A1
A1
ಸುದ್ದಿಗಳು

ಐಟಿ ಕಾಯಿದೆಯ ʼಲೈಂಗಿಕವಾಗಿ ಸಾಬೀತುʼ ಎಂಬ ಪದ ಸಂಭೋಗಕ್ಕಷ್ಟೇ ಸೀಮಿತವಲ್ಲ, ನಗ್ನ ವೀಡಿಯೊಗೂ ಅನ್ವಯ: ಬಾಂಬೆ ಹೈಕೋರ್ಟ್

Bar & Bench

ನಗ್ನ ವೀಡಿಯೊಗಳನ್ನು ಫಾರ್ವರ್ಡ್‌ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 67 ಎ ಅಡಿಯಲ್ಲಿ ಅಪರಾಧ ಎಂದು ಬಾಂಬೆ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. [ಎಸ್ರಾರ್‌ ನಜ್ರುಲ್‌ ಅಹ್ಮದ್‌ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಸೆಕ್ಷನ್ 67ಎ ಅಡಿಯಲ್ಲಿ ʼಲೈಂಗಿಕವಾಗಿ ಸಾಬೀತುʼ ಎಂಬ ಪದ ಲೈಂಗಿಕ ಕ್ರಿಯೆಗಷ್ಟೇ ಸೀಮಿತವಲ್ಲ, ನಗ್ನ ವೀಡಿಯೋಗೂ ಅನ್ವಯವಾಗುತ್ತದೆ ಎಂದು ನ್ಯಾ. ಭಾರತಿ ಡಾಂಗ್ರೆ ಅಭಿಪ್ರಾಯಪಟ್ಟಿದ್ದಾರೆ.

“ಸೆಕ್ಷನ್‌ 67ನ್ನು ರೂಪಿಸಿರುವ ಶಾಸಕಾಂಗದ ಉದ್ದೇಶ ಎಲೆಕ್ಟ್ರಾನಿಕ್‌ ರೂಪದಲ್ಲಿ ಅಶ್ಲೀಲ ವಿಚಾರಗಳನ್ನು ಪ್ರಕಟಿಸುವುದು ಅಥವಾ ರವಾನಿಸಿರುವುದನ್ನೂ ಒಳಗೊಂಡಿದ್ದು ʼಲೈಂಗಿಕವಾಗಿ ಸಾಬೀತುʼ ಎಂಬ ಪದವನ್ನು ಕೇವಲ ಸಂಭೋಗದಲ್ಲಿ ತೊಡಗಿಕೊಳ್ಳುವ ಚಟುವಟಿಕೆ ಎಂದು ಉಲ್ಲೇಖಿಸಲು ಮಾತ್ರ ಸೀಮಿತಗೊಳಿಸಲಾಗದು” ಎಂಬುದಾಗಿ ಅವರು ತಿಳಿಸಿದ್ದಾರೆ.

ಹೀಗಾಗಿ ಮಹಿಳೆಯೊಬ್ಬಳ ನಗ್ನ ವೀಡಿಯೋವನ್ನು ಆಕೆಯ ಪತಿ ಸೇರಿದಂತೆ ಹಲವರಿಗೆ ವಾಟ್ಸಾಪ್‌ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿತು.