Spice Jet
Spice Jet 
ಸುದ್ದಿಗಳು

ಸ್ಪೈಸ್‌ಜೆಟ್‌ನ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

Bar & Bench

ಇತ್ತೀಚೆಗೆ ಉಂಟಾದ ಸುರಕ್ಷತಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಜನಸಾಮಾನ್ಯರ ಏರ್‌ಲೈನ್‌ ಸ್ಪೈಸ್‌ಜೆಟ್‌ನ ಎಲ್ಲಾ ಹಾರಾಟ ಸೇವೆಗಳನ್ನು ನಿಲ್ಲಿಸುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ರಾಹುಲ್ ಭಾರದ್ವಾಜ್ ಎಂಬ ವಕೀಲರು ತಮ್ಮ ಪುತ್ರ ಯುಗನ್ ಭಾರದ್ವಾಜ್ ಹೆಸರಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.

ಪ್ರಯಾಣಿಕರ ಜೀವ ಮತ್ತು ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡುವಂತಹ ಅಪಘಾತ ತಡೆಯುವ ಉದ್ದೇಶದಿಂದ ಸ್ಪೈಸ್‌ಜೆಟ್‌ನವಿಮಾನಗಳನ್ನು ಸ್ಥಗಿತಗೊಳಿಸಬೇಕಿದೆ. ಅನೇಕ ದುರ್ಘಟನೆಗಳು ಮತ್ತು ಕೂದಲೆಳೆಯಂಚಿನಲ್ಲಿ ಪಾರಾದ ಸನ್ನಿವೇಶಗಳು ಘಟಿಸಿದ್ದರೂ ನಾಗರಿಕವಿಮಾನಯಾನಮಹಾನಿರ್ದೇಶನಾಲಯ ಡಿಜಿಸಿಎ ಕ್ರಮ ಕೈಗೊಂಡಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ ಪ್ರಯಾಣಿಕರಿಗೆ ಒದಗಿಸಲಾದ ಜೀವಿಸುವ ಹಕ್ಕಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈಗಾಗಲೇ ಆರ್ಥಿಕ ಸಮಸ್ಯೆಯಲ್ಲಿ ಸುಳಿಯಲ್ಲಿ ಸಿಲುಕಿರುವ ಸ್ಪೈಸ್‌ಜೆಟ್‌ ಸರಣಿ ಅಪಘಾತಗಳ ನಂತರ ಇತ್ತೀಚೆಗೆ ಸುದ್ದಿಯಲ್ಲಿದೆ. ಸಂಸ್ಥೆಯ ದೆಹಲಿ- ದುಬೈವಿಮಾನ ತಾಂತ್ರಿಕದೋಷದಿಂದಾಗಿಕರಾಚಿಯಲ್ಲಿ ಇಳಿದರೆ ಮತ್ತೊಂದು ವಿಮಾನದ ವಿಂಡ್‌ಶೀಲ್ಡ್‌ ಒಡೆದಿತ್ತು. ಪಾಟ್ನಾದಿಂದ ಹಾರಾಟ ಆರಂಭಿಸಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ನಿಮಿಷಗಳಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಹಕ್ಕಿಯೊಂದು ಬಡಿದು ಅವಘಡ ಸಂಭವಿಸಿತ್ತು ಎಂದು ತನಿಖೆ ವೇಳೆ ಗೊತ್ತಾಗಿದೆ.