ಸುದ್ದಿಗಳು

[ಹೈದರ್‌ಪೊರ ಎನ್‌ಕೌಂಟರ್‌] ಕ್ರಿಯಾವಿಧಿ ಪೂರೈಸಲು ಅಮೀರ್ ಮಗ್ರೆ ಕುಟುಂಬ ಸದಸ್ಯರಿಗೆ ಅನುಮತಿಸಿದ ಕಾಶ್ಮೀರ ಹೈಕೋರ್ಟ್

Bar & Bench

ಕಳೆದ ವರ್ಷ ಪೊಲೀಸರು ಮತ್ತು ಭದ್ರತಾಪಡೆಗಳ ಕಾರ್ಯಾಚರಣೆಯಲ್ಲಿ ಮೃತಪಟ್ಟವರಲ್ಲಿ ಒಬ್ಬರಾದ ಅಮೀರ್‌ ಮಗ್ರೆ ಅವರ ತಂದೆ ಹಾಗೂ ಕುಟುಂಬ ಸದಸ್ಯರು ಬುಡ್ಗಾಂವ್‌ನ ವಡ್ಡರ್‌ ಪಯೀನ್‌ ಸ್ಮಶಾನದಲ್ಲಿ ಧಾರ್ಮಿಕ ವಿಧಾನಗಳನ್ನು ಪೂರೈಸಲು ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಶುಕ್ರವಾರ ಅನುಮತಿ ನೀಡಿದೆ.

ಮಗ್ರೆ ಮೃತದೇಹ ಪಡೆಯುವ ಹಕ್ಕು ಕಸಿದುಕೊಂಡಿದ್ದಕ್ಕಾಗಿ ಅವರ ಕುಟುಂಬಕ್ಕೆ ಸರ್ಕಾರ ₹ 5 ಲಕ್ಷ ಪರಿಹಾರ ನೀಡಬೇಕು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಪಂಕಜ್ ಮಿಥಾ ಮತ್ತು ನ್ಯಾಯಮೂರ್ತಿ ಜಾವೇದ್ ಇಕ್ಬಾಲ್ ವನಿ ಅವರಿದ್ದ ವಿಭಾಗೀಯ ಪೀಠ ಎತ್ತಿ ಹಿಡಿಯಿತು.

ಮಗ್ರೆ ಕುಟುಂಬ ಭಾವುಕ ರೀತಿಯಲ್ಲಿ ಖಿನ್ನತೆಗೆ ತುತ್ತಾಗಿದೆ. ಮಗನ ಅಂತಿಮ ವಿಧಿ ವಿಧಾನ ನೆರವೇರಿಸುವ ಹಕ್ಕಿನಿಂದ ಅವರು ವಂಚಿತರಾಗಿದ್ದಾರೆ. ನಮ್ಮದು ಇಡೀ ವಿಶ್ವವೇ ಒಪ್ಪಿಕೊಂಡಿರುವ ಕಲ್ಯಾಣ ರಾಜ್ಯವಾಗಿದ್ದು ಇದನ್ನು ಯಾವುದೇ ನೀತಿಯಡಿ ಅನುಮೋದಿಸಲಾಗದು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಗ್ರೆ ಕುಟುಂಬದ ಹಿನ್ನೆಲೆ ಮತ್ತು ಪಾತ್ರವನ್ನು ಸರ್ಕಾರ ಕಡೆಗಣಿಸುವಂತಿಲ್ಲ. ಆ ಸ್ಥಾನವನ್ನು ಪರಿಗಣಿಸಿರುವ ರಿಟ್‌ ನ್ಯಾಯಾಲಯ ಮಗ್ರೆ ಕುಟುಂಬ ಮಗನ ಅಂತಿಮ ವಿಧಿ ವಿಧಾನ ನೆರವೇರಿಸದೇ ಹೋದದ್ದನ್ನು ಪರಿಗಣಿಸಿ ಸೂಕ್ತ ಪರಿಹಾರ ನೀಡಿರುವುದು ಸರಿಯಾಗಿ ಇದೆ ಎಂದು ತೀರ್ಪು ಹೇಳಿದೆ.

ಅಮೀರ್‌ ಮಗ್ರೆ ಅವರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಅವರ ಕುಟುಂಬದವರಿಗೆ ಧಾರ್ಮಿಕ ವಿಧಿವಿಧಾನ ನೆರವೇರಿಸಲು ನಿರ್ದೇಶಿಸಿದ ಏಕ ಸದಸ್ಯ ಪೀಠದ ಆದೇಶವನ್ನು ಕೇಂದ್ರಾಡಳಿತ ಪ್ರದೇಶ ಸರ್ಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು.

ಮೇಲ್ನೋಟಕ್ಕೆಮಗ್ರೆ ಭಯೋತ್ಪಾದಕನೋ ಅಲ್ಲವೋ ಎಂಬುದನ್ನು ಲೆಕ್ಕಿಸದೆ ಆತನ ಕುಟುಂಬಕ್ಕೆ ಯೋಗ್ಯ ರೀತಿಯಲ್ಲಿ ಅಂತಿಮ ಸಂಸ್ಕಾರ ಮಾಡುವ ಹಕ್ಕನ್ನು ನೀಡಬೇಕಿತ್ತು. ಆದರೆ ಅದನ್ನು ನಿರಾಕರಿಸುವ ಮೂಲಕ ಸರ್ಕಾರ ಅನ್ಯಾಯದಿಂದ ನಡೆದುಕೊಂಡಿದೆ ಎಂದು ನ್ಯಾಯಾಲಯ ಹೇಳಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Union_Territory_of_J_K___Ors__v_Mohammad_Latief_Magrey___Anr.pdf
Preview