The Wire logo 
ಸುದ್ದಿಗಳು

ಉತ್ತರ ಪ್ರದೇಶದಲ್ಲಿ ಗರೀಬ್‌ ನವಾಜ್‌ ಮಸೀದಿ ನೆಲಸಮ: ವರದಿ ಪ್ರಕಟಿಸಿದ ʼದಿ ವೈರ್‌ʼ ವಿರುದ್ಧ ಎಫ್‌ಐಆರ್‌ ದಾಖಲು

ಆಧಾರಹಿತ ಮತ್ತು ಸತ್ಯಕ್ಕೆ ದೂರವಾದ ಸಂಗತಿಗಳಿಂದ ಕೂಡಿದ ವರದಿಯನ್ನು ಸುದ್ದಿ ತಾಣವಾದ ʼದಿ ವೈರ್‌ʼ ಪ್ರಕಟಿಸಿದೆ ಎಂದು ಆರೋಪಿಸಿ ಮಹೇಂದ್ರ ಸಿಂಗ್‌ ದೂರು ನೀಡಿದ್ದಾರೆ.

Bar & Bench

ಉತ್ತರ ಪ್ರದೇಶದಲ್ಲಿ ಗರೀಬ್‌ ನವಾಜ್‌ ಮಸೀದಿ ನೆಲಸಮ ಮಾಡಿರುವುದಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ ಇಬ್ಬರು ಪತ್ರಕರ್ತರು ಮತ್ತು ಅದನ್ನು ಪ್ರಕಟಿಸಿದ ವೆಬ್‌ ತಾಣವಾದ ʼದಿ ವೈರ್‌ʼ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಗರೀಬ್‌ ನವಾಜ್‌ ಮಸೀದಿ ನೆಲಸಮ ಮಾಡಿರುವುದಕ್ಕೆ ಸಂಬಂಧಿಸಿದಂತೆ ವರದಿ ಮಾಡಿದ ಇಬ್ಬರು ಪತ್ರಕರ್ತರು ಮತ್ತು ಅದನ್ನು ಪ್ರಕಟಿಸಿದ ದಿ ವೈರ್‌ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪತ್ರಕರ್ತರಾದ ಸೀರಜ್‌ ಅಲಿ ಮತ್ತು ಮುಕುಲ್‌ ಚೌಹಾಣ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153, 153ಎ, 120-ಬಿ ಮತ್ತು 501(1)ಬಿ ಅಡಿ ದೂರು ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮ ಮತ್ತು ಸಂಬಂಧಿತ ವೇದಿಕೆಗಳಲ್ಲಿ ಹರಿದಾಡುತ್ತಿರುವ ವಿಡಿಯೊ ವರದಿಯನ್ನು ಆಧಾರರಹಿತ ಮತ್ತು ವಾಸ್ತವಿಕ ಸಂಗತಿಗಳಿಗೆ ವಿರುದ್ಧವಾಗಿದೆ. ಇದು ಧಾರ್ಮಿಕ ಸಮುದಾಯಗಳ ನಡುವೆ ವೈಷಮ್ಯ ಬಿತ್ತುವ ಯತ್ನವಾಗಿದೆ ಎಂದು ಮಹೇಂದ್ರ ಸಿಂಗ್‌ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶದ ಗರೀಬ್‌ ನವಾಜ್‌ ಮಸೀದಿ ನೆಲಸಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಈಚೆಗೆ ಅಲಾಹಾಬಾದ್‌ ಹೈಕೋರ್ಟ್‌ ರಾಜ್ಯ ಸರ್ಕಾರ ಮತ್ತು ಬಾರಬಂಕಿಯ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಅವರಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಆದೇಶಿಸಿತ್ತು.

ಬಾರಬಂಕಿಯಲ್ಲಿರುವ ಪ್ರಸಿದ್ಧ ಗರೀಬ್‌ ನವಾಜ್‌ ಮಸೀದಿ ನೆಲಸಮ ಪ್ರಶ್ನಿಸಿ ಸುನ್ನಿ ವಕ್ಫ್‌ ಮಂಡಳಿ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಕ್‌ಬಿ) ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ನಡೆಸಿತು.

ಉತ್ತರ ಪ್ರದೇಶ ಪೊಲೀಸರು ದಿ ವೈರ್‌, ಸಾಮಾಜಿಕ ಜಾಲತಾಣವಾದ ಟ್ವಿಟರ್‌, ಪತ್ರಕರ್ತರಾದ ರಾಣಾ ಆಯೂಬ್‌, ಸಬಾ ನಖ್ವಿ, ಕಾಂಗ್ರೆಸ್‌ ಮುಖಂಡರಾದ ಶಮಾ ಮೊಹಮ್ಮದ್‌, ಸಲ್ಮಾನ್‌ ನಿಜಾಮಿ ಮತ್ತು ಮಸ್ಕೂರ್‌ ಉಸ್ಮಾನಿ ಮತ್ತು ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೈರ್‌ ಮತ್ತಿತರರ ವಿರುದ್ಧ ಕೆಲವು ದಾಳಿಕೋರರು ಮುಸ್ಲಿಮ್‌ ವ್ಯಕ್ತಿಯ ಗಡ್ಡ ಕತ್ತರಿಸಿದ ವಿಡಿಯೊ ಟ್ವೀಟ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ ಟ್ವಿಟರ್‌ ವ್ಯವಸ್ಥಾಪಕ ನಿರ್ದೇಶಕ ಮನೀಷ್‌ ಮಹೇಶ್ವರಿ ಅವರಿಗೆ ಗುರುವಾರ ಮಧ್ಯಂತರ ಜಾಮೀನು ನೀಡಿದೆ.