prisoners in jail 
ಸುದ್ದಿಗಳು

ಜಾಮೀನು ಷರತ್ತು ಪೂರೈಸಲಾಗದೆ ಜೈಲಲ್ಲಿರುವ ವಿಚಾರಣಾಧೀನ ಕೈದಿಗಳ ಮಾಹಿತಿ ಪಡೆಯಲು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಸೂಚನೆ

ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾದವರ ಮೇಲ್ಮನವಿ ದೀರ್ಘಕಾಲದಿಂದ ಬಾಕಿ ಉಳಿದಿದ್ದರೆ ಅಂತಹವರಿಗೆ ಜಾಮೀನು ನೀಡಲು ಸಾಧ್ಯವಾಗುವ ನೀತಿ ರೂಪಿಸಲು ಸ್ವಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪಿಐಎಲ್‌ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

Bar & Bench

ಜಾಮೀನು ಷರತ್ತು ಈಡೇರಿಸಲಾಗದೆ ಜೈಲುವಾಸ ಅನುಭವಿಸುತ್ತಿರುವ ವಿಚಾರಣಾಧೀನ ಕೈದಿಗಳ ಮಾಹಿತಿ ಒದಗಿಸಲು ಜೈಲು ಅಧಿಕಾರಿಗಳಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಎಲ್ಲಾ ಸರ್ಕಾರಗಳಿಗೆ ಆದೇಶ ನೀಡಿದೆ [ಜಾಮೀನು ಒದಗಿಸಲು ಕಾರ್ಯತಂತ್ರ ನೀತಿ ಕುರಿತಂತೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಅರ್ಜಿ].

ಅಂತಹ ಮಾಹಿತಿಯನ್ನು 15 ದಿನಗಳಲ್ಲಿ ಕೋಷ್ಟಕ ರೂಪದಲ್ಲಿ ಒದಗಿಸುವಂತೆ ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್ ಮತ್ತು ಅಭಯ್ ಎಸ್ ಓಕ್ ಅವರಿದ್ದ ಪೀಠ ಕರೆ ನೀಡಿತು. ಜೊತೆಗೆ ಎಲ್ಲಾ ಕಾನೂನು ನೆರವು ನೀಡಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಎನ್‌ಎಎಲ್‌ಎಸ್‌ಎ) ಪೀಠ ನಿರ್ದೇಶಿಸಿದೆ.

ನ್ಯಾಯಮೂರ್ತಿಗಳಾದ ಎಸ್‌ ಕೆ ಕೌಲ್ ಮತ್ತು ಅಭಯ್ ಎಸ್ ಓಕ್ ಅವರಿದ್ದ ಪೀಠವು ಅಂತಹ ದತ್ತಾಂಶವನ್ನು 15 ದಿನಗಳಲ್ಲಿ ಚಾರ್ಟ್‌ನಲ್ಲಿ ಪ್ರತಿನಿಧಿಸುವಂತೆ ಕರೆ ನೀಡಿತು. ಅಗತ್ಯವಿರುವ ಎಲ್ಲಾ ಕಾನೂನು ನೆರವು ನೀಡಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ.

"ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಸಲ್ಲಿಸಿದ್ದ ಬಾಕಿ ಅರ್ಜಿಗಳ ಸಂಖ್ಯೆ ಮತ್ತು ಸ್ಥಿತಿಗತಿಗೆ ಸಂಬಂಧಿಸಿದ ವಿವರವನ್ನು  ಗೃಹ ಸಚಿವಾಲಯದ ಸಹಯೋಗದೊಂದಿಗೆ ಎನ್‌ಎಎಲ್‌ಎಸ್‌ಎ ಸಂಗ್ರಹಿಸಬೇಕು" ಎಂದು ಪೀಠ ಆದೇಶಿಸಿದೆ.

ಟಾಟಾ ಸಮಾಜ ವಿಜ್ಞಾನ ಸಂಸ್ಥೆ (ಟಿಐಎಸ್‌ಎಸ್‌) ಮಹಾರಾಷ್ಟ್ರದಲ್ಲಿ ಇದೇ ರೀತಿಯ ಕಾರ್ಯಕ್ರಮ ಕೈಗೊಳ್ಳುತ್ತಿದ್ದು ಸಂಸ್ಥೆಯ ಸಹಾಯವನ್ನು ಕೂಡ ಪಡೆಯಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ಇ-ಪ್ರಿಸನ್‌ ಮಾಡ್ಯೂಲ್‌ಗಳಿಗೆ ಸಂಬಂಧಿಸಿದಂತೆ, ಕರ್ನಾಟಕದ ಎಲ್ಲಾ ಜೈಲುಗಳಲ್ಲಿ ಇ-ಪ್ರಿಸನ್‌ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಗಮನಿಸಿದ ನ್ಯಾಯಾಲಯ ಪೋರ್ಟಲ್‌ ಇನ್ನೂ ಚಾಲನೆಗೊಂಡಿರದ ಕಾರಣ ಇದರ ಮೂಲಕ ಕಾನೂನು ಸಹಾಯ ಪಡೆಯಲಾಗದು ಎಂದು ಹೇಳಿತು.