ಹೇಮಾ ಸಮಿತಿ ವರದಿ ಬಳಿಕ ಈವರೆಗೆ 40 ಎಫ್ಐಆರ್‌ ದಾಖಲು: ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ

ನ್ಯಾಯಾಲಯ ನೇಮಿಸಿದ ನೋಡಲ್ ಅಧಿಕಾರಿಯ ಮುಂದೆ 8 ಹೊಸ ದೂರುಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ 5 ಎಫ್ಐಆರ್‌ಗಳಾಗಿ ದಾಖಲಾಗಿದ್ದು ಒಟ್ಟು ಎಫ್ಐಆರ್‌ಗಳ ಸಂಖ್ಯೆ 40ಕ್ಕೆ ಏರಿಕೆಯಾಗಿದೆ ಎಂದು ಎಜಿ ವಿವರಿಸಿದರು.
ಹೇಮಾ ಸಮಿತಿ ವರದಿ ಬಳಿಕ ಈವರೆಗೆ 40 ಎಫ್ಐಆರ್‌ ದಾಖಲು: ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ
Published on

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ವ್ಯಾಪಕ ಲೈಂಗಿಕ ಕಿರುಕುಳ ನಡೆಯುತ್ತಿರುವ ವಿಚಾರ ಬಹಿರಂಗಪಡಿಸಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿದ ನಂತರ ಇದುವರೆಗೂ 40 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕೇರಳ ಸರ್ಕಾರ ಇಂದು ಕೇರಳ ಹೈಕೋರ್ಟ್‌ಗೆ ತಿಳಿಸಿದೆ [ನವಾಸ್‌ ಎ ಅಲಿಯಾಸ್‌ ಪೈಚಿರ ನವಾಸ್‌ ಮತ್ತು ಕೇರಳ ಸರ್ಕಾರ ಹಾಗೂ ಸಂಬಂಧಿತ ಪ್ರಕರಣಗಳು].

ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಸಿ ಎಸ್ ಸುಧಾ ಅವರಿದ್ದ ವಿಶೇಷ ಪೀಠಕ್ಕೆ ಈ ವಿಚಾರ ತಿಳಿಸಲಾಗಿದೆ.

Also Read
ನ್ಯಾ. ಹೇಮಾ ಸಮಿತಿ ವರದಿ ಕುರಿತು ರಾಜ್ಯ ಸರ್ಕಾರದ ನಿಷ್ಕ್ರಿಯತೆ ದಿಗ್ಭ್ರಮೆ ಮೂಡಿಸಿದೆ: ಕೇರಳ ಹೈಕೋರ್ಟ್ ಕಿಡಿ

ಕಳೆದ ಆಗಸ್ಟ್‌ನಲ್ಲಿ ವರದಿ ಸಾರ್ವಜನಿಕವಾಗಿ ಬಿಡುಗಡೆಯಾಗಿತ್ತು. ಇದರಿಂದಾಗಿ ಮಾಲಿವುಡ್‌ನಲ್ಲಿ ನಟರು ನಿರ್ದೇಶಕರು ಹಾಗೂ ಇತರ ಚಿತ್ರಕರ್ಮಿಗಳ ವಿರುದ್ಧ ಲೈಂಗಿಕ ಕಿರುಕುಳ, ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಸಂಬಂಧಿತ ಆರೋಪಗಳು ಬಹಿರಂಗಗೊಂಡು ಅಲ್ಲೋಲ- ಕಲ್ಲೋಲ ಉಂಟಾಗಿತ್ತು.

ಪ್ರಕರಣಗಳ ತನಿಖೆಗೆ ನಿಯೋಜಿಸಲಾದ ವಿಶೇಷ ತಂಡದ ಮುಂದೆ ಸಲ್ಲಿಸಲಾಗಿರುವ ದೂರುಗಳ ಕುರಿತಾದ ಪ್ರಗತಿಗೆ ಸಂಬಂಧಿಸಿದ ಟಿಪ್ಪಣಿಯನ್ನು ಇಂದು ಕೇರಳದ ಅಡ್ವೊಕೇಟ್ ಜನರಲ್ (ಎಜಿ) ಗೋಪಾಲಕೃಷ್ಣ ಕುರುಪ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು.

Also Read
ಹೇಮಾ ಸಮಿತಿ ವರದಿ: ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ಸ್ಥಾಪಿಸಿದ ಕೇರಳ ಹೈಕೋರ್ಟ್

ಎಸ್‌ಐಟಿ ಈಗಾಗಲೇ ಒಟ್ಟು 35 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ದೂರುಗಳು ಮತ್ತು ಸಾಕ್ಷಿ ಹೇಳಿಕೆಗಳನ್ನು ಕ್ರೋಢೀಕರಿಸಲು ನ್ಯಾಯಾಲಯ ನೇಮಿಸಿದ ನೋಡಲ್ ಅಧಿಕಾರಿಯ ಮುಂದೆ 8 ಹೊಸ ದೂರುಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ 5 ಎಫ್‌ಐಆರ್‌ಗಳು ದಾಖಲಾಗಿದ್ದು ಒಟ್ಟು ಎಫ್‌ಐಆರ್‌ಗಳ ಸಂಖ್ಯೆ 40ಕ್ಕೆ ಏರಿದೆ ಎಂದು ಅವರು ವಿವರಿಸಿದರು.

ಚಿತ್ರೋದ್ಯಮದಲ್ಲಿ ಸುರಕ್ಷಿತ, ನ್ಯಾಯಸಮ್ಮತ ಕೆಲಸದ ಸ್ಥಳಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ರೂಪಿಸಲು ಮುಂದಾಗಿರುವ ಕಾನೂನಿನ ಕರಡಿನ ಕುರಿತು ನ್ಯಾಯಾಲಯ ಇಂದು ಸಂಕ್ಷಿಪ್ತವಾಗಿ ಚರ್ಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 6, 2024 ರಂದು ನಡೆಯಲಿದೆ.

Kannada Bar & Bench
kannada.barandbench.com