A1
A1
ಸುದ್ದಿಗಳು

ಮುಂದಿನ ಹಂತದಲ್ಲಿ ಪ್ರಕರಣಗಳ ಬಾಕಿ ಉಳಿಯುವಿಕೆ ತಗ್ಗಿಸಲು ಶ್ರಮಿಸಲಿರುವ ಇ-ಕೋರ್ಟ್ಸ್‌ ಯೋಜನೆ: ನ್ಯಾ. ಚಂದ್ರಚೂಡ್

Bar & Bench

ನ್ಯಾಯಾಲಯಗಳಲ್ಲಿ ಪ್ರಕರಣಗಳ ಬಾಕಿ ಉಳಿಯುವಿಕೆ ಕಡಿಮೆ ಮಾಡುವ ಮೂಲಕ ನ್ಯಾಯಾಂಗ ಪ್ರಕ್ರಿಯೆಯನ್ನು ಸುಲಭಗುಳಿಸುವುದು 'ಇ-ಕೋರ್ಟ್ಸ್‌' ಮೂರನೇ ಹಂತದ ಗುರಿ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಸೋಮವಾರ ತಿಳಿಸಿದರು.

ಲಾ ಸೊಸೈಟಿ ಆಫ್‌ ಇಂಗ್ಲೆಂಡ್‌ ಅಂಡ್‌ ವೇಲ್ಸ್‌ ಹಮ್ಮಿಕೊಂಡಿದ್ದ “ನಿರ್ಬಂಧಕ ಆಡಳಿತದಲ್ಲಿ ಮಾನವ ಹಕ್ಕುಗಳು: ನ್ಯಾಯಾಂಗ ವಿಮರ್ಶೆಯ ವಿಕಸನ” ಎಂಬ ವಿಷಯವಾಗಿ ಸರ್ವೋಚ್ಚ ನ್ಯಾಯಾಲಯದ ಇ ಸಮಿತಿ ಅಧ್ಯಕ್ಷರೂ ಆಗಿರುವ ಅವರು ತಿಳಿಸಿದರು.

ಸಮಾಜವಾದಿ ಪ್ರೇರಿತ ಕಲ್ಯಾಣ ರಾಜ್ಯದಿಂದ ಮಾರುಕಟ್ಟೆ ಚಾಲಿತ ಆರ್ಥಿಕತೆಗೆ ಭಾರತ ಹೊರಳಿರುವ ಕುರಿತಂತೆ ಚರ್ಚಿಸುವ ವೇಳೆ ದೀರ್ಘಕಾಲದ ಸಾಂವಿಧಾನಿಕ ಬದ್ಧತೆಗಳನ್ನು ಮರು ಮೌಲ್ಯಮಾಪನ ಮಾಡುವುದರ ಮಹತ್ವವನ್ನು ಅವರು ಒತ್ತಿ ಹೇಳಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ತಮ್ಮ ಕೆಲಸದ ಸಿಂಹ ಪಾಲು ವಾಣಿಜ್ಯ ಕಾನೂನಿಗೆ ಸಂಬಂಧಿಸಿದ ವ್ಯಾಜ್ಯಗಳೊಂದಿಗೆ ವ್ಯವಹರಿಸುವುದಾಗಿರುತ್ತದೆ. ಇದು ಖಾಸಗಿ ಪಕ್ಷಕಾರರ ನಡುವಿನ ಕೇವಲ ಕರಾರುಗಳಿಗೆ ಸಂಬಂಧಿಸಿದ ವ್ಯಾಜ್ಯಗಳು ಮಾತ್ರವೇ ಆಗಿರುವುದಿಲ್ಲ, ಬದಲಿಗೆ ಅರ್ಜಿದಾರರು ಮತ್ತು ನಿಯಂತ್ರಣ ಸಂಸ್ಥೆಗಳ ನಡುವಿನ ವ್ಯಾಜ್ಯಗಳೂ ಅಗಿರುತ್ತವೆ. ಇವುಗಳು ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರುವಂತವಾಗಿರುತ್ತವೆ. ಆದರೆ ಈ ವ್ಯಾಜ್ಯಗಳು ಸಂವಿಧಾನವನ್ನು ವ್ಯಾಖ್ಯಾನಿಸುವುದರಿಂದ ವಿಮುಖವಾಗದೆ ಅದರ ಸಂಕೇತವಾಗಿವೆ ಎಂದು ಹೇಳಿದರು.