Cows and Supreme Court
Cows and Supreme Court  
ಸುದ್ದಿಗಳು

ಗೋಹತ್ಯೆ ನಿಷೇಧ: ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಕಾರ

Bar & Bench

ಗೋಹತ್ಯೆ ನಿಷೇಧಿಸುವ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನಿರಾಕರಿಸಿದ್ದು ಇದು ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರ ಎಂದು ಪೀಠ ತಿಳಿಸಿದೆ. [ಮಥಾಲ ಚಂದ್ರಪತಿ ರಾವ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಗೋ ಸಂತತಿಯ ಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಲು ಶಾಸಕಾಂಗವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ತಿಳಿಸಿದೆ.

ಇದು ಸೂಕ್ತ ಶಾಸಕಾಂಗವು ನಿರ್ಧರಿಸಬೇಕಾದ ವಿಚಾರ ಎನ್ನುವುದನ್ನು ನಾವು ಹೇಳಬಹುದು. ರಿಟ್‌ ನ್ಯಾಯವ್ಯಾಪ್ತಿಯಡಿಯೂ ಕೂಡ ಗೋ ಸಂತತಿಯ ಹತ್ಯೆ ನಿಷೇಧಿಸುವಂತೆ ಶಾಸಕಾಂಗವನ್ನು ನ್ಯಾಯಾಲಯವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಜುಲೈ 11ರಂದು ನೀಡಿದ ಆದೇಶದಲ್ಲಿ ಅದು ಸ್ಪಷ್ಟಪಡಿಸಿದೆ.

ಗೋಹತ್ಯೆ ನಿಷೇಧಿಸಿ ನಿರ್ದೇಶನ ನೀಡಲು ನಿರಾಕರಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆಗಸ್ಟ್ 2018ರಲ್ಲಿ ನೀಡಿದ್ದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಳಿವಿನಂಚಿನಲ್ಲಿರುವ ದೇಸಿ ಜಾನುವಾರುಗಳನ್ನುಉಳಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ಗೋಕುಲ ಯೋಜನೆ ಜಾರಿಗೆ ತರಲು ನಿರ್ದೇಶಿಸಬೇಕು. ಸ್ಥಳೀಯ ಜಾನುವಾರು ತಳಿಗಳ ಅಭಿವೃದ್ಧಿ ಮಾಡಬೇಕು, ಗೋವಧೆ ನಿಲ್ಲಿಸಬೇಕು ಎಂಬುದು ಅರ್ಜಿದಾರರ ಬೇಡಿಕೆಗಳಾಗಿದ್ದವು.