A1
A1
ಸುದ್ದಿಗಳು

[ಜನಪ್ರತಿನಿಧಿ ಕಾಯಿದೆ] ಮತದಾನ ದಿನದ 48 ಗಂಟೆ ಮೊದಲ ʼಮೌನ ಪ್ರಚಾರʼ ಮರುಪರಿಶೀಲಿಸಬೇಕು: ಗುವಾಹಟಿ ಹೈಕೋರ್ಟ್

Bar & Bench

ಡಿಜಿಟಲ್‌ ಕ್ಷೇತ್ರ ವಿಸ್ತರಿಸಿರುವುದರಿಂದ ಮತ್ತು ವಿವಿಧ ಹಂತಗಳಲ್ಲಿ ಚುನಾವಣೆ ನಡೆಯುವುದರಿಂದ ಮತದಾನ ದಿವಸಕ್ಕೂ 48 ಗಂಟೆ ಮೊದಲು ಪ್ರಚಾರ ಮತ್ತು ಪ್ರಚಾರ ಸಾಮಗ್ರಿಗಳ ಪ್ರಕಟಣೆ ನಿರ್ಬಂಧಿಸುವ ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 126 ಅನ್ನು ಮರುಪರಿಶೀಲಿಸಬೇಕು ಎಂದು ಗುವಾಹಟಿ ಹೈಕೋರ್ಟ್‌ ಇತ್ತೀಚೆಗೆ ಕಿವಿಮಾತು ಹೇಳಿದೆ [ಡಾ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಭಾರತ ಚುನಾವಣಾ ಆಯೋಗ ಇನ್ನಿತರರ ನಡುವಣ ಪ್ರಕರಣ].

ಹಲವು ಹಂತಗಳಲ್ಲಿ ನಡೆಯುವ ಚುನಾವಣೆ ವೇಳೆ 48 ಗಂಟೆಗಳ 'ಮೌನ ಅವಧಿ' ಕುರಿತ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವ ಬಗ್ಗೆ ಆಲೋಚಿಸಬೇಕು ಎಂದು ನ್ಯಾ. ರೂಮಿ ಕುಮಾರಿ ಫುಕನ್‌ ತಿಳಿಸಿದ್ದಾರೆ.

"ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶ ಮತ್ತು ಎಲೆಕ್ಟ್ರಾನಿಕ್/ಡಿಜಿಟಲ್ ರಂಗ ಹಿಗ್ಗುತ್ತಿರುವ ಸಂದರ್ಭದಲ್ಲಿ ಚುನಾವಣಾ ಆಯೋಗ ಕೆಲ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಖುದ್ದು ಚುನಾವಣೆ ಘೋಷಿಸುತ್ತಿರುವಾಗ 1951ರಷ್ಟು ಹಿಂದೆಯೇ ಜಾರಿಗೆ ತಂದ ಜನಪ್ರತಿನಿಧಿ ಕಾಯಿದೆಯ ನಿಯಮಾವಳಿ ಸೆಕ್ಷನ್ 126ನ್ನು ಮರುಪರಿಶೀಲಿಸಲು ಇದು ಸಕಾಲ” ಎಂದು ತೀರ್ಪು ಹೇಳಿದೆ.

126 ರ ಉಲ್ಲಂಘನೆಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಅವರ ವಿರುದ್ಧದ 2019ರ ಪ್ರಕರಣ ರದ್ದುಗೊಳಿಸಿದ ಏಕ ಸದಸ್ಯ ಪೀಠ ಈ ಆದೇಶ ನೀಡಿತು.