<div class="paragraphs"><p>Justice UU Lalit</p></div>

Justice UU Lalit

 
ಸುದ್ದಿಗಳು

ಎನ್‌ಎಲ್‌ಎಸ್‌ಎ ಲೋಕ್ ಅದಾಲತ್: ಮೈಸೂರಿನ ಅತಿ ಹಳೆಯ ಕೇಸ್ ಸೇರಿ 77 ಲಕ್ಷ ಪ್ರಕರಣಗಳ ವಿಲೇವಾರಿ

Bar & Bench

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್‌ಎಎಲ್‌ಎಸ್‌ಎ- ನಾಲ್ಸಾ) ಮಾರ್ಚ್ 12 ರಂದು ನಡೆಸಿದ ಪ್ರಸಕ್ತ ಸಾಲಿನ ಮೊದಲ ಲೋಕ್‌ ಅದಾಲತ್‌ನಲ್ಲಿ 77 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.

ತ್ವರಿತ ಮತ್ತು ಕೈಗೆಟುಕವಂತಿರುವುದು ಲೋಕ್‌ ಅದಾಲಾತ್‌ ಯಶಸ್ಸಿಗೆ ಮುಖ್ಯ ಕಾರಣ ಎಂದು ಎನ್‌ಎಎಲ್‌ಎಸ್‌ಎ ಕಾರ್ಯ ನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾ. ಯು ಯು ಲಲಿತ್‌ ತಿಳಿಸಿದರು.

ನ್ಯಾ. ಲಲಿತ್‌ ಅವರ ನೇತೃತ್ವದಲ್ಲಿ ವಿಲೇವಾರಿ ದರದಲ್ಲಿ ಪ್ರಗತಿದಾಯಕ ಸುಧಾರಣೆ ಕಂಡುಬಂದಿದೆ. ಜುಲೈ, 2021ರಲ್ಲಿ 29 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ; ಸೆಪ್ಟೆಂಬರ್ 2021 ರಲ್ಲಿ 42 ಲಕ್ಷ ಪ್ರಕರಣಗಳು ಮತ್ತು ಡಿಸೆಂಬರ್ 2021 ರಲ್ಲಿ 54 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಎನ್‌ಎಲ್‌ಎಸ್‌ಎ ತನ್ನ ಕಾರ್ಯವಿಧಾನವನ್ನು ಬದಲಿಸಿದ್ದು ಟಾಪ್-ಡೌನ್ ಮತ್ತು ಬಾಟಮ್-ಅಪ್ ವಿಧಾನದ ಸಂಶ್ಲೇಷಣೆಯನ್ನು ಅಳವಡಿಸಿಕೊಂಡಿದೆ. ಕೋವಿಡ್‌ ಅವಧಿಯಲ್ಲಿ ನಡೆದ ಅದಾಲತ್‌ನಲ್ಲಿ ವರ್ಚುವಲ್‌ ವಿಧಾನವನ್ನು ಪ್ರಕರಣಗಳ ಇತ್ಯರ್ಥಕ್ಕೆ ಅತ್ಯುತ್ತಮವಾಗಿ ಬಳಸಿಕೊಳ್ಳಲಾಗಿದೆ.

ಅದಾಲತ್‌ನ ಕೆಲ ಪ್ರಮುಖಾಂಶಗಳು

ಮೈಸೂರಿನಲ್ಲಿ 53 ವರ್ಷ ಹಳೆಯದಾದ ಆಸ್ತಿ ಪಾಲಿಗೆ ಸಂಬಂಧಿಸಿದ ಮೊಕದ್ದಮೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗಿದೆ (ಕವಿ ಎನ್‌ ಎಸ್‌ ಲಕ್ಷ್ಮೀ ನಾರಾಯಣ ಭಟ್ಟ ಮತ್ತು ನವ್ಯ ಕವಿ ಗೋಪಾಲ ಕೃಷ್ಣ ಅಡಿಗರ ಸಂಬಂಧಿಕರ ನಡುವಿನ ವ್ಯಾಜ್ಯವಿದು). ಟಿ ಲಕ್ಷ್ಮೀ ನಾರಾಯಾಣ ಉಪಾಧ್ಯಾಯರ ಮಕ್ಕಳ ನಡುವಿನ ವ್ಯಾಜ್ಯ ಇದಾಗಿತ್ತು. ₹ 64,00,000 ಮೊತ್ತದ ಷೇರು ಸೇರಿದಂತೆ ಆಸ್ತಿಯಲ್ಲಿ ಪಾಲು ಪಡೆಯಲು 1967ರಲ್ಲಿ ಮೊಕದ್ದಮೆ ಹೂಡಲಾಗಿತ್ತು. ಅಂತಿಮ ತೀರ್ಪು ಪ್ರಕ್ರಿಯೆಗಳನ್ನು 1982ರಲ್ಲಿ ಪ್ರಾರಂಭಿಸಲಾಯಿತು. 40 ಪಕ್ಷಕಾರರು ಮತ್ತು 10 ವಕೀಲರು ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಹೆಣ್ಣು ಮಕ್ಕಳು ಕೂಡ ಆಸ್ತಿಯಲ್ಲಿ ಪಾಲು ಪಡೆಯಲು ಸಮಾನ ಅರ್ಹತೆ ಹೊಂದಿದ್ದಾರೆ ಎಂಬ ತತ್ವದೊಂದಿಗೆ ಪ್ರಕರಣವನ್ನು ಇತ್ಯರ್ಥ ಪಡಿಸಲಾಯಿತು.

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 1972ರಲ್ಲಿ ದಾಖಲಾಗಿದ್ದ 50 ವರ್ಷಗಳ ಹಿಂದಿನ ಕ್ರಿಮಿನಲ್ ಮೊಕದ್ದಮೆಯನ್ನು ಇತ್ಯರ್ಥಪಡಿಸುವಲ್ಲಿ ಲೋಕ ಅದಾಲತ್ ಸಮಿತಿ ಯಶಸ್ವಿಯಾಗಿದೆ.