ಕರ್ನಾಟಕ ಹೈಕೋರ್ಟ್‌ನ 10 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಹತ್ತು ನ್ಯಾಯಮೂರ್ತಿಗಳನ್ನು ಕಾಯಂಗೊಳಿಸುವ ಸಂಬಂಧ ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
Karnataka High Court
Karnataka High Court

ಕರ್ನಾಟಕ ಹೈಕೋರ್ಟ್‌ನ 10 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸಿ ಗುರುವಾರ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದೆ.

ಈ ಸಂಬಂಧ ಎರಡು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಕಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಹತ್ತು ನ್ಯಾಯಮೂರ್ತಿಗಳ ವಿವರ:

1.ಮರಳೂರ್‌ ಇಂದ್ರಕುಮಾರ್‌ ಅರುಣ್‌

2. ಇಂಗಲಗುಪ್ಪೆ ಸೀತಾರಾಮಯ್ಯ ಇಂದಿರೇಶ್

3. ರವಿ ವೆಂಕಪ್ಪ ಹೊಸಮನಿ

4. ಸವಣೂರು ವಿಶ್ವಜಿತ್‌ ಶೆಟ್ಟಿ

5. ಶಿವಶಂಕರ್‌ ಅಮರಣ್ಣವರ್‌

6. ಮಕ್ಕಿಮನೆ ಗಣೇಶಯ್ಯ ಉಮಾ

7. ವೇದವ್ಯಾಸಾಚಾರ್‌ ಶ್ರೀಶಾನಂದ

8. ಹಂಚಾಟೆ ಸಂಜೀವ್‌ಕುಮಾರ್‌

9. ಪದ್ಮರಾಜ್‌ ನೇಮಚಂದ್ರ ದೇಸಾಯಿ

10. ಪಂಜಿಗದ್ದೆ ಕೃಷ್ಣ ಭಟ್‌

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಮೇಲೆ ಹೇಳಲಾದ ನ್ಯಾಯಮೂರ್ತಿಗಳನ್ನು ಕಾಯಂಗೊಳಿಸುವ ಸಂಬಂಧ ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಮೊದಲ ಮೂವರು ನ್ಯಾಯಮೂರ್ತಿಗಳನ್ನು ಕಳೆದ ವರ್ಷದ ಜನವರಿ 7ರಂದು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿತ್ತು. ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರು ಕಳೆದ ವರ್ಷದ ಏಪ್ರಿಲ್‌ 28ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.

ನ್ಯಾಯಮೂರ್ತಿಗಳಾದ ಎಸ್‌ ಅಮರಣ್ಣವರ್‌, ಎಂ ಜಿ ಉಮಾ, ವಿ ಶ್ರೀಶಾನಂದ, ಎಚ್‌ ಸಂಜೀವ್‌ಕುಮಾರ್‌ ಮತ್ತು ಪಿ ಎನ್‌ ದೇಸಾಯಿ ಅವರನ್ನು ಕಳೆದ ವರ್ಷದ ಮೇ 5ರಂದು ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿತ್ತು.

Also Read
ಕರ್ನಾಟಕ ಹೈಕೋರ್ಟ್‌ನ ಆರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆಯನ್ನು ಕಾಯಂಗೊಳಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

ಕೆಲದಿನದ ಹಿಂದಷ್ಟೇ ನ್ಯಾಯಮೂರ್ತಿಗಳಾದ ಎನ್‌ ಎಸ್‌ ಸಂಜಯ್‌ ಗೌಡ, ಜ್ಯೋತಿ ಮೂಲಿಮನಿ, ಆರ್‌ ನಟರಾಜ್‌, ಹೇಮಂತ್‌ ಚಂದನಗೌಡರ್‌, ಪ್ರದೀಪ್‌ ಸಿಂಗ್‌ ಯೆರೂರ್‌ ಮತ್ತು ಮಹೇಶನ್‌ ನಾಗಪ್ರಸನ್ನ ಅವರನ್ನು ಕಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿತ್ತು.

ಸದ್ಯದ ಕಾಯಂ ನ್ಯಾಯಮೂರ್ತಿಗಳ ನೇಮಕಾತಿಯೊಂದಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ 42 ಕಾಯಂ ನ್ಯಾಯಮೂರ್ತಿಗಳು ಮತ್ತು ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳು ಇದ್ದಾರೆ. ಒಟ್ಟಾರೆ ಕರ್ನಾಟಕ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಸದ್ಯ 17 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇವೆ.

Kannada Bar & Bench
kannada.barandbench.com