Uddhav Thackeray
Uddhav Thackeray  
ಸುದ್ದಿಗಳು

ಶಿವಸೇನಾ ಚಿಹ್ನೆ, ಹೆಸರು ಬಳಕೆಗೆ ತಡೆ: ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಉದ್ಧವ್ ಅರ್ಜಿ

Bar & Bench

ಶಿವಸೇನಾ ಪಕ್ಷದ ಹೆಸರು ಮತ್ತು ಅದರ ಬಿಲ್ಲು- ಬಾಣದ ಚಿಹ್ನೆಯ ಬಳಕೆ ನಿರ್ಬಂಧಿಸಿರುವ ಭಾರತದ ಚುನಾವಣಾ ಆಯೋಗದ (ಇಸಿಐ) ಆದೇಶಕ್ಕೆ ತಡೆ ನೀಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ಉದ್ಧವ್‌ ಠಾಕ್ರೆ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ]

ಮುಂಬರುವ ಉಪ ಚನಾವಣೆಗೆ ಬಳಸಲು ಭಾರತೀಯ ಚುನಾವಣಾ ಆಯೋಗ ನೀಡಿದ ಮೂರು ಆಯ್ಕೆಗೆ ಸೀಮಿತಗೊಳಿಸುವ ಬದಲು ತಮ್ಮ ಅಭ್ಯರ್ಥಿಗಳ ಆಯ್ಕೆ ಮಾಡಿದ ಚಿಹ್ನೆಯನ್ನೇ ನೀಡಬೇಕು ಎಂದು ಅವರು ಪ್ರಾರ್ಥಿಸಿದ್ದಾರೆ.

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳೆರಡೂ ಶಿವಸೇನೆ ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದವು. ಆದರೆ ಇಸಿಐ ಅಕ್ಟೋಬರ್ 8 ರಂದು ಮಧ್ಯಂತರ ಆದೇಶ ನೀಡಿ ತಾನು ಶಿವಸೇನಾ ಪಕ್ಷದ ಹೆಸರು ಮತ್ತು ಅದರ ಬಿಲ್ಲು-ಬಾಣದ ಚಿಹ್ನೆ ಯಾವ ಬಣಕ್ಕೆ ಸೇರಿದ್ದು ಎಂದು ನಿರ್ಧರಿಸುವವರೆಗೆ ಅವುಗಳನ್ನು ಬಳಸದಂತೆ ತಡೆ ಹಿಡಿದಿತ್ತು.  ರಾಜ್ಯದಲ್ಲಿ ಮುಂಬರುವ ಉಪಚುನಾವಣೆಗಳಿಗೆ ಈ ನಿರ್ಬಂಧ ಅನ್ವಯಿಸುತ್ತದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರು ಆದೇಶ ಹೊರಡಿಸಿದ್ದರು.