ಸುದ್ದಿಗಳು

ಪಾವತಿದಾರ ಗ್ರಾಹಕರಿಗೆ ಸೂಕ್ಷ್ಮ ಮಾಹಿತಿ ಪ್ರಸರಣ: ಬಿಎಸ್ಇಗೆ ಸೆಬಿ ₹25 ಲಕ್ಷ ದಂಡ

ಬಿಎಸ್‌ಇಯು ಫೆಬ್ರವರಿ 2021ರಿಂದ ಸೆಪ್ಟೆಂಬರ್ 2022ರ ನಡುವೆ, ತನ್ನ ಪಾವತಿದಾರ ಗ್ರಾಹಕರಿಗೆ ಇತರರಿಗಿಂತ ಮೊದಲು ಅಪ್ರಕಟಿತ ಬೆಲೆ-ಸೂಕ್ಷ್ಮ ಮಾಹಿತಿಯನ್ನು ಲಭ್ಯವಾಗುವಂತೆ ಅನುವು ಮಾಡಿಕೊಟ್ಟಿದೆ ಎಂಬುದು ಪತ್ತೆಯಾಗಿತ್ತು.

Bar & Bench

ಮಾಹಿತಿ ಪ್ರಸರಣ ಮತ್ತು ಗ್ರಾಹಕ ಸಂಹಿತೆ ಮಾರ್ಪಾಡು ಮೇಲ್ವಿಚಾರಣೆಯಲ್ಲಿ ವ್ಯವಸ್ಥಿತ ವೈಫಲ್ಯ ಪತ್ತೆಯಾದ ಹಿನ್ನೆಲೆಯಲ್ಲಿ, ಭಾರತೀಯ ಷೇರು ವಿನಿಮಯ ಮಂಡಳಿ (ಸೆಬಿ) ಬುಧವಾರ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್‌ಗೆ (ಬಿಎಸ್‌ಇ) ಒಟ್ಟು ₹25 ಲಕ್ಷ ದಂಡ ವಿಧಿಸಿದೆ.

ಫೆಬ್ರವರಿ 2021ರಿಂದ ಸೆಪ್ಟೆಂಬರ್ 2022ರ ನಡುವೆ, ತನ್ನ ಸಿಸ್ಟಮ್ ಆರ್ಕಿಟೆಕ್ಚರ್ ಮುಖಾಂತರ ಪಾವತಿದಾರ ಗ್ರಾಹಕರಿಗೆ ಇತರರಿಗಿಂತ ಮೊದಲು ಅಪ್ರಕಟಿತ ಬೆಲೆ-ಸೂಕ್ಷ್ಮ ಮಾಹಿತಿಯನ್ನು ಸ್ವೀಕರಿಸಲು ಬಿಎಸ್ಇ ಅನುವು ಮಾಡಿಕೊಟ್ಟಿದೆ ಎಂಬುದು ಪತ್ತೆಯಾಗಿತ್ತು.

ಇದು ತನ್ನ ಸಹವರ್ತಿಗಳು ಮತ್ತು ಸಂಬಂಧಿತ ಘಟಕಗಳ ಬಗ್ಗೆ ಪಕ್ಷಪಾತಕ್ಕೆ ಅವಕಾಶ ಇಲ್ಲದೆ ಎಲ್ಲರಿಗೂ ಸಮಾನ, ಅನಿಯಂತ್ರಿತ, ಪಾರದರ್ಶಕ ಮತ್ತು ನ್ಯಾಯಯುತ ಲಭ್ಯತೆ ಒದಗಿಸುವ 2018ರ ಷೇರು ಒಪ್ಪಂದ (ನಿಯಂತ್ರಣ) ನಿಯಮಾವಳಿಯ  39(3)ನೇ ನಿಯಮವನ್ನು ಉಲ್ಲಂಘಿಸಿದೆ ಎಂದು ಸೆಬಿ ಹೇಳಿದೆ.

ಹೀಗಾಗಿ ಲಭ್ಯತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಾಯಿದೆಯ ಸೆಕ್ಷನ್ 23ಎಚ್‌ ಅಡಿಯಲ್ಲಿ ₹15 ಲಕ್ಷ ಮತ್ತು ನಿಯಂತ್ರಕ ಸುತ್ತೋಲೆಗಳನ್ನು ಪಾಲಿಸದಿದ್ದಕ್ಕಾಗಿ ಸೆಬಿ ಕಾಯಿದೆಯ 15ಎಚ್‌ಬಿ ಅಡಿಯಲ್ಲಿ ₹10 ಲಕ್ಷ ದಂಡವನ್ನು ಅದು ವಿಧಿಸಿದೆ.  ಬಿಎಸ್‌ಇ ಪರವಾಗಿ ಹಿರಿಯ ವಕೀಲ ಪಿ ಎನ್ ಮೋದಿ ವಾದ ಮಂಡಿಸಿದರು.