ಪ್ರಸಕ್ತ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ- ಎನ್‌ಐಆರ್‌ಎಫ್‌ನ ಕಾನೂನು ಶಾಲೆಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಅಗ್ರಸ್ಥಾನ ಕಾಯ್ದುಕೊಂಡಿದ್ದು ಸತತ ಆರನೇ ಬಾರಿಗೆ ಪ್ರಥಮ ಸ್ಥಾನ ಅಲಂಕರಿಸಿದೆ.
ಎರಡನೇ ಸ್ಥಾನದಲ್ಲಿ ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವಿದ್ದು ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ಮೂರನೇ ಸ್ಥಾನದಲ್ಲಿದೆ. 2021ರಲ್ಲಿಯೂ ಈ ಮೂರೂ ಸಂಸ್ಥೆಗಳು ಇದೇ ಸ್ಥಾನ ಪಡೆದಿದ್ದವು.
ಪುಣೆಯ ಸಿಂಬಿಯಾಸಿಸ್ ಕಾನೂನು ಶಾಲೆ (ಎಸ್‌ಎಲ್‌ಎಸ್) 2022ರಲ್ಲಿ ಮೂರನೇ ಸ್ಥಾನದಲ್ಲಿತ್ತು. ಆದರೆ ಈಗ ಅದು ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕೊಲ್ಕತ್ತಾದಲ್ಲಿರುವ ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯ (ಡಬ್ಲ್ಯೂಬಿಎನ್‌ಯುಜೆಎಸ್) ಕೊಲ್ಕತ್ತಾ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ಈ ವರ್ಷ ಟಾಪ್ 10ರಲ್ಲಿ ಹೊಸದಾಗಿ ಸ್ಥಾನ ಪಡೆದ ಏಕೈಕ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವೆಂದರೆ (ಎನ್‌ಎಲ್‌ಯು) ಗಾಂಧಿನಗರದ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಜಿಎನ್‌ಎಲ್‌ಯು). ಇದು ಏಳನೇ ಸ್ಥಾನದಲ್ಲಿದೆ. ಕಳೆದ ವರ್ಷ ಒಂಬತ್ತನೇ ಸ್ಥಾನ ಪಡೆದಿದ್ ಶಿಕ್ಷಾ ಓ ಅನುಸಂಧಾನ್ ಈ ವರ್ಷ 8 ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷಕ್ಕಿಂತ ಮೂರು ಶ್ರೇಯಾಂಕ ಕುಸಿತ ಕಂಡಿರುವ ಐಐಟಿ ಖರಗ್‌ಪುರ 9ನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ ಲಕ್ನೋದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯವು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು 10 ನೇ ಸ್ಥಾನದಲ್ಲಿದೆ.
ಟಾಪ್ 30 ಕಾನೂನು ಶಾಲೆಗಳನ್ನು ಒಳಗೊಂಡಿರುವ ಎನ್‌ಎಲ್‌ಯುಗಳಲ್ಲಿ ರಾಷ್ಟ್ರೀಯ ಕಾನೂನು ಸಂಸ್ಥೆ ವಿಶ್ವವಿದ್ಯಾಲಯ (ಎನ್‌ಎಲ್‌ಐಯು) ಭೋಪಾಲ್ [18ನೇ], ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಆರ್‌ಜಿಎನ್‌ಯುಎಲ್) [20ನೇ], ಪಟಿಯಾಲದ ಡಾ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಆರ್‌ಎಂಎಲ್‌ಎನ್‌ಎಲ್‌ಯು) ಲಕ್ನೋ [21ನೇ ], ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿವಿ (ಎನ್‌ಎಸ್‌ಯುಎಸ್‌ಆರ್‌ಎಲ್) [24ನೇ], ಅಸ್ಸಾಂನ ಕಾಮರೂಪದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಮತ್ತು ಜುಡಿಷಿಯಲ್ ಅಕಾಡೆಮಿ (ಎನ್‌ಎಲ್‌ಯುಜೆಎ) [28ನೇ] ಹಾಗೂ ಒಡಿಶಾದ ಕಟಕ್‌ನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ [30ನೇ] ಸ್ಥಾನ ಪಡೆದಿವೆ.
ಈ ವರ್ಷವೂ, 100 ಕಾನೂನು ಶಾಲೆಗಳು ಎನ್ಐಆರ್‌ಎಫ್ ಶ್ರೇಯಾಂಕ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು ಅವುಗಳ ಸ್ಥಾನಮಾನವನ್ನು ಈ ಹಿಂದಿನ ವರ್ಷಗಳಂತೆಯೇ ಕೆಳಗಿನ ಮಾನದಂಡಗಳನ್ನು ಬಳಸಿ ನಿರ್ಧರಿಸಲಾಗಿದೆ./
1. ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು (TLR)
2. ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ (RPC)
3. ಪದವಿ ಫಲಿತಾಂಶಗಳು (GO)
4. ತಲುಪುವಿಕೆ ಮತ್ತು ಒಳಗೊಳ್ಳುವಿಕೆ (OI)
5. ಗ್ರಹಿಕೆ