ಅನ್ನದಾತರ ಪ್ರತಿಭಟನೆ: ಸುಪ್ರೀಂ ಕೋರ್ಟ್‌ನಲ್ಲಿ ಪಕ್ಷಕಾರರಾದ 42 ರೈತ ಸಂಘಟನೆಗಳು
Supreme Court, Farmers protest

ಅನ್ನದಾತರ ಪ್ರತಿಭಟನೆ: ಸುಪ್ರೀಂ ಕೋರ್ಟ್‌ನಲ್ಲಿ ಪಕ್ಷಕಾರರಾದ 42 ರೈತ ಸಂಘಟನೆಗಳು

ದೆಹಲಿ ಗಡಿಯಿಂದ ರೈತರನ್ನು ತೆರವುಗೊಳಿಸುವಂತೆ ಕೋರಿರುವ ಅರ್ಜಿಯಲ್ಲಿ 42 ರೈತ ಸಂಘಗಳನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಲಾಗಿದೆ.

ದೆಹಲಿ-ಎನ್‌ಸಿಆರ್‌ ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯಲ್ಲಿ 42 ರೈತ ಸಂಘಗಳನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಲಾಗಿದೆ. ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನಾ ನಿರತರಾಗಿರುವ ಎಲ್ಲಾ ಸಂಘಟನೆಗಳನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಲು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಅವಕಾಶ ನೀಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಕೃಷಿಕರ ನಡುವಿನ ಬಿಕ್ಕಟ್ಟು ಪರಿಹರಿಸಲು ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದೆ. ದೆಹಲಿ-ಎನ್‌ಸಿಆರ್‌ ಗಡಿ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರನ್ನು ತೆರವುಗೊಳಿಸುವ ಸಂಬಂಧ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆ ನಡೆಸುವುದರ ಜೊತೆಗೆ ಮೇಲಿನ ಜವಾಬ್ದಾರಿಯನ್ನೂ ಸುಪ್ರೀಂ ಕೋರ್ಟ್‌ ತೆಗೆದುಕೊಂಡಿದೆ.

ವಕೀಲ ಓಂ ಪ್ರಕಾಶ್ ಪರಿಹಾರ್ ಮೂಲಕ ಕಾನೂನು ವಿದ್ಯಾರ್ಥಿ ರಿಷಬ್ ಶರ್ಮಾ, ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಈ ಕೆಳಗಿನ ರೈತ ಸಂಘಗಳನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಲಾಗಿದೆ.

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮತ್ತದರ ಸಿಧುಪುರ್, ರಾಹೆವಾಲ್, ಲಾಖೊವಾಲ್, ಡಕೌಂಡಾ, ಭಾನು, ಟಿಕಾಯತ್, ದೋಬಾ, ಕಡಿಯನ್, ಮಾನ್ಸಾ, ಮಾನ್, ಚಧುನಿ ಜಟ್ಟನ್, ಮುಬಾರಕ್ಪುರ್, ಅಂಬಾವ್ತಾ ಶಾಖೆಗಳು.

ಬಿಕೆಯು ಏಕ್ತಾ ಉಗ್ರಾಹ

ಬಿಕೆಯು ಕ್ರಾಂತಿಕಾರಿ ವಿಪಿಒ ಫುಲ್

ಜಮ್ಹೂರಿ ಕಿಸಾನ್ ಸಭಾ

ಕುಲ್ ಹಿಂದ್ ಕಿಸಾನ್ ಫೆಡರೇಶನ್

ಕ್ರಾಂತಿಕಾರಿ ಕಿಸಾನ್ ಯೂನಿಯನ್

ಕುಲ್ ಹಿಂದ್ ಕಿಸಾನ್ ಸಭಾ

ಕೀರ್ತಿ ಕಿಸಾನ್ ಯೂನಿಯನ್

ಪಂಜಾಬ್ ಕಿಸಾನ್ ಯೂನಿಯನ್

ಕುಲ್ ಹಿಂದ್ ಕಿಸಾನ್ ಸಭಾ

ಕಿಸಾನ್ ಸಂಘರ್ಷ ಸಮಿತಿ

ಆಜಾದ್ ಕಿಸಾನ್ ಸಂಘರ್ಷ್

ಜೈ ಕಿಸಾನ್ ಆಂದೋಲನ್

ಕಿಸಾನ್ ಮಜ್ದೂರ್ ಸಂಘರ್ಷ್

ಮಾಜಾ ಕಿಸಾನ್ ಸಮಿತಿ

ಇಂಡಿಯನ್ ಫಾರ್ಮರ್ ಅಸೋಸಿಯೇಶನ್ ಆಫ್ ಇಂಡಿಯಾ

ಭಾರತೀಯ ಕಿಸಾನ್ ಮಂಚ್

ಲೋಕ್‌ ಭಲಾಯಿ ಇನ್ಸಾಫ್ ವೆಲ್ಫೇರ್ ಸೊಸೈಟಿ

ದೋಬಾ ಕಿಸಾನ್ ಸಮಿತಿ

ದೋಬಾ ಕಿಸಾನ್ ಸಂಘರ್ಷ್ ಸಮಿತಿ

ಗನ್ನಾ ಕಿಸಾನ್ ಸಮಿತಿ

ಆಜಾದ್ ಕಿಸಾನ್ ಸಮಿತಿ, ದೋಬಾ

ಕುಲ್ ಹಿಂದ್ ಕಿಸಾನ್ ಫೆಡರೇಶನ್

ಕಿಸಾನ್ ಬಚಾರಚ್ ಮೋರ್ಚಾ

ಕುಲ್ ಹಿಂದ್ ಕಿಸಾನ್ ಸಂಘರ್ಷ ತಾಲ್ಮೇಲ್ ಸಮಿತಿ

ಸರ್ವ ಹಿಂದ್ ರಾಷ್ಟ್ರೀಯ ಕಿಸಾನ್

ಮಹಿಳಾ ಕಿಸಾನ್ ಅಧಿಕಾರ್ ಮಂಚ್

ರಾಷ್ಟ್ರೀಯ ಕಿಸಾನ್ ಮಹಾಸಂಘ್

No stories found.
Kannada Bar & Bench
kannada.barandbench.com