Dignitaries at British High Commissioner's residence 
ಸುದ್ದಿಗಳು

ನವದೆಹಲಿಯಲ್ಲಿ ಬ್ರಿಟನ್‌ ಸರ್ಕಾರದ ದುಂಡುಮೇಜಿನ ಸಭೆ; ಎಜಿ ವೆಂಕಟರಮಣಿ, ಹಿರಿಯ ವಕೀಲರಿಗೆ ಆತಿಥ್ಯ

ಬ್ರಿಟಿಷ್ ಹೈಕಮಿಷನರ್‌ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಭಾರತೀಯ ವಕಿಲ ವರ್ಗದ ಪ್ರಮುಖ ಸದಸ್ಯರು ಹಾಗೂ ಇಂಗ್ಲೆಂಡ್‌ನ ಕಾನೂನು ಪ್ರತಿನಿಧಿಗಳು ಭಾಗವಹಿಸಿದ್ದರು.

Bar & Bench

ಇಂಗ್ಲೆಂಡ್‌ ಉಪ ಪ್ರಧಾನಿ ಡೇವಿಡ್‌ ಲ್ಯಾಮಿ ಹಾಗೂ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡಿ ಕ್ಯಾಮೆರೂನ್‌ ಅವರು ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಹಾಗೂ ಭಾರತದ ವಕೀಲ ಸಮುದಾಯದ ಹಿರಿಯ ಸದಸ್ಯರಿಗೆ ದುಂಡುಮೇಜಿನ ಸಭೆ ಆಯೋಜಿಸಿ ಆತಿಥ್ಯ ನೀಡಿದರು.

ಚಹಾ ಕೂಟದ ಮೂಲಕ ಹೈಕಮಿಷನರ್‌ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು. ಭಾರತೀಯ ಕಾನೂನು ವಲಯದ ಪ್ರಮುಖ ವ್ಯಕ್ತಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಇಂಗ್ಲೆಂಡ್‌ ಮತ್ತು ಭಾರತದ ಕಾನೂನು ಕ್ಷೇತ್ರದ ನಡುವೆ ವೃತ್ತಿಪರ ಬಾಂಧವ್ಯ ಹಾಗೂ ಸಹಕಾರ ವೃದ್ಧಿ ಸಭೆಯ ಉದ್ದೇಶವಾಗಿತ್ತು.

ಹಿರಿಯ ವಕೀಲರಾದ ಸಿದ್ಧಾರ್ಥ್ ಯಾದವ್, ನಕುಲ್‌ ದೇವನ್‌ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಫಾಕ್ಸ್‌ ಮಂಡಲ್‌ ಕಾನೂನು ಸಂಸ್ಥೆಯ ಪಾಲುದಾರರಾದ ಸೋಮ್‌ ಮಂಡಲ್‌ ಉಪಸ್ಥಿತರಿದ್ದರು. ಇಂಗ್ಲೆಂಡ್‌ ಮತ್ತು ವೇಲ್ಸ್‌ ವಕೀಲ ಪರಿಷತ್‌ ಅಧ್ಯಕ್ಷರಾದ ಕ್ರಿಸ್ಟಿ ಬ್ರೈಮ್‌ಲೋ ಕೂಡ ಸಭೆಯಲ್ಲಿ ಪಾಲ್ಗೊಂಡರು.