<div class="paragraphs"><p>Supreme Court and Prajwal Revanna</p></div>

Supreme Court and Prajwal Revanna

 
ಸುದ್ದಿಗಳು

[ಪ್ರಜ್ವಲ್ ರೇವಣ್ಣ ಆಯ್ಕೆ] ಹೈಕೋರ್ಟ್ ಆದೇಶ ಅಸಿಂಧು ಎಂದ ಸುಪ್ರೀಂ; ಹೊಸದಾಗಿ ಅಫಿಡವಿಟ್ ಸಲ್ಲಿಸಲು ಎ ಮಂಜುಗೆ ಅನುಮತಿ

Bar & Bench

ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್‌ ರೇವಣ್ಣ ಆಯ್ಕೆ ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಎ ಮಂಜು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಅಸಿಂಧುಗೊಳಿಸಿದೆ.

ಪ್ರಜ್ವಲ್ ರೇವಣ್ಣ ಅವರು ನಿಯಮ ಉಲ್ಲಂಘಿಸಿದ್ದಾರೆಯೇ ಇಲ್ಲವೇ ಎಂಬುದು ತನಿಖೆಗೆ ಒಳಪಡಬೇಕಾದ ವಿಚಾರ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಆದೇಶ ಅಸಿಂಧುಗೊಳಿಸಿತು.

ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಜ್ವಲ್‌ ಅವರು ನಾಮಪತ್ರ ಸಲ್ಲಿಸುವಾಗ ಪೂರ್ಣಪ್ರಮಾಣದಲ್ಲಿ ಆಸ್ತಿ ವಿವರ ಘೋಷಿಸಿಲ್ಲ ಎಂದು ಅರ್ಜಿದಾರರಾದ ಮಂಜು ದೂರಿದ್ದರು. ಆದರೆ ಜ. 17ರಂದು ರಾಜ್ಯ ಹೈಕೋರ್ಟ್‌ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಂಜು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.

ಚುನಾವಣೆ ನಡೆದು ಈಗಾಗಲೇ ಎರಡೂವರೆ ವರ್ಷ ಕಳೆದಿರುವುದರಿಂದ ಪ್ರಕರಣವನ್ನು ಹೊಸದಾಗಿ ಗಣನೆಗೆ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್‌ಗೆ ಸೂಚಿಸಿದ ಪೀಠ ಹದಿನೈದು ದಿನಗಳಲ್ಲಿ ಹೊಸ ಅಫಿಡವಿಟ್‌ ಸಲ್ಲಿಸಲು ಮಂಜು ಅವರಿಗೆ ಅನುಮತಿಸಿತು.

ಪೀಠದ ಆದೇಶವನ್ನು ಇಲ್ಲಿ ಓದಿ:

A Manju Versus Prajwal Revanna.pdf
Preview