Women's Reservation Bill
Women's Reservation Bill 
ಸುದ್ದಿಗಳು

ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ಅಂಕಿತ

Bar & Bench

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನ (ನೂರಾ ಆರನೇ ತಿದ್ದುಪಡಿ) ಕಾಯಿದೆ- 2023ಕ್ಕೆ  ಅಂಕಿತ ಹಾಕಿದ್ದು ಆ ಮೂಲಕ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ.

ಹೊಸದಾಗಿ ಜಾರಿಗೆ ಬಂದ ಕಾನೂನು, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನ ಮೀಸಲಿಡುತ್ತದೆ. ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟಿರುವ ಸ್ಥಾನಗಳಿಗೂ ಮಹಿಳಾ ಮೀಸಲಾತಿ ಅನ್ವಯಿಸಲಿವೆ.

ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರು ನಿನ್ನೆ ಮಸೂದೆಗೆ ಸಹಿ ಹಾಕಿದರು, ನಂತರ ಅದನ್ನು ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿತ್ತು.  

ಸೆಪ್ಟೆಂಬರ್ 19ರಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆ ಮಂಡಿಸಿದ್ದರು. ಅದೇ ದಿನ ರಾಜ್ಯಸಭೆ, ಸರ್ವಾನುಮತದಿಂದ ಮಸೂದೆ ಅಂಗೀಕರಿಸಿತ್ತು.

ಸುಮಾರು ಎಂಟು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ಲೋಕಸಭೆ ಸೆಪ್ಟೆಂಬರ್ 20ರಂದು 452:2 ಬಹುಮತದೊಂದಿಗೆ ಮಸೂದೆಯನ್ನು ಅಂಗೀಕರಿಸಿತ್ತು. ಎಐಎಂಐಎಂ ಸಂಸದರಾದ ಅಸಾದುದ್ದೀನ್ ಒವೈಸಿ ಮತ್ತು ಇಮ್ತಿಯಾಜ್ ಜಲೀಲ್ ಅವರು ಮಸೂದೆಗೆ  ವಿರೋಧ ವ್ಯಕ್ತಪಡಿಸಿದ್ದರು.

[ರಾಷ್ಟ್ರಪತಿಗಳ ಅಧಿಸೂಚನೆಯ ಪ್ರತಿಯನ್ನು ಇಲ್ಲಿ ಓದಿ]

Women_s_Reservation_Bill__2023.pdf
Preview