ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೊಕ್ಸೊ ಕಾಯಿದೆ) ಅಡಿಯ ಅಪರಾಧಗಳಿಗೆ ಸಂಬಂಧಿಸಿದಂತೆ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸುವಾಗ ವೃಥಾ ಸಹಾನುಭೂತಿ ತೋರಿಸುವುದು ಕಾನೂನಿನ ಗುರಿ ಮತ್ತು ಉದ್ದೇಶವನ್ನು ಸೋಲಿಸುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಅಂಕಿತ್ ಮತ್ತು ಹರ್ಯಾಣ ಸರ್ಕಾರ ನಡುವಣ ಪ್ರಕರಣ].
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಮತ್ತು ಪೋಕ್ಸೋ ಕಾಯಿದೆಯ ಸೆಕ್ಷನ್ 10 (ಉಗ್ರವಾದ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಅರ್ಜಿದಾರರ ವಿರುದ್ಧದ ಶಿಕ್ಷೆಯನ್ನು ದೃಢಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ವಿನೋದ್ ಎಸ್ ಭಾರದ್ವಾಜ್ ಅವರು ಈ ವಿಚಾರ ತಿಳಿಸಿದರು.
ಅಪರಾಧದ ಸ್ವರೂಪ ಮತ್ತು ಸಂತ್ರಸ್ತೆಯದ್ದು ಕೇವಲ 08 ವರ್ಷದಷ್ಟು ಎಳೆಯ ವಯಸ್ಸು ಎಂಬುದನ್ನು ಗಮನಿಸಿದ ಏಕ ಸದಸ್ಯ ಪೀಠ ಆರೋಪಿಯ ಮನವಿಯನ್ನು ತಿರಸ್ಕರಿಸಿತು. ಅರ್ಜಿದಾರರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸುವ ವಿಚಾರಣಾ ನ್ಯಾಯಾಲಯದ ಅಪರಾಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.
ಸಂತ್ರಸ್ತೆಯ ದೇಹದ ಯಾವುದೇ ಭಾಗಕ್ಕೆ ಲೈಂಗಿಕ ಒಳಪ್ರವೇಶಿಕೆ ನಡೆದರೂ ಕೂಡ ಅದು ಸೆಕ್ಷನ್ 377ನ್ನು ಆಕರ್ಷಿಸಲಿದೆ. ಕೃತ್ಯದ ಹಿಂದಿನ ಪ್ರಧಾನ ಉದ್ದೇಶ ಲೈಂಗಿಕತೆಯಾಗಿರಬೇಕು ಎಂದ ಹೈಕೋರ್ಟ್ ಶಿಕ್ಷೆಯನ್ನು ಎತ್ತಿ ಹಿಡಿದು ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಿತು.