nizampur_Municipal_Corporation___Ors_.pdf
Preview