Kiran Kumar, Dowry Death 
ಸುದ್ದಿಗಳು

ವಿಸ್ಮಯಾ ವರದಕ್ಷಿಣೆ ಸಾವಿನ ಪ್ರಕರಣ: ಪತಿಗೆ 10 ವರ್ಷ ಜೈಲು ಶಿಕ್ಷೆ, ₹ 12.5 ಲಕ್ಷ ದಂಡ ವಿಧಿಸಿದ ಕೇರಳ ನ್ಯಾಯಾಲಯ

ಸೆಕ್ಷನ್‌ 304 ಬಿ ಅಡಿ ಅಪರಾಧಕ್ಕಾಗಿ ಪತಿ ಕುಮಾರ್‌ಗೆ ಹತ್ತು ವರ್ಷಗಳ ಜೈಲು ಶಿಕ್ಷೆ, ಸೆಕ್ಷನ್‌ 306 ಮತ್ತು 298 ಎ ಅಪರಾಧಗಳಿಗೆ ಕ್ರಮವಾಗಿ ಆರು ಮತ್ತು ಎರಡು ವರ್ಷಗಳ ಸಜೆ ವಿಧಿಸಲಾಗಿದೆ. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಅನ್ವಯವಾಗಲಿವೆ.

Bar & Bench

ವಿಸ್ಮಯಾ ವರದಕ್ಷಿಣೆ ಸಾವು ಪ್ರಕರಣದ ಅಪರಾಧಿ ಕಿರಣ್ ಕುಮಾರ್‌ಗೆ ಕೇರಳದ ನ್ಯಾಯಾಲಯ ಮಂಗಳವಾರ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ₹ 12.5 ಲಕ್ಷ ದಂಡ ವಿಧಿಸಿದೆ.

ಕೊಲ್ಲಂನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಜಿತ್ ಕೆ ಎನ್ ಶಿಕ್ಷೆ ಪ್ರಮಾಣ ಮತ್ತು ದಂಡದ ಕುರಿತು ತೀರ್ಪು ನೀಡಿದ್ದಾರೆ. ಐಪಿಸಿ ಸೆಕ್ಷನ್ 498 ಎ (ವರದಕ್ಷಿಣೆ ಕಿರುಕುಳ), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 304 ಬಿ (ವರದಕ್ಷಿಣೆ ಸಾವು) ಅಡಿಯಲ್ಲಿ ಆರೋಪಿಯನ್ನು ದೋಷಿ ಎಂದು ನ್ಯಾಯಾಲಯ ಸೋಮವಾರ ಘೋಷಿಸಿತ್ತು.

ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಿದ ನ್ಯಾಯಾಲಯ ಸೆಕ್ಷನ್‌ 304 ಬಿ ಅಡಿ ಅಪರಾಧಕ್ಕಾಗಿ ಕುಮಾರ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಸೆಕ್ಷನ್‌ 306 ಮತ್ತು 298 ಎ ಅಪರಾಧಗಳಿಗೆ ಕ್ರಮವಾಗಿ ಆರು ಮತ್ತು ಎರಡು ವರ್ಷಗಳ ಸಜೆ ವಿಧಿಸಲಾಯಿತು. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಅನ್ವಯವಾಗಲಿವೆ.