ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ [ಸಲ್ಮಾನ್ ಖಾನ್ ಮತ್ತು ಅನಾಮಧೇಯ ವ್ಯಕ್ತಿಗಳ ನಡುವಣ ಪ್ರಕರಣ] .
ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಇಂದು ( ಡಿಸೆಂಬರ್ 11) ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.
ಅನಾಮಧೇಯ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ತಮ್ಮ ವ್ಯಕ್ತಿತ್ವ ಹಕ್ಕನ್ನು ಅನಧಿಕೃತವಾಗಿ ಬಳಸದಂತೆ ತಡೆಯಲು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ಗೆ ಸಲ್ಮಾನ್ ಮನವಿ ಮಾಡಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವ ಗುಣಲಕ್ಷಣಗಳನ್ನು ವಾಣಿಜ್ಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ನ್ಯಾಯಾಲಯಗಳ ಮೊರೆ ಹೋಗಿರುವ ಖ್ಯಾತನಾಮರ ಸುದೀರ್ಘ ಪಟ್ಟಿಗೆ ಈ ಹಿರಿಯ ನಟ ಸೇರಿದ್ದಾರೆ.
ಈ ಹಿಂದೆ ಚಿತ್ರರಂಗದ ದಿಗ್ಗಜರಾದ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಅಭಿಷೇಕ್ ಬಚ್ಚನ್, ನಾಗಾರ್ಜುನ, ಅನಿಲ್ ಕಪೂರ್, ಜಾಕಿ ಶ್ರಾಫ್, ಕರಣ್ ಜೋಹರ್, ಅಧ್ಯಾತ್ಮ ಕ್ಷೇತ್ರದ ಶ್ರೀ ರವಿಶಂಕರ , ಜಗ್ಗಿ ವಾಸುದೇವ್ ಮತ್ತಿತರರು ವ್ಯಕ್ತಿತ್ವ ಹಕ್ಕುಗಳಿಗೆ ದೆಹಲಿ ಹೈಕೋರ್ಟ್ ರಕ್ಷಣೆ ನೀಡಿದೆ.
ಡಿಎಸ್‌ಕೆ ಲೀಗಲ್‌ನ ಪರಾಗ್ ಎಚ್ ಖಾಂಧರ್ ಮತ್ತು ಚಂದ್ರಿಮಾ ಮಿತ್ರಾ ಸಲ್ಮಾನ್ ಖಾನ್ ಅವರು ಮೊಕದ್ದಮೆ ಹೂಡಿದ್ದಾರೆ.