ಒಒಡಿ ಅಧಿಕಾರಿಗಳು ಸೇರಿದಂತೆ ರಾಜ್ಯದಲ್ಲಿ 298 ನ್ಯಾಯಾಂಗ ಅಧಿಕಾರಿಗಳ (ನ್ಯಾಯಾಧೀಶರು) ಹುದ್ದೆ ಖಾಲಿ ಇವೆ. ಇವುಗಳಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಅತಿಹೆಚ್ಚು ಅಂದರೆ ಕ್ರಮವಾಗಿ 60 ಮತ್ತು 90 ಹುದ್ದೆಗಳು ಖಾಲಿ ಇವೆ.
ಈ ಎರಡು ಜಿಲ್ಲೆಗಳ ನಂತರ ಅತಿ ಹೆಚ್ಚು ನ್ಯಾಯಾಧೀಶರು ಖಾಲಿ ಇರುವ ಮೂರನೇ ಜಿಲ್ಲೆ ಮೈಸೂರು. ಅಲ್ಲಿ 17 ನ್ಯಾಯಾಂಗ ಅಧಿಕಾರಿಗಳ ಹುದ್ದೆಗಳು ಭರ್ತಿಯಾಗಬೇಕಿದೆ. ನಂತರದ ಸ್ಥಾನದಲ್ಲಿ ಬೆಳಗಾವಿ (16 ಹುದ್ದೆ ಖಾಲಿ) ಐದನೇ ಸ್ಥಾನದಲ್ಲಿ ಮಂಡ್ಯ (15) ಇದೆ. ರಾಜ್ಯದಲ್ಲಿ ಒಟ್ಟು ಖಾಲಿ ಇರುವ ಒಒಡಿ ಅಧಿಕಾರಿಗಳ ಸಂಖ್ಯೆ 50.
ಜಿಲ್ಲಾ ನ್ಯಾಯಾಲಯ, ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಗಳಲ್ಲಿ ಖಾಲಿ ಇರುವ ನ್ಯಾಯಾಂಗ ಅಧಿಕಾರಿ (ನ್ಯಾಯಾಧೀಶರು) ಶಿರಸ್ತೇದಾರ (ಸಿಎಂಒ) ಶೀಘ್ರಲಿಪಿಕಾರ, ಬೆರಳಚ್ಚುಗಾರ, ಆದೇಶ ಜಾರಿಕಾರರು ಹಾಗೂ ಇತರ ಡಿ ಗ್ರೂಪ್‌ಗಳು ಖಾಲಿ ಇರುವ ಬಗ್ಗೆ ಹಾಗೂ ಭರ್ತಿ ಮಾಡಿಕೊಂಡ ಬಗ್ಗೆ ವಿವರ ನೀಡುವಂತೆ ಬೆಳಗಾವಿ ಮೂಲದ ವಕೀಲ ಭೀಮನಗೌಡ ಜಿ ಪರಗೊಂಡ ಅವರು ಆರ್‌ಟಿಐ ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಮತ್ತು ರಾಜ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ರಾಜ್ಯದಲ್ಲಿ ಪ್ರಸ್ತುತ ಒಟ್ಟು 1087 ನ್ಯಾಯಾಂಗ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು 298 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದ್ದಾರೆ.
ಶಿರಸ್ತೇದಾರ್ (CMO) ಸ್ಟೆನೋಗ್ರಾಫರ್, ಟೈಪಿಸ್ಟ್, ಪ್ರೊಸೆಸ್ ಸರ್ವರ್ ಮತ್ತು ಗ್ರೂಪ್ ಡಿ ಹುದ್ದೆಗಳ ನೇಮಕಾತಿಯು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ಯೂನಿಟ್ ಮುಖ್ಯಸ್ಥರ ವ್ಯಾಪ್ತಿ ಬರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಹುದ್ದೆ ಖಾಲಿ ಇರುವ ನ್ಯಾಯಾಲಯಗಳಿಗೆ ಭರ್ತಿ ಮಾಡಲಾಗುತ್ತದೆ. ಭರ್ತಿ ಮಾಡಲಾದ ಹುದ್ದೆಗಳ ಸಂಖ್ಯೆಯ ಮಾಹಿತಿ ಆಯಾ ಜಿಲ್ಲಾ ನ್ಯಾಯಾಲಯಗಳಲಿದೆ. ಆದ್ದರಿಂದ ವಕೀಲರು ಅರ್ಜಿಯಲ್ಲಿ ಕೋರಿರುವ ಈ ಭಾಗವನ್ನು ಆರ್‌ಟಿಐ ಕಾಯಿದೆ 2005 ರ ಸೆಕ್ಷನ್ 6 (3) ಅಡಿಯಲ್ಲಿ ಎಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳಿಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ನ್ಯಾಯಿಕ ವಲಯದಲ್ಲಿ ನ್ಯಾಯಾಂಗ ಅಧಿಕಾರಿಗಳ ಹುದ್ದೆ ಖಾಲಿ ಎಂಬುದು ಒಂದು ಸಮಸ್ಯೆಯಾಗಿದ್ದು ಪದೇ ಪದೇ ಈ ಬಗ್ಗೆ ನ್ಯಾಯಾಂಗ ವರ್ಗದಲ್ಲಿ ಚರ್ಚೆಯಾಗುತ್ತಿರುತ್ತದೆ. ಕೆಳಹಂತದ ನ್ಯಾಯಾಲಯಗಳಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೆ ಈ ಸಮಸ್ಯೆ ಬಗ್ಗೆ ಆಗಾಗ ನ್ಯಾಯಾಧೀಶರು, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಗಮನ ಸೆಳೆಯುತ್ತಲೇ ಇರುತ್ತಾರೆ.
ಮಾಹಿತಿ ವಿವರ ಇಲ್ಲಿದೆ: