ಸುದ್ದಿಗಳು

ಬೇಸಿಗೆ ರಜೆ: ಇಲ್ಲಿದೆ ಸುಪ್ರೀಂ ಕೋರ್ಟ್‌ನ ರಜಾಕಾಲೀನ ಪೀಠಗಳ ವಿವರ

Bar & Bench

ಸುಪ್ರೀಂ ಕೋರ್ಟ್‌ಗೆ ಮೇ 23 ರಿಂದ ಜುಲೈ 10 ರವರೆಗೆ ಬೇಸಿಗೆ ರಜೆ ಇದ್ದು ಈ ವೇಳೆ ಪ್ರಕರಣಗಳ ವಿಚಾರಣೆ ನಡೆಸಬೇಕಿರುವ ರಜಾಕಾಲೀನ ಪೀಠಗಳನ್ನು ಇತ್ತೀಚೆಗೆ ಅದು ಸೂಚಿಸಿದೆ.

ಸುಪ್ರೀಂ ಕೋರ್ಟ್ ನಿಯಮಾವಳಿ ಆದೇಶ IIರ ನಿಯಮ 6ರ ಅಡಿ ಅಧಿಕಾರ ಚಲಾಯಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಒಟ್ಟು ಹನ್ನೆರಡು ವಿಭಾಗೀಯ ಪೀಠಗಳನ್ನು ನಾಮನಿರ್ದೇಶನ ಮಾಡಿದ್ದು ಇವು ಬೇಸಿಗೆಯ ಏಳು ವಾರಗಳ ವಿರಾಮದ ಸಮಯದಲ್ಲಿ ಪ್ರಕರಣಗಳನ್ನು ಆಲಿಸಲಿವೆ.

ಮೇ 23ರಿಂದ ಮೇ 29ರವರೆಗೆ

1. ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬೇಲಾ ಎಂ ತ್ರಿವೇದಿ;

2. ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಪಿ ಎಸ್ ನರಸಿಂಹ.

ಮೇ 30ರಿಂದ ಜೂನ್ 5ರವರೆಗೆ

1. ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ ಮತ್ತು ಬಿ ವಿ ನಾಗರತ್ನ;

2. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಪಿ ಎಸ್ ನರಸಿಂಹ.

ಜೂನ್ 6ರಿಂದ ಜೂನ್ 12ರವರೆಗೆ

1. ನ್ಯಾಯಮೂರ್ತಿ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್

ಜೂನ್ 13ರಿಂದ ಜೂನ್ 19ರವರೆಗೆ

1. ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್;

2. ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಹಿಮಾ ಕೊಹ್ಲಿ.

ಜೂನ್ 20ರಿಂದ ಜೂನ್ 26ರವರೆಗೆ

1. ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸುಧಾಂಶು ಧುಲಿಯಾ.

ಜೂನ್ 27ರಿಂದ ಜುಲೈ 3ರವರೆಗೆ

1. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ ಬಿ ಪರ್ದಿವಾಲಾ,

2. ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಎಂ ಎಂ ಸುಂದರೇಶ್‌.

ಜುಲೈ 4, 2022ರಿಂದ ಜುಲೈ 10, 2022ರವರೆಗೆ

1. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ ಕೆ ಮಹೇಶ್ವರಿ;

2. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಕೃಷ್ಣ ಮುರಾರಿ.

ರಜೆಯ ವೇಳೆ ರಿಜಿಸ್ಟ್ರಿ ತೆರೆದಿರಲಿದ್ದು ಕ್ಲೆರಿಕಲ್‌ ಅಲ್ಲದ ಸಿ ಗ್ರೂಪ್‌ ನೌಕರರನ್ನು ಹೊರತುಪಡಿಸಿ ಎಲ್ಲಾ ಅಧಿಕಾರಿಗಳು ಕೆಲಸದ ದಿನಗಳಲ್ಲಿ ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ಕರ್ತವ್ಯ ನಿರ್ವಹಿಸಬೇಕಿದೆ. ಗ್ರೂಪ್-ಸಿ ಸದಸ್ಯರು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಕರ್ತವ್ಯ ನಿರ್ವಹಿಸಬೇಕಿದೆ.