NCDRC 
ಸುದ್ದಿಗಳು

ಎನ್‌ಸಿಡಿಆರ್‌ಸಿ ನ್ಯಾಯಮಂಡಳಿ; ಅದರ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ನಿರ್ವಹಿಸಬಹುದು: ಸುಪ್ರೀಂ

ಸೆಕ್ಷನ್ 58(1)(ಎ)(iii) ಅಥವಾ ಗ್ರಾಹಕ ರಕ್ಷಣೆಯ ಸೆಕ್ಷನ್ 58(1)(ಎ)(iv)ರ ಅಡಿಯಲ್ಲಿ ಎನ್ಸಿಡಿಆರ್ಸಿ ಹೊರಡಿಸಿದ ಆದೇಶದ ವಿರುದ್ಧ 227ನೇ ವಿಧಿಯಡಿಯಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ನಿರ್ವಹಿಸಬಹುದು ಎಂದಿದೆ ನ್ಯಾಯಾಲಯ.

Bar & Bench

ಸಂವಿಧಾನದ 227 ಮತ್ತು 136 ನೇ ವಿಧಿಯ ಪ್ರಕಾರ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) 'ನ್ಯಾಯಮಂಡಳಿ' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. [ಇಬ್ರಾತ್ ಫೈಜಾನ್ ಮತ್ತು ಒಮ್ಯಾಕ್ಸ್ ಬಿಲ್ಡ್‌ಹೋಮ್‌ ಪ್ರೈ.,ಲಿಮಿಟೆಡ್].

ಯಾವುದೇ ಮೇಲ್ಮನವಿ ಪರಿಹಾರವನ್ನು ಒದಗಿಸದೇ ಇರುವ ಸಂದರ್ಭಗಳಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆಯ ಸೆಕ್ಷನ್ 58(1)(a)(iii) ಮತ್ತು ಸೆಕ್ಷನ್ 58(1)(a)(iv)ರ ಅಡಿ ಎನ್‌ಸಿಡಿಆರ್‌ಸಿ ಹೊರಡಿಸಿದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಸಂವಿಧಾನದ 227ನೇ ವಿಧಿಯಡಿ ರಿಟ್‌ ಅರ್ಜಿ ನಿರ್ವಹಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿತು.

ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಪಕ್ಷಕಾರರ ನಡುವಿನ ವ್ಯಾಜ್ಯವನ್ನು ನಿರ್ಣಯಿಸುವ ಶಾಸನಾತ್ಮಕ ಅಧಿಕಾರ ಇರುವುದರಿಂದ ರಾಷ್ಟ್ರೀಯ ಆಯೋಗವನ್ನು 'ನ್ಯಾಯಮಂಡಳಿ' ಎಂದು ಹೇಳಬಹುದು. ಆದ್ದರಿಂದ ಮೇಲೆ ತಿಳಿಸಿದ ನಿರ್ಧಾರದ ಪ್ರಕಾರ ರಾಜ್ಯದ ನ್ಯಾಯಾಂಗ ಅಧಿಕಾರಗಳೊಂದಿಗೆ ನಿಯೋಜಿತವಾಗಿರುವ ಅಧಿಕಾರದ ಪರೀಕ್ಷೆಯನ್ನು ಇದು ತೃಪ್ತಿಪಡಿಸಿದ್ದು ಸಂವಿಧಾನದ 227 ಮತ್ತು/ಅಥವಾ 136 ರ ಪ್ರಕಾರ ಇದನ್ನು ನ್ಯಾಯಮಂಡಳಿ ಎಂದು ಪರಿಗಣಿಸಬಹುದು” ಎಂದು ತೀರ್ಪು ಹೇಳಿದೆ.

ಸಂವಿಧಾನದ 227ನೇವಿಧಿಯಡಿ ಸಲ್ಲಿಸಲಾದ ರಿಟ್ಅರ್ಜಿ ವಿಚಾರಣೆ ವೇಳೆ ಎನ್‌ಸಿಡಿಆರ್‌ಸಿಯ ಆದೇಶಕ್ಕೆ ಈ ಹಿಂದೆ ದೆಹಲಿ ಹೈಕೋರ್ಟ್‌ ತಡೆಹಿಡಿದಿತ್ತು. ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯೊಂದರ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.