A1
ಸುದ್ದಿಗಳು

ಲಿಂಗತ್ವ ಅಸೂಕ್ಷ್ಮತೆ ತೊಡೆದು ಹಾಕಲು ಸುಪ್ರೀಂ ಕೋರ್ಟ್‌ ಕೈಪಿಡಿ ಬಿಡುಗಡೆ: ನ್ಯಾಯಾಲಯಗಳು ಪಾಲಿಸಬೇಕಾದ ವಿವರಗಳ ಉಲ್ಲೇಖ

Bar & Bench

ನ್ಯಾಯಾಲಯದ ಆದೇಶಗಳು ಮತ್ತು ಕಾನೂನು ದಾಖಲೆಗಳಲ್ಲಿ ಅನುಚಿತ ಲಿಂಗತ್ವ ಪದಗಳ ಬಳಕೆಯನ್ನು ತಪ್ಪಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಬುಧವಾರ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ.

ವಿವಿಧ ತೀರ್ಪುಗಳಲ್ಲಿ ನ್ಯಾಯಾಲಯಗಳು ಅರಿವಿಲ್ಲದೆಯೇ ಬಳಸಿದ ಅಸೂಕ್ಷ್ಮ ಪದಗಳನ್ನು ʼಹ್ಯಾಂಡ್‌ಬುಕ್‌ ಆನ್‌ ಕಂಬ್ಯಾಟಿಂಗ್‌ ಜೆಂಡರ್‌ ಸ್ಟೀರಿಯೋಟೈಪ್ಸ್‌ʼ ಹೆಸರಿನ  ಪುಸ್ತಕದಲ್ಲಿ ಗುರುತಿಸಲಾಗಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ತಿಳಿಸಿದ್ದಾರೆ.

ಲಿಂಗತ್ವ ಅಸೂಕ್ಷ್ಮತೆಗೆ ಸಂಬಂಧಿಸಿದ ಭಾಷೆಯನ್ನು ಗುರುತಿಸುವ ಮೂಲಕ ಅಸೂಕ್ಷ್ಮತೆ ತಪ್ಪಿಸಲು 'ಕೈಪಿಡಿ'ಯು ನ್ಯಾಯಾಧೀಶರಿಗೆ ಸಹಾಯ ಮಾಡಲಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಅಸೂಕ್ಷ್ಮ ಪದಗಳನ್ನು ನ್ಯಾಯಾಧೀಶರು ಭವಿಷ್ಯದಲ್ಲಿ ಬಳಸದೇ ಇರಲಿ ಎಂಬ ಕಾರಣಕ್ಕೆ ಕೈಪಿಡಿ ಹೊರತರಲಾಗಿದ್ದು ಇಲ್ಲಿ ಉಲ್ಲೇಖಿಸಿರುವ ಕೆಲ ತೀರ್ಪುಗಳನ್ನು ಆ ತೀರ್ಪು ಬರೆದ ನ್ಯಾಯಾಧೀಶರಿಗೆ ಅಪನಿಂದನೆ ಮಾಡಲಿ ಎಂಬ ಉದ್ದೇಶದಿಂದ ಪ್ರಕಟಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇ-ಫೈಲಿಂಗ್‌ಗಾಗಿ ಕೈಪಿಡಿ ಹಾಗೂ ತರಬೇತಿ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ ಜಾಲತಾಣದಲ್ಲಿ  ಪ್ರಕಟಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಚಂದ್ರಚೂಡ್‌ ಅವರು ಲಿಂಗ ತಟಸ್ಥ ವಿಶ್ರಾಂತಿ ಕೊಠಡಿಗಳು ಮತ್ತು ಆನ್‌ಲೈನ್‌ ಹಾಜರಿ ಚೀಟಿಗಳ ವಿತರಣೆಗೆ ಅನುಮೋದನೆ ನೀಡಿದ್ದರು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ಕಟ್ಟಡ ಮತ್ತು ಹೆಚ್ಚುವರಿ ಕಟ್ಟಡ ಸಂಕೀರ್ಣದ ವಿವಿಧ ಸ್ಥಳಗಳಲ್ಲಿ ಒಂಬತ್ತು ಸಾರ್ವತ್ರಿಕ, ಲಿಂಗ-ತಟಸ್ಥ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

[ಕೈಪಿಡಿಗಾಗಿ ಇಲ್ಲಿ ಕ್ಲಿಕ್ಕಿಸಿ]

Handbook_on_combating_gender_stereotypes (1).pdf
Preview