Vivek Reddy, Newly elected president of AAB

 
ಸುದ್ದಿಗಳು

ಬೆಂಗಳೂರು ವಕೀಲರ ಸಂಘದ ಚುನಾವಣೆ: ಹಿರಿಯ ವಕೀಲ ವಿವೇಕ್ ರೆಡ್ಡಿ ನೂತನ ಅಧ್ಯಕ್ಷ

ವಿವೇಕ್ ಅವರು 4,804 ಮತಗಳನ್ನು ಪಡೆದಿದ್ದರೆ ಸಮೀಪದ ಪ್ರತಿಸ್ಪರ್ಧಿ, ಎಎಬಿಯ ಹಾಲಿ ಅಧ್ಯಕ್ಷ ಎ ಪಿ ರಂಗನಾಥ ಅವರು 2,894 ಮತಗಳನ್ನು ಗಳಿಸಿದರು.

Bar & Bench

ಬೆಂಗಳೂರು ವಕೀಲರ ಸಂಘಕ್ಕೆ ಇಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ವಿವೇಕ್‌ ರೆಡ್ಡಿ ಚುನಾಯಿತರಾಗಿದ್ದಾರೆ. ವಿವೇಕ್‌ ಅವರು 4,804 ಮತಗಳನ್ನು ಪಡೆದಿದ್ದರೆ ಸಮೀಪದ ಪ್ರತಿಸ್ಪರ್ಧಿ, ಎಎಬಿಯ ಹಾಲಿ ಅಧ್ಯಕ್ಷ ಎ ಪಿ ರಂಗನಾಥ ಅವರು 2,894 ಮತಗಳನ್ನು ಗಳಿಸಿದರು.

ಅಧ್ಯಕ್ಷ ಸ್ಥಾನದ ಉಳಿದ ಆಕಾಂಕ್ಷಿಗಳಾಗಿದ್ದ ಆರ್‌ ರಾಜಣ್ಣ ಅವರು 2545 ಮತಗಳನ್ನು ಹಾಗೂ ಮಾಜಿ ಅಧ್ಯಕ್ಷ ಎಚ್‌ ಸಿ ಶಿವರಾಮು ಅವರು 870 ಮತಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಒಟ್ಟು 16,568 ಮತಗಳಲ್ಲಿ 11,131 ಮತಗಳು ಚಲಾವಣೆಯಾಗಿದ್ದವು. ಸಿಟಿ ಸಿವಿಲ್‌ ಕೋರ್ಟ್‌ನಿಂದ 6,151, ಹೈಕೋರ್ಟ್‌ನಿಂದ 2,046, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಿಂದ 2,089, ಮೇಯೋ ಹಾಲ್‌ ಕೋರ್ಟ್‌ನಿಂದ 8,44 ಮತಗಳು ಚಲಾವಣೆಯಾಗಿದ್ದವು. ಇಂದು ಸಂಜೆ ಐದು ಗಂಟೆಗೆ ಮತದಾನದ ಪ್ರಕ್ರಿಯೆ ಪೂರ್ಣಗೊಂಡು ರಾತ್ರಿ ಫಲಿತಾಂಶ ಪ್ರಕಟವಾಯಿತು.

ಇದೇ ವೇಳೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಟಿ ಜಿ ರವಿ ಗೆಲುವು ಸಾಧಿಸಿದ್ದಾರೆ. ಹಾಲಿ ಪ್ರಧಾನ ಕಾರ್ಯದರ್ಶಿ ಎ ಎನ್‌ ಗಂಗಾಧರಯ್ಯ, ಹಾಲಿ ಖಜಾಂಚಿ ಶಿವಮೂರ್ತಿ, ದುರ್ಗಾ ಪ್ರಸಾದ್‌ ಎಚ್‌ ಆರ್‌, ಪ್ರವೀಣ್‌ ಗೌಡ ಎಚ್‌ ವಿ, ರಾಮಲಿಂಗ ಪಿ, ಶ್ರೀನಿವಾಸ ಮೂರ್ತಿ ಡಿ ಹಾಗೂ ವಿಶ್ವನಾಥ್‌ ಕೆ ಪಿ ಸೇರಿದಂತೆ 8 ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪೈಪೋಟಿ ನಡೆಸಿದ್ದರು. ಖಜಾಂಚಿ ಸ್ಥಾನಕ್ಕೆ ಒಟ್ಟು 10 ಮಂದಿ ಸ್ಪರ್ಧಿಸಿದ್ದು ಹರೀಶ ಎಂ ಟಿ ವಿಜಯಿಯಾಗಿದ್ದಾರೆ.