Karnataka and Supreme Court 
ಸುದ್ದಿಗಳು

ಕರ್ನಾಟಕದ ನ್ಯಾಯಾಧೀಶರು, ಸಚಿವರಿಗೆ ಹನಿ ಟ್ರ್ಯಾಪ್ ಆರೋಪ: ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್

ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರ ಮುಂದೆ ಸೋಮವಾರ ಉಲ್ಲೇಖಿಸಲಾಯಿತು. ಪ್ರಕರಣವನ್ನು ನಾಳೆ ಪಟ್ಟಿ ಮಾಡಲಾಗುವುದು ಎಂದು ಅವರು ಹೇಳಿದರು.

Bar & Bench

ದೇಶಾದ್ಯಂತ ಸಂಚಲನ ಮೂಡಿಸಿರುವ ಕರ್ನಾಟಕದಲ್ಲಿ ಹಿರಿಯ ಸಚಿವರು, ಶಾಸಕರು, ರಾಜಕೀಯ ನಾಯಕರು ಹಾಗೂ ನ್ಯಾಯಾಧೀಶರು ಸೇರಿದಂತೆ 48 ಜನರನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿದೆ.

ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರೆದುರು ಸೋಮವಾರ ಉಲ್ಲೇಖಿಸಲಾಯಿತು. ಪ್ರಕರಣವನ್ನು ನಾಳೆ ಪಟ್ಟಿ ಮಾಡಲಾಗುವುದು ಎಂದು  ಅವರು ಹೇಳಿದರು.

ಮಾರ್ಚ್ 20ರಂದು ರಾಜ್ಯ ವಿಧಾನಸಭೆಯಲ್ಲಿ ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ತಮ್ಮನ್ನು ಹನಿ ಟ್ರ್ಯಾಪ್‌ಗೆ ಕೆಡವುವ ಸಂಚು ನಡೆದಿತ್ತು ಎಂದು ಆರೋಪಿಸಿದ್ದರು.

ನ್ಯಾಯಾಧೀಶರು ಸೇರಿದಂತೆ ಪಕ್ಷಾತೀತವಾಗಿ 47 ಜನರನ್ನು ಗುರಿಯಾಗಿಸಿಕೊಂಡ ಗ್ಯಾಂಗ್‌ ಒಂದು ತಮಗೂ ಹನಿ ಟ್ರ್ಯಾಪ್‌ ಬೀಸಿತ್ತು ಎಂದು ಅವರು ದೂರಿದ್ದರು.

ಈ ಮಧ್ಯೆ, ಹನಿ ಟ್ರ್ಯಾಪ್‌ ವಿರುದ್ಧ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆದು 18 ಬಿಜೆಪಿ ಶಾಸಕರನ್ನು ಅಮಾನತುಗೊಂಡಿದ್ದರು.

ಕೃತ್ಯದ ತನಿಖೆಗೆ ಒತ್ತಾಯ ಕೇಳಿಬಂದಿರುವುದರ ಮಧ್ಯೆಯೇ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸುವ ಮೂಲಕ ಪ್ರಕರಣ ನ್ಯಾಯಾಲಯದ ಅಂಗಳ ತಲುಪಿದೆ.