ಸುದ್ದಿಗಳು

ಸಿಜೆಐ ಡಿ ವೈ ಚಂದ್ರಚೂಡ್ ಹೆಸರಿನಲ್ಲಿ ಸುಳ್ಳು ಸುದ್ದಿ: ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್

Bar & Bench

ಸಾಮಾಜಿಕ ಮಾಧ್ಯಮ ಮತ್ತು ಮೆಸೆಂಜರ್ ಅಪ್ಲಿಕೇಶನ್‌ಗಳಲ್ಲಿ ಹರಡುತ್ತಿರುವ ನಕಲಿ ಸುದ್ದಿಯೊಂದರ ಕುರಿತು ಸುಪ್ರೀಂ ಕೋರ್ಟ್‌ನ ಸಾರ್ವಜನಿಕ ಸಂಪರ್ಕ ಕಚೇರಿ (ಪಿಆರ್‌ಒ) ಎಚ್ಚರಿಕೆ ನೀಡಿದ್ದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದೆ ಎಂದು ಆರೋಪಿಸಿದೆ.

'ಸರ್ವಾಧಿಕಾರಿ ಸರ್ಕಾರದ' ವಿರುದ್ಧ ಒಗ್ಗಟ್ಟಾಗಿ ಬೀದಿಗಿಳಿಯುವಂತೆ ಸಿಜೆಐ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಡಿರುವ ಸುದ್ದಿ ನಕಲಿ, ದುರುದ್ದೇಶಪೂರಿತ ಮತ್ತು ಕಿಡಿಗೇಡಿತನದಿಂದ ಕೂಡಿದ್ದು ಸಿಜೆಐ ಅಥವಾ ಅವರಿಗೆ ಸಂಬಂಧಿಸಿದವರಾರು ಈ ಬಗೆಯ ಹೇಳಿಕೆ ನೀಡಿಲ್ಲ ಎಂದು ಪಿಆರ್‌ಒ ಕಚೇರಿ ತಿಳಿಸಿದೆ.

ಅಲ್ಲದೆ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಿಆರ್‌ಒ ಕಚೇರಿ ತಿಳಿಸಿದೆ.

[ಪತ್ರಿಕಾ ಹೇಳಿಕೆಯ ಪ್ರತಿಯನ್ನು ಇಲ್ಲಿ ಓದಿ]

Supreme_Court_Press_Release.pdf
Preview