Sikkim High Court  
ಸುದ್ದಿಗಳು

ರಾಜ್ಯ ಸರ್ಕಾರದ ʼಒಂದು ಕುಟುಂಬ ಒಂದು ಸರ್ಕಾರಿ ಕೆಲಸʼ ಯೋಜನೆ ಎತ್ತಿ ಹಿಡಿದ ಸಿಕ್ಕಿಂ ಹೈಕೋರ್ಟ್

ಮಾಜಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಪ್ರಾರಂಭಿಸಿದ ಈ ಯೋಜನೆಯಡಿ 13,000ಕ್ಕೂ ಹೆಚ್ಚು ನಾಗರಿಕರು ಉದ್ಯೋಗ ಪಡೆದಿದ್ದಾರೆ ಎಂಬುದನ್ನು ಗಮನಿಸಿದ ವಿಭಾಗೀಯ ಪೀಠ.

Bar & Bench

ರಾಜ್ಯ ಸರ್ಕಾರದ ʼಒಂದು ಕುಟುಂಬ ಒಂದು ಸರ್ಕಾರಿ ಕೆಲಸʼ ಯೋಜನೆಯನ್ನು ಸಿಕ್ಕಿಂ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದ್ದು ಯೋಜನೆಯ ಸತ್ಯಾಸತ್ಯತೆಗಳ ಬಗ್ಗೆ ಯಾವುದೇ ಸಂದೇಹವಿಲ್ಲ, ಇದು ನಾಗರಿಕರಿಗೆ ಉಪಯುಕ್ತ ಎಂದು ತಿಳಿಸಿತು. [ಹೆನ್ನಾ ಸುಬ್ಬಾ ಮತ್ತಿತರರು ಹಾಗೂ ಸಿಕ್ಕಿಂ ಸರ್ಕಾರ ನಡುವಣ ಪ್ರಕರಣ].

ಮಾಜಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಪ್ರಾರಂಭಿಸಿದ ಈ ಯೋಜನೆಯಡಿ 13,000ಕ್ಕೂ ಹೆಚ್ಚು ನಾಗರಿಕರು ಉದ್ಯೋಗ ಪಡೆದಿದ್ದಾರೆ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೋಮದ್ದರ್ ಮತ್ತು ನ್ಯಾಯಮೂರ್ತಿ ಮೀನಾಕ್ಷಿ ಮದನ್ ರೈ ಅವರಿದ್ದ ವಿಭಾಗೀಯ ಪೀಠ ಗಮನಿಸಿತು.

“ಸಿಕ್ಕಿಂ ರಾಜ್ಯದಲ್ಲಿ ನೆಲೆಸಿರುವ 13,000ಕ್ಕೂ ಹೆಚ್ಚು ನಾಗರಿಕರು ಈ ಪ್ರಕ್ರಿಯೆಯಲ್ಲಿ (ಯೋಜನೆಯಲ್ಲಿ) ಉದ್ಯೋಗ ಪಡೆದಿದ್ದಾರೆ. ಹಾಗಾಗಿ ಒಂದು ಕುಟುಂಬಕ್ಕೆ ಒಂದು ಉದ್ಯೋಗ ಒದಗಿಸುವ ಅದರ ಉದ್ದೇಶ ಮತ್ತು ಯೋಜನೆಯಡಿ ಕೈಗೊಂಡ ಕ್ರಮಗಳ ಪ್ರಾಮಾಣಿಕತೆಯನ್ನು ಅನುಮಾನಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

“ತಡವಾಗಿರುವ ಈ ಹಂತದಲ್ಲಿ ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯನ್ನು ಕೂಲಂಕಷವಾಗಿ ವಿಶ್ಲೇಷಿಸಲು ಸಾಧ್ಯವಿಲ್ಲ ಎಂದ ಪೀಠ ಅದರಲ್ಲಿಯೂ ವಿಶೇಷವಾಗಿ ಯೋಜನೆಯಡಿ ಉದ್ಯೋಗ ಪಡೆದ ಎಲ್ಲರನ್ನೂ ಪಕ್ಷಕಾರರನ್ನಾಗಿ ಮಾಡಬೇಕಾಗುತ್ತದೆ” ಎಂದು ತಿಳಿಸಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Henna_Subba_vs_State_of_Sikkim.pdf
Preview