PM Narendra Modi
PM Narendra Modi 
ಸುದ್ದಿಗಳು

[ಸಂವಿಧಾನ ದಿನ] ಯುವಜನರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ನಮ್ಮ ಹೊಣೆ: ಪ್ರಧಾನಿ ಮೋದಿ

Bar & Bench

ಯುವಜನರಿಗೆ ಸಂವಿಧಾನ ಕುರಿತು ಅರಿವು ಮೂಡಿಸುವುದರ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿವರಿಸಿದರು.

ಸುಪ್ರೀಂ ಕೋರ್ಟ್ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಮ್ಮ ಸಂವಿಧಾನ ಯುವ ಕೇಂದ್ರಿತವಾಗಿದ್ದು ರಾಷ್ಟ್ರದ ಅಭಿವೃದ್ಧಿಯನ್ನು ಯುವಜನರಿಗೆ ವಹಿಸಲಾಗಿದೆ, ಯುವಜನರಿಗೆ ಸಂವಿಧಾನವನ್ನು ಚೆನ್ನಾಗಿ ಅರ್ಥ ಮಾಡಿಸುವುದು ನಮ್ಮ ಕರ್ತವ್ಯವಾಗಿದೆ. ಯುವಕರು ಸಂವಿಧಾನದ ಬಗ್ಗೆ ಹೆಚ್ಚು ಚರ್ಚೆ ಸಂವಾದದಲ್ಲಿ ಪಾಲ್ಗೊಳ್ಳಬೇಕು. ಜೊತೆಗೆ ಸಂವಿಧಾನ ರಚನಾ ಸಭೆಯ ತ್ಯಾಗದ ಬಗ್ಗೆ ಅರಿಯಬೇಕು” ಎಂದರು.

ಸಂವಿಧಾನದ ಪೀಠಿಕೆಯ ಆರಂಭಿಕ ಪದಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು “ಭಾರತದ ಜನತೆಯಾದ ನಾವು ಎಂಬುದು ಒಂದು ಕರೆ, ಪ್ರತಿಜ್ಞೆ ನಂಬಿಕೆಯಾಗಿದೆ. ಸಂವಿಧಾನದ ಈ ಭಾವನೆ ಭಾರತೀಯ ವ್ಯವಸ್ಥೆಯ ತಿರುಳಾಗಿದ್ದು, ಇದು ಪ್ರಜಾಪ್ರಭುತ್ವದ ತಾಯಿಯನ್ನು ಸಮೃದ್ಧಗೊಳಿಸಿದೆ.  ನಾಗರಿಕರನ್ನು ಸಂತೋಷವಾಗಿಡುವುದು ಮತ್ತು ಸೌಹಾರ್ದಯುತವಾಗಿ ವರ್ತಿಸುವುದು ಆಡಳಿತ ನಡೆಸುವವರ ಪಾತ್ರವಾಗಬೇಕು” ಎಂದರು.

ಸಂವಿಧಾನವು ಮುಕ್ತವೂ, ಭವಿತವ್ಯವಾದಿಯೂ ಮತ್ತು ಪ್ರಗತಿಪರ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿರುವುದೂ ಆಗಿದೆ ಎಂದು ಅವರು ವಿವರಿಸಿದರು.

ಸಂವಿಧಾನದ ಕರಡು ರಚನೆಯಲ್ಲಿ ತೊಡಗಿದ್ದ ಮಹಿಳೆಯರ ಪಾತ್ರವನ್ನು ಎತ್ತಿ ಹಿಡಿದ ಪ್ರಧಾನಿಯವರು ದಾಕ್ಷಾಯಣಿ ವೇಲಾಯುಧನ್, ದುರ್ಗಾಬಾಯಿ ದೇಶಮುಖ್, ರಾಜಕುಮಾರಿ ಅಮೃತ್ ಕೌರ್, ಹಂಸಾ ಜೀವರಾಜ್ ಮೆಹ್ತಾ ಮತ್ತಿತರರು ಸಂವಿಧಾನ ರಚನೆಗೆ ಕೊಡುಗೆಯ ಬಗ್ಗೆ ಅರಿಯುವಂತೆ ಯುವ ಪೀಳಿಗೆಗೆ ತಿಳಿಸಿದರು.

"ನಮ್ಮ ಯುವಕರು ಅವರನ್ನು ಅರಿಯಬೇಕು ಮತ್ತು ತಮ್ಮದೇ ಪ್ರಶ್ನೆಗಳಿಗೆ ಉತ್ತರ ಪಡೆಯಬೇಕು” ಎಂದರು.