A1
ಸುದ್ದಿಗಳು

ಶ್ರವಣದೋಷವುಳ್ಳ ವಕೀಲೆ ಸಾರಾ ವಾದ ಮಂಡನೆಗಾಗಿ ಸಂಜ್ಞಾ ವ್ಯಾಖ್ಯಾನಕಾರರ ನೇಮಕಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ವಿವೇಕ್ ಸಕ್ಸೇನಾ ಅವರು ರಿಜಿಸ್ಟ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Bar & Bench

ಶ್ರವಣದೋಷವುಳ್ಳ ವಕೀಲೆ ಸಾರಾ ವಾದಕ್ಕೆ ಅನುಕೂಲವಾಗುವಂತೆ ಸಂಜ್ಞಾ ವ್ಯಾಖ್ಯಾನಕಾರರ ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ತನ್ನ ರಿಜಿಸ್ಟ್ರಿಗೆ ನಿರ್ದೇಶನ ನೀಡಿದ್ದು, ಸಂಜ್ಞಾ ವ್ಯಾಖ್ಯಾನಕಾರರ ವೆಚ್ಚವನ್ನು ನ್ಯಾಯಾಲಯ ಭರಿಸಲಿದೆ.

ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್‌ ವಿವೇಕ್‌ ಸಕ್ಸೇನಾ ಅವರು ರಿಜಿಸ್ಟ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಕೀಲೆ ಸಾರಾ ಅವರಿಗೆ ಸಂಜ್ಞಾ ವ್ಯಾಖ್ಯಾನಕಾರರ ನೇಮಕ ಮಾಡುವಂತೆ ಕೋರಿ ವಕೀಲೆ ಸಂಚಿತಾ ಐನ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದೆ.

ಸಾರಾ ಅವರು ಸೆಪ್ಟೆಂಬರ್ 22ರಂದು ತಮ್ಮದೇ ಆದ ಸಂಜ್ಞಾ ವ್ಯಾಖ್ಯಾನಕಾರರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ವೈಕಲ್ಯತೆಯುಳ್ಳ ವಕೀಲರ ಸ್ನೇಹಿಯಾಗಬೇಕಾದ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಜೆಐ ಡಿ ವೈ ಚಂದ್ರಚೂಡ್‌ ಅವರು, “ಇದನ್ನು ಸಾಧ್ಯವಾಗಿಸಲು ತುಂಬಾ ಸಮಯ ಹಿಡಿಯಿತು. ಈ ಕಾರ್ಯ ಬಹಳ ಹಿಂದೆಯೇ ನಡೆಯಬೇಕಿತ್ತು” ಎಂದು ಹೇಳಿದ್ದರು.