ಕೊಲ್ಕತ್ತಾ ಕಾನೂನು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣ: ವಕೀಲ ಸೇರಿದಂತೆ ಮೂವರು ಆರೋಪಿಗಳು ಪೊಲೀಸ್‌ ವಶಕ್ಕೆ

ಮೂವರು ಆರೋಪಿಗಳನ್ನು ಇಂದು ಅಲಿಪೋರ್‌ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರನ್ನು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದರು.
Sexual Assault
Sexual Assault
Published on

ಕೊಲ್ಕತ್ತಾ ನಗರದಲ್ಲಿನ ಸೌತ್‌ ಕಲ್ಕತ್ತಾ ಕಾನೂನು ಕಾಲೇಜು ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಶುಕ್ರವಾರ ಮೂವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ಇಂದು ಮುಂಜಾನೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಮಾಜಿ ವಿದ್ಯಾರ್ಥಿ (ಪ್ರಸ್ತುತ ವಕೀಲ) ಮತ್ತು ಕಾಲೇಜಿನ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮೂವರು ಆರೋಪಿಗಳನ್ನು ಇಂದು ಕೊಲ್ಕತ್ತಾದ ಅಲಿಪೋರ್‌ನ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರನ್ನು ಆರೋಪಿಗಳನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದರು.

ಕೊಲ್ಕತ್ತಾ ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, "ಆರೋಪಿತ ಸಂತ್ರಸ್ತೆಯು ಜೆ, ಎಂ ಮತ್ತು ಪಿ (ಆರೋಪಿಗಳ ಮೂಲ ಹೆಸರನ್ನು ಪೊಲೀಸರು ನೀಡಿಲ್ಲ) ಎಂಬ ಮೂವರು ವ್ಯಕ್ತಿಗಳ ವಿರುದ್ಧ ಸಲ್ಲಿಸಿದ ಲಿಖಿತ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜೂನ್ 25 ರಂದು ಸಂಜೆ 7:30 ರಿಂದ ರಾತ್ರಿ 10:50 ರ ನಡುವೆ, ಆರೋಪಿಗಳಲ್ಲಿ ಓರ್ವ ಕಾನೂನು ಕಾಲೇಜಿನ ಆವರಣದೊಳಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ, ಇದು ಲಿಂಗಪ್ರವೇಶಿಕೆಯ ಅತ್ಯಾಚಾರಕ್ಕೆ ಸಮಾನವಾಗಿದೆ.

ಆರೋಪಿಗಳಾದ ಜೆ ಮತ್ತು ಎಂ ಅವರನ್ನು ಜೂನ್ 26 ರಂದು ಕೊಲ್ಕತ್ತಾದ ತಲ್ಬಗನ್ ಕ್ರಾಸಿಂಗ್ ಬಳಿ ಬಂಧಿಸಲಾಯಿತು ಮತ್ತು ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಜೂನ್ 27 ರಂದು ಮೂರನೇ ಆರೋಪಿ ಪಿ ಅವರನ್ನು ಅವರ ನಿವಾಸದಿಂದ ಬಂಧಿಸಲಾಯಿತು. ಎಲ್ಲರ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಳ್ಳಲಾಯಿತು.

Kannada Bar & Bench
kannada.barandbench.com