ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷರಾಗಿ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಸತತ ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ವಿವೇಕ್ 6,820 ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ.
4,518 ಮತ ಪಡೆಯುವ ಮೂಲಕ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಅವರು ವಿವೇಕ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಉಳಿದಂತೆ ಆರ್ ರಾಜಣ್ಣ ಅವರು 1,473 ಮತ ಪಡೆದಿದ್ದು, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಕೇವಲ 378 ಮತ ಪಡೆದಿದ್ದಾರೆ. 123 ಮತ ಪಡೆದಿರುವ ನಂಜಪ್ಪ ಕಾಳೇಗೌಡ ಮತ್ತು 90 ಮತ ಪಡೆದಿರುವ ಟಿ ಎ ರಾಜಶೇಖರ್ ಸ್ಪರ್ಧೆ ಔಪಚಾರಿಕವಾಗಿತ್ತು. ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ವಿವೇಕ್ ಸುಬ್ಬಾರೆಡ್ಡಿ ಅವರು ಅಂತಿಮವಾಗಿ ಗೆಲುವಿನ ನಗೆ ಬೀರಿದ್ದಾರೆ.
ಇದೇ ಮೊದಲ ಬಾರಿಗೆ ಸೃಷ್ಟಿಸಲಾಗಿರುವ ಉಪಾಧ್ಯಕ್ಷ ಹುದ್ದೆಗೆ ಸಿ ಎಸ್ ಗಿರೀಶ್ ಕುಮಾರ್ ಚುನಾಯಿತರಾಗಿದ್ದಾರೆ. ಗಿರೀಶ್ 5060 ಮತ ಪಡೆಯುವ ಮೂಲಕ ಸಮೀಪ ಸ್ಪರ್ಧಿ ಮುನಿಯಪ್ಪ ಸಿ ಆರ್ ಗೌಡ (3,128 ಮತ) ವಿರುದ್ಧ ವಿಜಯ ಸಾಧಿಸಿದ್ದಾರೆ. ಎ ವೇದಮೂರ್ತಿ 2, 806, ಟಿ ಸಿ ಸಂತೋಷ್ 1,542, ಆರ್ ಸುವರ್ಣಾ 421 ಮತ್ತು ಕೆ ವೆಂಕಟ ರೆಡ್ಡಿ 237 ಮತ ಪಡೆದು ಪರಾಭವಗೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ 4,854 ಮತ ಪಡೆಯುವ ಮೂಲಕ ಎಚ್ ವಿ ಪ್ರವೀಣ್ ಗೌಡ ಆಯ್ಕೆಯಾಗಿದ್ದಾರೆ. ಮಾಜಿ ಖಜಾಂಚಿ ಎಂ ಟಿ ಹರೀಶ್ 3,728, ಮಾಜಿ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ 2,321, ಕೆ ಅಕ್ಕಿ ಮಂಜುನಾಥ್ ಗೌಡ 2,188, ಎಂ ಎಚ್ ಚಂದ್ರಶೇಖರ್ 124 ಮತ ಪಡೆದು ಸೋತಿದ್ದಾರೆ.
ಇನ್ನು ಮಹಿಳೆಯರಿಗೆ ಮೀಸಲಾಗಿರುವ ಖಜಾಂಚಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ತೀವ್ರ ಪೈಪೋಟಿ ಎದುರಿಸಿ 2,950 ಮತ ಪಡೆದು ಶ್ವೇತಾ ರವಿಶಂಕರ್ ಆಯ್ಕೆಯಾಗಿದ್ದಾರೆ. ಗೀತಾ ರಾಜ್ 1,860, ಕೆ ವಿ ಮಮತಾ 1,760, ಕೆ ಶೈಲಜಾ 1,267, ವಿ ಹೇಮಲತಾ 1,142, ಎಚ್ ಆರ್ ಅನಿತಾ 495, ಎಲ್ ಮಂಜುಳಾ 534, ಪಿ ಮಂಜುಳಾ 500, ಎಂ ಮಂಜುಳಮ್ಮ 274, ಕೆ ಮೀನಾಕ್ಷಿ 636, ರುಖೈಬಿ 196, ಸಂಧ್ಯಾ ಜಮದಾಗ್ನಿ 497, ಜಿ ಸುಧಾ 253, ಎಸ್ ಸುಧಾ 215, ಪಿ ಕೆ ಸ್ವಪ್ನಾ 435, ಎಂ ಎಂ ವಹೀದಾ 357 ಮತ ಪಡೆದು ಸೋಲುಂಡಿದ್ದಾರೆ.
ಆಡಳಿತ ಮಂಡಳಿಗೆ ನಾಲ್ಕು ಘಟಕಗಳಿಂದ 38 ಮಂದಿ ಆಯ್ಕೆಯಾಗಿದ್ದಾರೆ. ವಿವರ ಇಂತಿದೆ.
ಹೈಕೋರ್ಟ್ ಘಟಕ: ಎ ಹಿರೇಮಠ, ಬಾಲಕೃಷ್ಣ ಚಾಮರಾಜ, ಚಂದ್ರಕಾಂತ ಪಾಟೀಲ್, ಅರವಿಂದ್ ಕಾಮತ್ ರಾಜು ಎಸ್. ಮಹಿಳಾ ವಿಭಾಗದಲ್ಲಿ ಸಂಧ್ಯಾ, ದೀಕ್ಷಾ ಮತ್ತು ಹರಿಣಿ ಆಯ್ಕೆಯಾಗಿದ್ದಾರೆ.
ಮೆಯೊ ಹಾಲ್ ಕೋರ್ಟ್: ಎ ಪಿ ನಟೇಶ್, ಕೆ ಮೋಹನ್, ಡಿ ಗುಣಶೇಖರ್, ಹಿತೇಶ್ ಕುಮಾರ್, ಭಕ್ತವತ್ಸಲ ಮತ್ತು ಮಹಿಳಾ ವಿಭಾಗದಿಂದ ಕೆ ವಿ ರವಿಲಾ ಮತ್ತು ಉದಿತಾ ರಮೇಶ್ ಚುನಾಯಿತರಾಗಿದ್ದಾರೆ.
ಮ್ಯಾಜಿಸ್ಟ್ರೇಟ್ ಕೋರ್ಟ್: ಪ್ರಸನ್ನ ಕೆಂಪೇಗೌಡ, ಕೆ ಸಿ ಸತೀಶ್, ಅನಿಲ್ ಕುಮಾರ್, ಪ್ರಭು, ಶಿವಶಂಕರ್ ಮತ್ತು ಮಹಿಳಾ ವಿಭಾಗದಲ್ಲಿ ಅಂದಲಿ ಮತ್ತು ಸುಜಾತಾ ಗೆಲುವಿನ ನಗೆ ಬೀರಿದ್ದಾರೆ.
ಸಿಟಿ ಸಿವಿಲ್ ಕೋರ್ಟ್: ಕೆ ಎನ್ ಅಂಬರೀಶ್, ಶಶಿಕುಮಾರ್ ಗೌಡ, ಅಂಜನ್‌ಕುಮಾರ್ ಗೌಡ, ತೇಜಸ್ವಿ ಗೌಡ, ಮುನಿರಾಜು, ಪುಟ್ಟರಾಜು, ಕಾಂತರಾಜು, ಕುಮಾರ್ ಆರ್.ಎಸ್. ಗೌಡ, ಚನ್ನಪ್ಪ ಗೌಡ, ರಾಕೇಶ್, ಜಿ ನಾಗರಾಜ ಮತ್ತು ಮಹಿಳಾ ವಿಭಾಗದಿಂದ ಎಂ ಆಶಾ, ವೀಣಾ ರಾವ್, ಜೆ ಮಮತಾ ಮತ್ತು ಸಿ ಶಾರದಾ ಜಯ ಸಾಧಿಸಿದ್ದಾರೆ.