CJI NV Ramana
CJI NV Ramana 
ಸುದ್ದಿಗಳು

ಪ್ರಜಾಪ್ರಭುತ್ವ ಉಳಿಸಲು, ಅನ್ಯತೆಯ ಭಾವನೆ ಮೂಡಿಸುವ ಬದಲು ಬಹುತ್ವವನ್ನು ಗೌರವಿಸಬೇಕು: ಸಿಜೆಐ ರಮಣ

Bar & Bench

ವಿದ್ಯಾರ್ಥಿಗಳು ಮತ್ತು ಸಾಮಾನ್ಯರಲ್ಲಿ ಸಂವಿಧಾನ ಸಂಸ್ಕೃತಿಯನ್ನು ಪ್ರಚುರಗೊಳಿಸುವುದರ ಪರವಾಗಿ ಮಾತನಾಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ವಿಷಯವಾರು ಕಲಿಕೆಯನ್ನು ಮಾತ್ರವೇ ಅಲ್ಲದೆ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಸಂವಿಧಾನ ಮತ್ತು ಆಡಳಿತದ ಮೂಲ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಶುಕ್ರವಾರ ಹೈದರಾಬಾದ್‌ನಲ್ಲಿ ನಡೆದ ಉಸ್ಮಾನಿಯಾ ವಿಶ್ವವಿದ್ಯಾಲಯದ 82ನೇ ಘಟಿಕೋತ್ಸವ ಭಾಷಣದಲ್ಲಿ ಸಿಜೆಐ ಈ ವಿಚಾರ ತಿಳಿಸಿದರು.

ನಾಗರಿಕರು ನಮ್ಮ ಸಂವಿಧಾನದ ಸಂಪರ್ಕಕ್ಕೆ ಬರಬೇಕು. ಏಕೆಂದರೆ ಅದೇ ನಮ್ಮ ಆತ್ಯಂತಿಕ ರಕ್ಷಕನಾಗಿದೆ. ಅದಕ್ಕಾಗಿಯೇ ಸಂವಿಧಾನ ಸಂಸ್ಕೃತಿ ಪ್ರಚುರಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ವಿಷಯವಾರು ಕಲಿಕೆ ಮಾತ್ರವೇ ಅಲ್ಲದೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಸಂವಿಧಾನ ಮತ್ತು ಆಡಳಿತದ ಬಗ್ಗೆ ಮೂಲಭೂತ ವಿಚಾರಗಳನ್ನು ಪರಿಚಯಿಸಲು ಇದು ಸಕಾಲ. ಪ್ರತಿಯೊಬ್ಬರ ತಿಳಿವಳಿಕೆ ಮತ್ತು ಸಬಲೀಕರಣಕ್ಕಾಗಿ ಸಂವಿಧಾನದ ಆಲೋಚನೆಗಳನ್ನು ಸರಳೀಕರಿಸುವ ಅಗತ್ಯವಿದೆ. ನಾಗರಿಕರು ತಿಳಿವಳಿಕೆ ಪಡೆದು ಆಯ್ಕೆ ಮಾಡಲು ಸಮರ್ಥರಾದಾಗ ಸಹಭಾಗಿತ್ವದ ಪ್ರಜಾಪ್ರಭುತ್ವ ಬೆಳೆಯುತ್ತದೆ. ಅರಿವುಳ್ಳ ಆಯ್ಕೆ ಮಾಡಲು ನಮ್ಮ ಶಿಕ್ಷಣದ ಅಂತಿಮ ಗುರಿ ನಮಗೆ ಅನುವು ಮಾಡಿಕೊಡಬೇಕು ಎಂದು ಸಿಜೆಐ ಹೇಳಿದರು.

ನಮ್ಮ ನೆಲದ ಮೂಲಭೂತ ಕಾನೂನು ಮತ್ತು ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ತಿಳಿದಿರಬೇಕು., ನಾಗರಿಕರು ನಮ್ಮ ಸಂವಿಧಾನದ ಸಂಪರ್ಕಕ್ಕೆ ಬರಬೇಕು. ಏಕೆಂದರೆ ಅದೇ ನಮ್ಮ ಆತ್ಯಂತಿಕ ರಕ್ಷಕನಾಗಿದೆ ಎಂದು ಅವರು ಪ್ರಜಾಪ್ರಭುತ್ವ ಉಳಿಸಲು, ಅನ್ಯತೆಯ ಭಾವನೆ ಬೆಳೆಸುವ ಬದಲು ಬಹುತ್ವವನ್ನು ಗೌರವಿಸಬೇಕು ಎಂಬುದಾಗಿ ಕರೆ ನೀಡಿದರು.

ಅನ್ಯತೆಯ ಭಾವನೆ ಬೆಳಸುವ ಬದಲು ನಮ್ಮ ಶಿಕ್ಷಣ ವೈವಿಧ್ಯತೆಯನ್ನು ಪೋಷಿಸುವತ್ತ ನಮ್ಮನ್ನು ಕರೆದೊಯ್ಯಬೇಕು. ಜಾಗತೀಕರಣದ ಲೋಕದಲ್ಲಿ ನಾವು ಮಹತ್ವದ್ದನ್ನು ಕಳೆದುಕೊಳ್ಳಬಾರದು ಎಂದರು.

ತಮಗೆ ವಿಶ್ವವಿದ್ಯಾಲಯ ಪ್ರದಾನ ಮಾಡಿದ ಡಾಕ್ಟರ್ ಆಫ್ ಲಾಸ್ (ಆನರಿಸ್ ಕಾಸಾ) ಗೌರವದ ಬಗ್ಗೆ ಮಾತನಾಡುತ್ತಾ “ಈ ಐತಿಹಾಸಿಕ ವಿಶ್ವವಿದ್ಯಾಲಯದಿಂದ ಆನರೀಸ್‌ ಕಾಸಾ ಗೌರವ ಪದವಿಗೆ ರವೀಂದ್ರನಾಥ ಟ್ಯಾಗೋರ್, ಸಿ ರಾಜಗೋಪಾಲಾಚಾರಿ, ಪಂಡಿತ್ ಜವಾಹರ್ ಲಾಲ್ ನೆಹರೂ, ಡಾ. ರಾಜೇಂದ್ರ ಪ್ರಸಾದ್, ಡಾ. ಎಸ್. ರಾಧಾಕೃಷ್ಣನ್, ಡಾ. ಭೀಮರಾವ್ ಅಂಬೇಡ್ಕರ್ ಹಾಗೂ 42 ಮಹನೀಯರು ಭಾಜನರಾಗಿದ್ದು ಆ ಸಾಲಿಗೆ ನಾನು ಸೂಕ್ತವೇ ಅನ್ನಿಸುತ್ತಿದೆ” ಎಂದರು. ಶಿಕ್ಷಣದ ಉದ್ದೇಶ ಕುರಿತಂತೆಯೂ ಮಾತನಾಡಿದ ಅವರು ಕೇವಲ ಉದ್ಯೋಗಕ್ಕಾಗಿನ ಕೌಶಲ್ಯ ಪಡೆಯಲು ಅದು ಸೀಮಿತವಾಗಬಾರದು ಎಂದು ಕಿವಿಮಾತು ಹೇಳಿದರು.

ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ರಾಜ್ಯಪಾಲ ಡಾ. ತಮಿಳಿಸಾಯಿ ಸೌಂದರಾಜನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಭಾಷಣದ ಪ್ರತಿಗಾಗಿ ಕೆಳಗಿನ ಲಿಂಕ್‌ ಗಮನಿಸಿ:

Osmania_Univeristy_Convocation_address (1).pdf
Preview
ಇದೇ ಸಮಾರಂಭದಲ್ಲಿ ಜಾಗತೀಕರಣ, ಹವಾಮಾನ ಬದಲಾವಣೆಯ ಕುರಿತಂತೆಯೂ ಸಿಜೆಐ ಮಾತನಾಡಿದು ಅದರ ವಿವರಗಳಿಗಾಗಿ ಕೆಳಗೆ ಕ್ಲಿಕ್ಕಿಸಿ.