UPSC

 
ಸುದ್ದಿಗಳು

ಕೋವಿಡ್ ಪೀಡಿತರಿಗೆ ಮತ್ತೆ ನಾಗರಿಕ ಸೇವಾ ಮುಖ್ಯ ಪರೀಕ್ಷೆ ನೀಡಲು ಕೋರಿ ಸುಪ್ರೀಂನಲ್ಲಿ ಮನವಿ: ಯುಪಿಎಸ್‌ಸಿ ವಿರೋಧ

ಮತ್ತೆ ಇಂತಹ ಅವಕಾಶ ನೀಡುವುದರಿಂದ ಖಾಲಿ ಹುದ್ದೆ ಭರ್ತಿಯಾಗದೆ ಉಳಿಯುತ್ತವೆ ಮಾತ್ರವಲ್ಲ ಅದು ಪುನರಾವರ್ತಿತ ಪರಿಣಾಮ ಬೀರುತ್ತದೆ ಎಂದು ಯುಪಿಎಸ್ಸಿ ಸಲ್ಲಿಸಿರುವ ಅಫಿಡವಿಟ್ ತಿಳಿಸಿದೆ.

Bar & Bench

ಕೋವಿಡ್‌ ಸೋಂಕಿಗೆ ತುತ್ತಾಗಿದ್ದರಿಂದ 2022ರ ಜನವರಿಯಲ್ಲಿ ನಡೆದ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗಳಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ವಿರೋಧ ವ್ಯಕ್ತಪಡಿಸಿದೆ.

ಮತ್ತೆ ಇಂತಹ ಅವಕಾಶ ನೀಡುವುದರಿಂದ ಖಾಲಿ ಹುದ್ದೆ ಭರ್ತಿಯಾಗದೆ ಉಳಿಯುತ್ತವೆ ಮಾತ್ರವಲ್ಲ ಅದು ಪುನರಾವರ್ತಿತ ಪರಿಣಾಮ ಬೀರುತ್ತದೆ ಎಂದು ಯುಪಿಎಸ್‌ಸಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ.

ಕೇಂದ್ರ ಸರ್ಕಾರಕ್ಕೆ ಮಾನವ ಸಂಪನ್ಮೂಲವನ್ನು ಪೂರೈಸುವ ಸಾಂವಿಧಾನಿಕ ಬಾಧ್ಯತೆಯನ್ನು ಪೂರೈಸಲು ಪರೀಕ್ಷೆಗಳ ವೇಳಾಪಟ್ಟಿಗೆ ಬದ್ಧವಾಗಿರುವುದು ಅವಶ್ಯಕ ಎಂದು ಅದು ಹೇಳಿದೆ.

ಕಳೆದ ವರ್ಷ ನಡೆಯಬೇಕಿದ್ದ ಮುಖ್ಯ ಪರೀಕ್ಷೆ ಕೋವಿಡ್‌ ಕಾರಣದಿಂದಾಗಿ ಈ ವರ್ಷದ ಜನವರಿಯಲ್ಲಿ ನಡೆದಿತ್ತು. ಆದರೆ ಕೋವಿಡ್‌ಗೆ ತುತ್ತಾಗಿದ್ದ ಅರ್ಜಿದಾರರು ಈ ಪರೀಕ್ಷೆಗಳಿಗೂ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾವು ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು.